Last Updated:
ಸತೀಶ್ ನೀನಾಸಂ ಒಂದು ಸುದ್ದಿ ಹಂಚಿಕೊಂಡಿದ್ದಾರೆ. ತಮ್ಮ ಚಿತ್ರ ಒಂದು ಒಟಿಟಿಯಲ್ಲಿ ಟ್ರೆಂಡಿಂಗ್ ಅಲ್ಲಿಯೇ ಓಡ್ತಿದೆ ಅನ್ನೋದೇ ಈ ನ್ಯೂಸ್ ಆಗಿದೆ. ಆದರೆ, ಇದು ಯಾವ ಚಿತ್ರ ಅನ್ನೋದು ಇಲ್ಲಿದೆ ಓದಿ.
ದಿ ರೈಸ್ ಆಫ್ ಅಶೋಕ ಚಿತ್ರ (The Rise of Ashoka Movie) ಬಂದು ಐದಾರು ತಿಂಗಳೇ ಆಗಿದೆ. ಅಷ್ಟರಲ್ಲಿಯೇ ಈ ಚಿತ್ರ ಒಟಿಟಿಗೂ (Ott) ಬಂದಿದೆ. ಜಿಯೋಹಾಟ್ಸ್ಟಾರ್ ಅಲ್ಲಿ ಇದು ಸ್ಟ್ರೀಮಿಂಗ್ (Streaming) ಕೂಡ ಆಗುತ್ತಿದೆ. ಇದರ ನಡುವೆ ಚಿತ್ರದ ನಾಯಕ ನಿರ್ಮಾಪಕ ಸತೀಶ್ ನೀನಾಸಂ (Sathish Ninasam) ಒಂದು ವಿಶೇಷ ವಿಚಾರವನ್ನ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾ ಸದ್ಯ ಟಾಪ್ ಟ್ರೆಂಡಿಂಗ್ ಅಲ್ಲಿಯೇ ಓಡ್ತಿದೆ ಅಂತ ಹೇಳಿದ್ದಾರೆ. ಈ ವಿಷಯದ ಇನ್ನಷ್ಟು ಅಧಿಕೃತ ವಿವರ ಇಲ್ಲಿದೆ ಓದಿ.
ಟ್ರೆಂಡಿಂಗ್ ನಂಬರ್-7
(ಚಿತ್ರ ಕೃಪೆ: ಸತೀಶ್ ನೀನಾಸಂ ಇನ್ಸ್ಟಾಗ್ರಾಮ್)
ನಾಯಕ ನಟ ಸತೀಶ್ ನೀನಾಸಂ ಇಲ್ಲಿ ಅಶೋಕ ಅನ್ನುವ ಪಾತ್ರ ಮಾಡಿದ್ದರು. ಈ ಚಿತ್ರ ಫೆಬ್ರವರಿ-27 ರಂದು ರಿಲೀಸ್ ಆಗಿತ್ತು. ವಿನೋದ್ ವಿ.ಧೊಂಡಾಲೆ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಮಾಡಿದ್ದಾರೆ.
ಈ ಚಿತ್ರ ಒಟಿಟಿಗೆ ಬಂದಾಗಿದೆ. ಟಾಪ್ ಅಲ್ಲೂ ಓಡ್ತಿದೆ. ಈ ವಿಷಯವನ್ನ ಸ್ವತಃ ಸತೀಶ್ ನೀನಾಸಂ ನ್ಯೂಸ್-18 ಕನ್ನಡ ಡಿಜಿಟಲ್ಗೆ ಹೇಳಿಕೊಂಡಿದ್ದಾರೆ
ದಿ ರೈಸ್ ಆಫ್ ಅಶೋಕ ಚಿತ್ರ ಟ್ರೆಂಡಿಂಗ್ ನಂಬರ್-7 ಅಲ್ಲಿಯೇ ಇದೆ. ಆದರೆ, ಇಲ್ಲಿ ಇನ್ನೂ ಒಂದು ವಿಷಯ ಇದೆ. ಅದೇನು ಗೊತ್ತಾ? ಹೌದು, ಇದು ಕನ್ನಡ ಅವತರಣಿಕೆ ಅಲ್ವೇ ಅಲ್ಲ.
ಅಂದ್ರೆ ಜಿಯೋಹಾಟ್ಸ್ಟಾರ್ ಅಲ್ಲಿ ಓಡ್ತಿರೋ ದಿ ರೈಸ್ ಆಫ್ ಅಶೋಕ ಚಿತ್ರ ಕನ್ನಡ ಅಲ್ಲ ನೋಡಿ. ಹಿಂದಿ ಭಾಷೆಯ ದಿ ರೈಸ್ ಆಫ್ ಅಶೋಕ ಟ್ರೆಂಡಿಂಗ್ ನಂಬರ್-7 ರಲ್ಲಿಯೇ ಇದೆ ನೋಡಿ.
ಬಾಲಿವುಡ್ ಮಂದಿ ಮೆಚ್ತಿರೋ ಸಿನಿಮಾ
(ಚಿತ್ರ ಕೃಪೆ: ಸತೀಶ್ ನೀನಾಸಂ ಇನ್ಸ್ಟಾಗ್ರಾಮ್)
ಸತೀಶ್ ನೀನಾಸಂ ಅವರ ಈ ಚಿತ್ರ ಹಿಂದಿ ಭಾಷೆ ಗೊತ್ತಿರೋರಿಗೆ ಇಷ್ಟ ಆಗ್ತಿದೆ ಅಂದ್ಹಾಗೆ ಆಯಿತು. ಹಾಗಾಗಿಯೇ ಒಟಿಟಿಯಲ್ಲಿ ಈ ಚಿತ್ರ ಟ್ರೆಂಡಿಂಗ್ ನಂಬರ್-7 ರಲ್ಲಿಯೇ ಇದೆ.
ಇನ್ನುಳಿದಂತೆ ಈ ಒಂದು ವಿಷಯವನ್ನ ನಾಯಕ ನಟ ಸತೀಶ್ ನೀನಾಸಂ ಅಷ್ಟೆ ಖುಷಿಯಲ್ಲಿಯೇ ಹಂಚಿಕೊಂಡಿದ್ದಾರೆ. ಹಾಗೆ ಸದ್ಯ ಇವರು ತಮ್ಮ ಅಯೋಗ್ಯ-2 ಚಿತ್ರದ ರಿಲೀಸ್ ಕೆಲಸದಲ್ಲಿಯೇ ಇದ್ದಾರೆ.
ಆಗಸ್ಟ್-7 ರಂದು ಅಯೋಗ್ಯ-2 ಚಿತ್ರ ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಈ ಚಿತ್ರ ತೆರೆ ಕಾಣ್ತಿದೆ. ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಅವರು ಅಯೋಗ್ಯ ಆದ್ಮೇಲೆ ಈ ಚಿತ್ರದಲ್ಲಿ ಮತ್ತೆ ಜೋಡಿ ಆಗಿದ್ದಾರೆ. ಈ ಹಿಂದಿನ ಕತೆಯನ್ನೆ ಇಲ್ಲಿ ಹೇಳುತ್ತಿದ್ದಾರೆ. ಹಾಗೆ ಡೈರೆಕ್ಟರ್ ಮಹೇಶ್ ಕುಮಾರ್ ಈ ಚಿತ್ರವನ್ನು ಡೈರೆಕ್ಷನ್ ಮಾಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka














