Actor: 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ! ಖ್ಯಾತ ಕಿರುತೆರೆ ನಟ ಅರೆಸ್ಟ್ | | ACTPnews

ನಟ ರೋಹಿತ್ ಚಾಂಡೆಲ್


Last Updated:

ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿದ್ದ ನಟ ರೋಹಿತ್ ಚಾಂಡೆಲ್ ವಿರುದ್ಧ ಕೇಳಿಬರುತ್ತಿರುವ ಈ ಪ್ರಕರಣ ಮನರಂಜನಾ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ

ನಟ ರೋಹಿತ್ ಚಾಂಡೆಲ್
ನಟ ರೋಹಿತ್ ಚಾಂಡೆಲ್

16 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಖ್ಯಾತ ಹಿಂದಿ ಕಿರುತೆಗೆ ನಟನನ್ನು ಬಂಧಿಸಲಾಗಿದೆ. ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿದ್ದ ನಟ ರೋಹಿತ್ ಚಾಂಡೆಲ್ ವಿರುದ್ಧ ಕೇಳಿಬರುತ್ತಿರುವ ಈ ಪ್ರಕರಣ ಮನರಂಜನಾ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಬಾಲಕಿಯ ಕುಟುಂಬದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಪೋಕ್ಸೋ ಕಾಯ್ದೆಯಡಿ ನಟನನ್ನು ಬಂಧಿಸಲಾಗಿದೆ. 

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ರೋಹಿತ್ ಚಾಂಡೆಲ್ ವಿರುದ್ಧ ಅಪ್ರಾಪ್ತೆಯ ಮೇಲಿನ ಲೈಂಗಿಕ ಕಿರುಕುಳ, ಹಿಂಬಾಲಿಕೆ, ಹಾಗೂ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪೋಕ್ಸೋ ಕಾಯ್ದೆ ಸೇರಿದಂತೆ ಸಂಬಂಧಿತ ಭಾರತೀಯ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆಯೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಬೆಳವಣಿಗೆ ಕಿರುತೆರೆ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ದೂರಿನಲ್ಲಿ ಏನಿದೆ?

ಪೊಲೀಸರ ಮಾಹಿತಿ ಪ್ರಕಾರ, ಜುಲೈ 5ರಂದು ಪೂರ್ವ ಮುಂಬೈನ ವಸತಿ ಪ್ರದೇಶದ ಬಳಿ ಬಾಲಕಿಯನ್ನು ಆರೋಪಿ ಸಂಪರ್ಕಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಾಲಕಿಯನ್ನು ಹಿಂಬಾಲಿಸುವುದು, ಪದೇ ಪದೇ ಸಂಪರ್ಕಿಸಲು ಪ್ರಯತ್ನಿಸುವುದು, ಕಿರುಕುಳ ನೀಡುವುದು ಹಾಗೂ ಹಲ್ಲೆ ನಡೆಸಿದ ಆರೋಪಗಳು ದಾಖಲಾಗಿವೆ.

ದೂರು ದಾಖಲಾದ ನಂತರ ಪೊಲೀಸರು ಪ್ರಕರಣದ ವಿವಿಧ ಆಯಾಮಗಳನ್ನು ಪರಿಶೀಲಿಸುತ್ತಿದ್ದು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿಸಿದ್ದಾರೆ. ತನಿಖೆಯ ಭಾಗವಾಗಿ ಸಂಬಂಧಪಟ್ಟವರ ಹೇಳಿಕೆಗಳನ್ನು ಕೂಡ ದಾಖಲಿಸಲಾಗುತ್ತಿದೆ.

ಬಂಧನದ ಬಳಿಕ ಏನಾಯಿತು?

ಪೊಲೀಸರು ರೋಹಿತ್ ಚಾಂಡೆಲ್ ಅವರನ್ನು ಮುಂಬೈನ ದಹಿಸರ್‌ನಲ್ಲಿರುವ ಅವರ ನಿವಾಸದಿಂದ ಬಂಧಿಸಿದ್ದಾರೆ. ಬಳಿಕ ವಿಶೇಷ ಪೋಕ್ಸೋ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆಗಾಗಿ ನ್ಯಾಯಾಲಯವು ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ರೋಹಿತ್ ಚಾಂಡೆಲ್ ಯಾರು?

ರೋಹಿತ್ ಚಾಂಡೆಲ್ ಹಿಂದಿ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ನಟ. ‘ಕಾಶಿಬಾಯಿ ಬಾಜಿರಾವ್ ಬಲ್ಲಾಳ್’ ಧಾರಾವಾಹಿಯಲ್ಲಿ ಬಾಜಿರಾವ್ ಪಾತ್ರದ ಮೂಲಕ ಅವರು ಹೆಚ್ಚು ಜನಪ್ರಿಯತೆ ಗಳಿಸಿದ್ದರು. ನಂತರ ‘ಪಾಂಡ್ಯ ಸ್ಟೋರ್’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು.

ಇದರ ಜೊತೆಗೆ ತಮನ್ನಾ, ಯೇ ಉನ್ ದಿನೋನ್ ಕಿ ಬಾತ್ ಹೈ, ಶಕ್ತ ಸೇರಿದಂತೆ ಹಲವು ಧಾರಾವಾಹಿಗಳಲ್ಲೂ ಅವರು ಅಭಿನಯಿಸಿದ್ದಾರೆ. ಡಿಜಿಟಲ್ ವೇದಿಕೆಯಲ್ಲೂ ಎಸ್ಕೇಪ್ ಲೈವ್ ವೆಬ್ ಸಿರೀಸ್‌ನಲ್ಲಿ ನಟಿಸಿದ್ದರು.

ನಟನೆಗೆ ಬರುವ ಮೊದಲು ರೋಹಿತ್ ಚಾಂಡೆಲ್ ವೃತ್ತಿಪರ ಕ್ರಿಕೆಟ್ ಆಟಗಾರರಾಗಿದ್ದರು. ಜೊತೆಗೆ ಸಮರ ಕಲೆಗಳಲ್ಲಿಯೂ ತರಬೇತಿ ಪಡೆದಿದ್ದರು. ಹಲವು ಆಡಿಷನ್‌ಗಳಲ್ಲಿ ಅವಕಾಶ ಸಿಗದಿದ್ದರೂ ಪ್ರಯತ್ನವನ್ನು ಕೈಬಿಡದೆ ಮುಂದುವರಿಸಿದ ಅವರು, 2014ರಲ್ಲಿ ‘ಅಕ್ಬರ್ ಬೀರ್ಬಲ್’ ಧಾರಾವಾಹಿಯ ಮೂಲಕ ತಮ್ಮ ನಟನಾ ಜೀವನ ಆರಂಭಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed