Last Updated:
300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಯೋಗಿ ಬಾಬು , ಹಾಸ್ಯ ಪಾತ್ರಗಳಷ್ಟೇ ಅಲ್ಲದೆ ಗಂಭೀರ ಪಾತ್ರಗಳ ಮೂಲ ಕವು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ (Comedian) , ಯೋಗಿ ಬಾಬು (Yogi Babu) ಇದೀಗ ತಮ್ಮ ಸಿನಿಮಾ ಜರ್ನಿಯಲ್ಲಿ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಯೋಗಿ ಬಾಬು , ಹಾಸ್ಯ ಪಾತ್ರಗಳಷ್ಟೇ ಅಲ್ಲದೆ ಗಂಭೀರ ಪಾತ್ರಗಳ ಮೂಲ ಕವು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಅವರು ತಮ್ಮ ವೃತ್ತಿಜೀವನದಲ್ಲೇ ಅತಿದೊಡ್ಡ ಮತ್ತು ಅತ್ಯಂತ ವಿಭಿನ್ನ ಸವಾಲಿನ ಪಾತ್ರಕ್ಕೆ ಸಜ್ಜಾಗಿದ್ದಾರೆ.
ಯೋಗಿ ಬಾಬು ಆರಂಭದಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡರೂ, ನಂತರದ ದಿನಗಳಲ್ಲಿ ಸೂಪರ್ ಸ್ಟಾರ್ ಚಿತ್ರಗಳಲ್ಲಿ ಪೋಷಕ ಪಾತ್ರಗಳ ಮೂಲಕವೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಕೆಲ ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಿದ್ದಾರೆ. ಈಗ ಅವರು ಮತ್ತೊಂದು ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಒಂದೇ ಸಿನಿಮಾದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿದ ದಾಖಲೆಗಳಲ್ಲಿ ಕಮಲ್ ಹಾಸನ್ ಅವರ ‘ದಶಾವತಾರಂ’ ವಿಶೇಷ ಸ್ಥಾನ ಪಡೆದುಕೊಂಡಿದೆ. ಆ ಸಿನಿಮಾದಲ್ಲಿ ಅವರು 10 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಇತಿಹಾಸ ನಿರ್ಮಿಸಿದ್ದರು. ಆ ಸಾಧನೆ ಇಂದಿಗೂ ಭಾರತೀಯ ಸಿನಿಮಾದಲ್ಲಿನ ದೊಡ್ಡ ದಾಖಲೆಯಾಗಿ ಉಳಿದಿದೆ. ಆದರೆ ಈಗ ಯೋಗಿ ಬಾಬು ಆ ದಾಖಲೆಗೆ ಸವಾಲು ಹಾಕಲು ಮುಂದಾಗಿದ್ದಾರೆ ಎಂಬ ಸುದ್ದಿ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ಈ ಚಿತ್ರದಲ್ಲಿ ಯೋಗಿ ಬಾಬು ಅವರ ಜೊತೆಗೆ ಅದಿತಿ ರವಿ, ರೆಡಿನ್ ಕಿಂಗ್ಲಿ, ವಿಟಿವಿ ಗಣೇಶ್, ಪಂಜು ಸುಬ್ಬು ಮತ್ತು ಎ. ವೆಂಕಟೇಶ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಲಿಷ್ಠ ತಾರಾಗಣ ಮತ್ತು ವಿಭಿನ್ನ ಕಥಾಹಂದರದಿಂದಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಕಾಲಿವುಡ್ನಲ್ಲಿ ಈಗಾಗಲೇ ಈ ಚಿತ್ರದ ಕುರಿತು ಭಾರೀ ನಿರೀಕ್ಷೆ ಮೂಡಿದ್ದು, ಯೋಗಿ ಬಾಬು ಅವರ ಬಹುಮುಖ ಪ್ರತಿಭೆಗೆ ಮತ್ತೊಮ್ಮೆ ವೇದಿಕೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
Bangalore [Bangalore],Bangalore,Karnataka













