Tirumala Security: ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೆ ಎಚ್ಚರಿಕೆ; ತಿರುಮಲದಲ್ಲಿ ಹೊಸ ಭದ್ರತಾ ನಿಯಮಗಳು ಜಾರಿ! | ಜ್ಯೋತಿಷ್ಯ | ACTPnews

ತಿರುಮಲ ಶ್ರೀವಾರಿಗೆ ಭಕ್ತರಿಗೆ ಟಿಟಿಡಿ ಸೂಚನೆ


Last Updated:

ಟಿಟಿಡಿ ತಿರುಮಲದಲ್ಲಿ ಭದ್ರತೆ ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಬಳಸುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ, ಸಿಸಿಟಿವಿ ಕಡ್ಡಾಯಗೊಳಿಸಿ ಕಠಿಣ ಕ್ರಮ ಕೈಗೊಳ್ಳಲಿದೆ.

ತಿರುಮಲ ಶ್ರೀವಾರಿಗೆ ಭಕ್ತರಿಗೆ ಟಿಟಿಡಿ ಸೂಚನೆ
ತಿರುಮಲ ಶ್ರೀವಾರಿಗೆ ಭಕ್ತರಿಗೆ ಟಿಟಿಡಿ ಸೂಚನೆ

ಭದ್ರತೆಯ ಸವಾಲುಗಳನ್ನು (Tirumala Services) ಎದುರಿಸಲು ಟಿಟಿಡಿ (TTD) ಆಧುನಿಕ ತಂತ್ರಜ್ಞಾನ ಮೊರೆ ಹೋಗುತ್ತಿದೆ. ತಿರುಮಲ ಬೀದಿಗಳಲ್ಲಿ ಮಾತ್ರವಲ್ಲದೆ, ಇಡೀ ಕ್ಷೇತ್ರದಲ್ಲಿಯೇ ನಿಗಾ ವಹಿಸಲು ಬಳಕೆ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಭದ್ರತೆಯ ಕಾರಣದಿಂದ (CCTV) ಏಕೀಕೃತ ವಿಧಾನವನ್ನು ಜಾರಿ ಮಾಡಲು ನಿರ್ಧಾರ ತೆಗೆದುಕೊಂಡಿದೆ.

ತಿರುಮಲ ಭದ್ರತೆ ಟಿಟಿಡಿಗೆ ಮಾತ್ರ ರಾಜ್ಯ ಸರ್ಕಾರಕ್ಕೂ ಮಹತ್ವದ ವಿಚಾರವಾಗಿದೆ. ಆದ್ದರಿಂದಲೇ ತಿರುಮಲ ಭದ್ರತೆ ಬಗ್ಗೆ ನಿರಂತರವಾಗಿ ಸೆಕ್ಯೂರಿಟಿ ಆಡಿಟ್ ನಡೆಸಲಾಗುತ್ತದೆ. ಈಗ ಮತ್ತಷ್ಟು ಆದ್ಯತೆಯನ್ನು ಅಲ್ಲಿನ ರಾಜ್ಯ ಸರ್ಕಾರ ನೀಡುತ್ತಿದೆ. ಹೊಸ ತಂತ್ರಜ್ಞಾನದೊಂದಿಗೆ ಭದ್ರತೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವ ಕಡೆಗೆ ಗಮನವಹಿಸಿದೆ. ತಿರುಮಲ ಬೀದಿಗಳಲ್ಲಿ ಮಾತ್ರವಲ್ಲದೆ, ಇಡೀ ಕ್ಷೇತ್ರದಲ್ಲಿಯೇ ನಿಗಾ ವಹಿಸಲು ಬಳಕೆ ಮಾಡಿಕೊಳ್ಳುತ್ತಿದೆ.

ಈ ಕಾರಣದಿಂದ ತಿರುಮಲದಲ್ಲಿ ಭದ್ರತೆಯೂ ಮತ್ತಷ್ಟು ಹೆಚ್ಚಾಗಲಿದೆ. ಭಕ್ತರಿಗೆ ಮಾತ್ರ ಅಲ್ಲ, ಭದ್ರತೆಗೂ ಕೂಡ ಇಲ್ಲಿನ ಆಡಳಿತ ವರ್ಗ ಫೋಕಸ್ ಮಾಡುತ್ತಿದೆ. ತಿರುಮಲದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವವರ ಮೇಲೆ ಕಣ್ಣಿಡಲು ಮುಂದಾಗಿದೆ. ಅಂಗಡಿಗಳು, ಹೋಟೆಲ್‌ಗಳು, ಕಾರ್ಮಿಕರಲ್ಲಿ ಸೇರಿದಂತೆ ಜನರ ನಡುವೆ ಅನುಮಾನಾಸ್ಪದವಾಗಿ ಯಾರೇ ಕಂಡು ಬಂದರೂ ವಿಚಾರಣೆ ನಡೆಸಲು ಮುಂದಾಗುತ್ತಿದೆ.

ತಿರುಮಲ ಬೆಟ್ಟದ ಮೇಲೆ 1299 ಅಂಗಡಿಗಳು ಇದೆ. ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಸುಮಾರು 588ರಷ್ಟಿದೆ ಎಂದು ಟಿಟಿಡಿ ಲೆಕ್ಕಾಚಾರಗಳು ಹೇಳ್ತಿದೆ. ತಿರುಮಲದಲ್ಲಿ ಶಾಪ್, ಹೋಟೆಲ್, ಫಾಸ್ಟ್ ಫುಡ್ ಸೆಂಟರ್‌ಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬಂದು ಕೆಲಸ ಮಾಡುತ್ತಿರುವವರ ಸಂಖ್ಯೆ ಸುಮಾರು ಸಾವಿರ ಮಂದಿಯಷ್ಟಿದ್ದಾರೆ. ಇವರಿಗೆ ತಿರುಮಲದಲ್ಲಿ ಉಳಿದುಕೊಳ್ಳಲು ಅನುಮತಿ ಇಲ್ಲ. ತಿರುಪತಿಯಿಂದ ಬಂದ ಪ್ರತಿದಿನ ವಾಪಸ್ ಆಗಲೇಬೇಕು. ಆದರೆ ಕೆಲವರು ಭಕ್ತರ ನಡುವೆ ಇದ್ದು, ಸಣ್ಣ ಸಣ್ಣ ವ್ಯಾಪಾರ ಮಾಡುತ್ತಿರುತ್ತಾರೆ. ಆ ಮೂಲಕ ಅನಧಿಕೃತವಾಗಿ ಜೀವನ ನಡೆಸುತ್ತಿದ್ದಾರೆ. ಇಂತಹವರ ಸಂಖ್ಯೆ ಸುಮಾರು ಒಂದು ಸಾವಿರ ಮಂದಿ ಇದ್ದಾರೆ ಎಂದು ಅಂದಾಜು ಮಾಡಲಾಗಿದೆ.

ತಿರುಮಲದಲ್ಲಿ ಅದರಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳಲ್ಲಿ, ಭಕ್ತರ ಹೆಸರಿನಲ್ಲಿಯೇ ಅನಧಿಕೃತವಾಗಿ ನಿಯಮಗಳಿಗೆ ವಿರುದ್ಧವಾಗಿ ಸಣ್ಣ ಸಣ್ಣ ವ್ಯಾಪಾರ ಮಾಡುತ್ತಾರೆ. ಮತ್ತೊಂದು ಕಡೆ ತಿರುಮಲದಲ್ಲಿ ಅಭಿವೃದ್ಧಿ ಕಾಮಗಾರಿಗಳು, ಭವನ ನಿರ್ಮಾಣ ಕೆಲಸಗಳು ನಡೆಯುತ್ತಿರುತ್ತವೆ. ಈ ಕೆಲಸ ಮಾಡಲು ಹೊರ ಪ್ರದೇಶಗಳಿಂದ ಆಗಮಿಸುತ್ತಾರೆ. ಇಂತಹವರ ಸಂಖ್ಯೆ ಕೂಡ ಅಧಿಕೃತವಾಗಿ ದಾಖಲಿಸಲಾಗುತ್ತದೆ. ಟಿಟಿಡಿಗೆ ಸಂಬಂಧ ಇಲ್ಲದೆ, ತಿರುಮಲಕ್ಕೆ ಬಂದು ಮತದಾನದ ಹಕ್ಕನ್ನು ಸುಮಾರು 1000 ಮಂದಿಯನ್ನು ಗುರುತಿಸಿದ್ದಾರೆ. SIRನಲ್ಲಿ ಇಂತಹ ಪ್ರಕರಣಗಳನ್ನು ಕಂಡುಕೊಳ್ಳಲು ತಿರುಮಲದಲ್ಲಿ ತನಿಖೆಗಳನ್ನು ನಡೆಸಲು ಅನುಮತಿ ನೀಡಿ ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಬೆಟ್ಟದಿಂದ ಕಳುಹಿಸುವ ಕೆಲಸ ಆಗ್ತಿದೆ.

ಇದನ್ನೂ ಓದಿ: Daughter: ಇಂತಹ ಮಗಳು ಯಾರಿಗೂ ಸಿಗೋದು ಬೇಡ, ಈಕೆ ಮಾಡಿದ್ದೇನು ಅಂತ ಗೊತ್ತಾದರೆ ನಿಮ್ಮ ಮೈಂಡ್ ಬ್ಲಾಂಕ್ ಆಗುತ್ತೆ!

ತಿರುಮಲ ಆಲಯ ಬೀದಿಗಳಲ್ಲಿ ಮಾತ್ರವಲ್ಲದೆ, ಅನುಮತಿ ಇಲ್ಲದ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸುತ್ತಿದ್ದಾರೆ. ಇನ್ನು ಅಂಗಡಿದಾರರು, ಹೋಟೆಲ್, ಭವನ ನಿರ್ಮಾಣ ಕಾರ್ಮಿಕರ ವಿವರಗಳನ್ನು ಸಂಗ್ರಹಿಸುವ ಕೆಲಸ ಆಗ್ತಿದೆ. ಸರಿಯಾದ ಆಧಾರವಿಲ್ಲದಿದ್ದರೆ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಅಂಗಡಿ ಮಾಲೀಕರಿಗೆ ಪೊಲೀಸ್ ಆಡಳಿತವು ಗಂಭೀರ ಎಚ್ಚರಿಕೆ ನೀಡುತ್ತಿದೆ. ಪ್ರತಿಯೊಂದು ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯಗೊಳಿಸಲಾಗಿದೆ. ಬೆಟ್ಟದಾದ್ಯಂತ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ನಿರಂತರ ಕಣ್ಗಾವಲು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports