Last Updated:
ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ (Ajith Kumar) ಸಿನಿಮಾ ಜೊತೆಗೆ ಕಾರ್ ರೇಸಿಂಗ್‌ನಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಸಿನಿಮಾಗಳ ನಡುವೆಯೂ ರೇಸಿಂಗ್ ಮೇಲಿನ ತಮ್ಮ ಆಸಕ್ತಿಯನ್ನು ಮುಂದುವರಿಸಿರುವ ನಟ ಇದೀಗ ಯುರೋಪ್‌ನಲ್ಲಿ ನಡೆದ ಕಾರು ರೇಸಿಂಗ್ ಸ್ಪರ್ಧೆಯಲ್ಲಿ ಅಪಘಾತಕ್ಕೊಳಗಾಗಿದ್ದಾರೆ.
ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ (Ajith Kumar) ಸಿನಿಮಾ ಜೊತೆಗೆ ಕಾರ್ ರೇಸಿಂಗ್‌ನಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಸಿನಿಮಾಗಳ ನಡುವೆಯೂ ರೇಸಿಂಗ್ ಮೇಲಿನ ತಮ್ಮ ಆಸಕ್ತಿಯನ್ನು ಮುಂದುವರಿಸಿರುವ ನಟ ಇದೀಗ ಯುರೋಪ್‌ನಲ್ಲಿ ನಡೆದ ಕಾರು ರೇಸಿಂಗ್ ಸ್ಪರ್ಧೆಯಲ್ಲಿ ಅಪಘಾತಕ್ಕೊಳಗಾಗಿದ್ದಾರೆ. ಮೈಕೆಲಿನ್ ಲೆ ಮ್ಯಾನ್ಸ್ ಕಪ್ ರೇಸ್ ವೇಳೆ ಅಜಿತ್ ಚಲಾಯಿಸುತ್ತಿದ್ದ ಕಾರು ತಿರುವಿನಲ್ಲಿ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿದೆ. ಕಾರು ಟ್ರ್ಯಾಕ್‌ನ ಬದಿಗೆ ತೆರಳಿ ಸಿಲುಕಿಕೊಂಡರೂ, ಅದೃಷ್ಟವಶಾತ್ ಅಜಿತ್ ಕುಮಾರ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.














