Aamir Khan: ಜುಲೈ 5ಕ್ಕೆ ಆಮಿರ್ ಖಾನ್ ಕಲ್ಯಾಣ! ಮಾಜಿ ಪತ್ನಿಯರ ಮುಂದೆಯೇ ವಿವಾಹ? | | ACTPnews

News18


Last Updated:

ಆಮಿರ್ ಖಾನ್ ಅವರ ಮುಂಬೈನ ಬಾಂದ್ರಾದಲ್ಲಿರುವ ನಿವಾಸದಲ್ಲೇ ವಿವಾಹ ಸಮಾರಂಭ ನಡೆಯಲಿದೆ. ಇದೇ ಸ್ಥಳದಲ್ಲಿ ವಿವಾಹ ನೋಂದಣಿ ಪ್ರಕ್ರಿಯೆಯೂ ಪೂರ್ಣಗೊಳ್ಳಲಿದೆ ಎನ್ನಲಾಗಿದೆ. ಸರಳ ಮತ್ತು ಖಾಸಗಿ ರೀತಿಯಲ್ಲಿ ಮದುವೆಯನ್ನು ನಡೆಸಲು ದಂಪತಿ ನಿರ್ಧರಿಸಿರುವುದರಿಂದ, ಯಾವುದೇ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

News18
News18

ಬಾಲಿವುಡ್‌ನ ಖ್ಯಾತ ನಟ ಆಮಿರ್ ಖಾನ್ (Aamir Khan) ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಗೆಳತಿ ಗೌರಿ ಸ್ಪ್ರಾಟ್ (Gauri Spratt) ಅವರೊಂದಿಗೆ ಜುಲೈ 5ರಂದು ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಈ ವಿಶೇಷ ಸಮಾರಂಭಕ್ಕೆ ಕುಟುಂಬದ ಸದಸ್ಯರು ಹಾಗೂ ಅತ್ಯಂತ ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ನಿವಾಸದಲ್ಲೇ ನಡೆಯಲಿರುವ ವಿವಾಹ

ಮಾಹಿತಿಯ ಪ್ರಕಾರ, ಆಮಿರ್ ಖಾನ್ ಅವರ ಮುಂಬೈನ ಬಾಂದ್ರಾದಲ್ಲಿರುವ ನಿವಾಸದಲ್ಲೇ ವಿವಾಹ ಸಮಾರಂಭ ನಡೆಯಲಿದೆ. ಇದೇ ಸ್ಥಳದಲ್ಲಿ ವಿವಾಹ ನೋಂದಣಿ ಪ್ರಕ್ರಿಯೆಯೂ ಪೂರ್ಣಗೊಳ್ಳಲಿದೆ ಎನ್ನಲಾಗಿದೆ. ಸರಳ ಮತ್ತು ಖಾಸಗಿ ರೀತಿಯಲ್ಲಿ ಮದುವೆಯನ್ನು ನಡೆಸಲು ದಂಪತಿ ನಿರ್ಧರಿಸಿರುವುದರಿಂದ, ಯಾವುದೇ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಸುಮಾರು 150 ಮಂದಿ ಅತಿಥಿಗಳ ಸಮ್ಮುಖದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಕುಟುಂಬದ ಆಪ್ತರು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ವಿದೇಶದಲ್ಲಿರುವ ಸಂಬಂಧಿಕರೂ ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾಗಲು ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆಮಿರ್ ಖಾನ್ ಅವರಿಗೆ ಇದು ಮೂರನೇ ವಿವಾಹವಾಗಿದ್ದು, ಗೌರಿ ಸ್ಪ್ರಾಟ್ ಅವರಿಗೆ ಎರಡನೇ ವಿವಾಹವಾಗಿದೆ. ಇಬ್ಬರೂ ಹಲವು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದು, ಬಳಿಕ ಅವರ ಸ್ನೇಹ ಪ್ರೀತಿಯಾಗಿ ಬೆಳೆದಿದೆ ಎನ್ನಲಾಗಿದೆ.

ಗೌರಿ ಸ್ಪ್ರಾಟ್ ಯಾರು?

ಗೌರಿ ಸ್ಪ್ರಾಟ್ ಮೂಲತಃ ಬೆಂಗಳೂರಿನವರು. ತಮ್ಮ ಬಾಲ್ಯ ಮತ್ತು ಶಿಕ್ಷಣದ ಬಹುಭಾಗವನ್ನು ಬೆಂಗಳೂರಿನಲ್ಲೇ ಪೂರ್ಣಗೊಳಿಸಿದ್ದಾರೆ. ಇವರ ತಾಯಿ ರೀಟಾ ಸ್ಪ್ರಾಟ್ ಬೆಂಗಳೂರಿನಲ್ಲಿ ಹೆಸರಾಂತ ಸಲೂನ್ ನಡೆಸುತ್ತಿದ್ದರು.ಗೌರಿ ಅವರು ಬೆಂಗಳೂರಿನ ಬ್ಲೂ ಮೌಂಟೇನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಬಳಿಕ 2004ರಲ್ಲಿ ಲಂಡನ್‌ನ ಯೂನಿವರ್ಸಿಟಿ ಆಫ್ ದಿ ಆರ್ಟ್ಸ್‌ನಲ್ಲಿ ಎಫ್‌ಡಿಎ ಸ್ಟೈಲಿಂಗ್ ಮತ್ತು ಫೋಟೋಗ್ರಫಿ ಕೋರ್ಸ್ ಪೂರ್ಣಗೊಳಿಸಿದ್ದಾರೆ.

ಸುಮಾರು 16 ವರ್ಷಗಳ ದಾಂಪತ್ಯ ಜೀವನದ ಬಳಿಕ ಆಮಿರ್ ಮತ್ತು ರೀನಾ ದತ್ತಾ 2002ರಲ್ಲಿ ವಿಚ್ಛೇದನ ಪಡೆದರು. ನಂತರ ಆಮಿರ್ ನಿರ್ದೇಶಕಿ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಆಜಾದ್ ಎಂಬ ಮಗನಿದ್ದು, ನಂತರ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಟ್ಟರೂ ಉತ್ತಮ ಸ್ನೇಹ ಸಂಬಂಧವನ್ನು ಮುಂದುವರಿಸಿಕೊಂಡಿದ್ದಾರೆ.

ಆಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಅವರ ವಿವಾಹದ ಕುರಿತ ಮಾಹಿತಿ ಈಗಾಗಲೇ ಬಾಲಿವುಡ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಖಾಸಗಿ ಹಾಗೂ ಸರಳ ರೀತಿಯಲ್ಲಿ ನಡೆಯಲಿರುವ ಈ ಸಮಾರಂಭದ ಕುರಿತು ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಾಗಿದೆ. ಹಾಗೆಯೇ ಹೊಸ ಜೀವನ ಆರಂಭಿಸುತ್ತಿರುವ ಈ ಜೋಡಿಗೆ ಅಭಿಮಾನಿಗಳು ಹಾಗೂ ಸಿನಿಪ್ರಿಯರಿಂದ ಈಗಾಗಲೇ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed