Asian Games 2026: ಬಲಿಷ್ಠ ಭಾರತ ತಂಡ ಪ್ರಕಟ! ಚಿನ್ನದ ಪದಕ ಉಳಿಸುವ ಜವಾಬ್ದಾರಿ ಹೊತ್ತ ಹರ್ಮನ್‌ಪ್ರೀತ್ | ಕ್ರೀಡಾ ಸುದ್ದಿ | ACTPnews

ಹಾಕಿ ಇಂಡಿಯಾ


Last Updated:

2026 ರ ಏಷ್ಯನ್ ಕ್ರೀಡಾಕೂಟಕ್ಕಾಗಿ ಹಾಕಿ ಇಂಡಿಯಾ 20 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಕಟಿಸಿದೆ. ಹರ್ಮನ್‌ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ.

ಹಾಕಿ ಇಂಡಿಯಾ
ಹಾಕಿ ಇಂಡಿಯಾ

ಭಾರತ ಪುರುಷರ ಹಾಕಿ ತಂಡ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಉಳಿಸಿಕೊಳ್ಳಲು ಆಡಲಿದೆ. ಹಾಕಿ ಇಂಡಿಯಾ ಜುಲೈ 29ರಂದು 20 ಸದಸ್ಯರ ತಂಡವನ್ನು ಘೋಷಿಸಿದೆ. ಈ ಕ್ರೀಡಾಕೂಟ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆಯುತ್ತದೆ. ಹರ್ಮನ್‌ಪ್ರೀತ್ ಸಿಂಗ್ ಮತ್ತೆ ತಂಡದ ನಾಯಕರಾಗಿದ್ದಾರೆ. ಮನ್‌ಪ್ರೀತ್ ಸಿಂಗ್ ಸಹ ತಂಡದಲ್ಲಿದ್ದಾರೆ. ಇತ್ತೀಚೆಗೆ 2026ರ ಹಾಕಿ ವಿಶ್ವಕಪ್ ತಂಡವನ್ನೂ ಘೋಷಿಸಲಾಗಿದೆ.

ಭಾರತದ ಹಾಕಿ ತಂಡ 2023ರಲ್ಲಿ ಹ್ಯಾಂಗ್‌ಝೌ ಏಷ್ಯನ್ ಕ್ರೀಡಾಕೂಟದಲ್ಲಿ ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಚಿನ್ನ ಗೆದ್ದಿತು. ಈಗ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಮತ್ತೆ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಭಾರತ ತಂಡ ಎ ಗುಂಪಿನಲ್ಲಿದ್ದು, ಜಪಾನ್, ದಕ್ಷಿಣ ಕೊರಿಯಾ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೋನೇಷ್ಯಾ ತಂಡಗಳೊಂದಿಗೆ ಸ್ಥಾನ ಪಡೆದಿದೆ.

ತಂಡ ಹೇಗಿದೆ?

ಮೋಹಿತ್ ಎಚ್‌ಎಸ್ ಮತ್ತು ಸೂರಜ್ ಕರ್ಕೇರಾ ಗೋಲ್‌ಕೀಪರ್‌ಗಳಾಗಿ ಆಡುತ್ತಾರೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ಜೊತೆಗೆ ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಸಂಜಯ್, ಸುಮಿತ್ ಮತ್ತು ಯಶ್‌ದೀಪ್ ಸಿವಾಚ್ ರಕ್ಷಣಾ ವಿಭಾಗದಲ್ಲಿ ಇರುತ್ತಾರೆ.

2028 ರ ಒಲಿಂಪಿಕ್ಸ್‌ಗೆ ಅರ್ಹತೆ ?

ಕೋಚ್ ಕ್ರೇಗ್ ಫುಲ್ಟನ್ ಅವರು ತಂಡದ ಆಯ್ಕೆಯ ಬಗ್ಗೆ ಮಾತನಾಡಿದರು. ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾದ ಭಾರತೀಯ ತಂಡದಲ್ಲಿ ಅನುಭವಿ ಆಟಗಾರರು ಹೆಚ್ಚು ಇದ್ದಾರೆ ಎಂದು ಹೇಳಿದರು. ಜಪಾನ್‌ನಲ್ಲಿ ಸ್ಪರ್ಧೆ ಕಠಿಣವಾಗಿರುತ್ತದೆ.ಏಕೆಂದರೆ ವಿಜೇತರು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರವಾಗಿ ಅರ್ಹತೆ ಪಡೆಯುತ್ತಾರೆ. ಇದೇ ಭಾರತೀಯ ತಂಡದ ಪ್ರಮುಖ ಗುರಿ ಎಂದು ಅವರು ಹೇಳಿದರು.

ನಾಯಕ ಹರ್ಮನ್‌ಪ್ರೀತ್ ಸಿಂಗ್ ತಂಡದ ಮೇಲೆ ವಿಶ್ವಾಸ ವ್ಯಕ್ತಪಡಿಸಿ, ಯುವ ಆಟಗಾರರು ಮತ್ತು ಅನುಭವಿಗಳ ಸುಂದರ ಮಿಶ್ರಣವೇ ತಂಡದ ದೊಡ್ಡ ಬಲ ಎಂದು ಹೇಳಿದರು. ಆಟಗಾರರು ಒತ್ತಡವನ್ನು ತೆಗೆದುಕೊಳ್ಳದೆ, ಆಟವನ್ನು ಆನಂದಿಸಿ, ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ತಿಳಿಸಿದರು.

ಏಷ್ಯನ್ ಕ್ರೀಡಾಕೂಟದಲ್ಲಿ ಒಟ್ಟು 12 ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಎಲ್ಲಾ ಪಂದ್ಯಗಳು ಜಪಾನ್‌ನ ಕಾಕಮಿಗಹರಾದಲ್ಲಿರುವ ಗಿಫು ಪ್ರಿಫೆಕ್ಚರಲ್ ಗ್ರೀನ್ ಕ್ರೀಡಾಂಗಣದಲ್ಲಿ ನಡೆಯುತ್ತವೆ. ಭಾರತ ತಂಡ ಸೆಪ್ಟೆಂಬರ್ 20ರಂದು ಇಂಡೋನೇಷ್ಯಾ ವಿರುದ್ಧ ಮೊದಲ ಪಂದ್ಯ ಆಡುತ್ತದೆ. ನಂತರ ಸೆಪ್ಟೆಂಬರ್ 22ರಂದು ಶ್ರೀಲಂಕಾ, 24 ರಂದು ದಕ್ಷಿಣ ಕೊರಿಯಾ, 28ರಂದು ಜಪಾನ್ ಮತ್ತು ೨೮ರಂದು ಬಾಂಗ್ಲಾದೇಶ ವಿರುದ್ಧ ಆಡುತ್ತದೆ.

2026 ರ ಏಷ್ಯನ್ ಕ್ರೀಡಾಕೂಟಕ್ಕೆ ಭಾರತೀಯ ಪುರುಷರ ಹಾಕಿ ತಂಡ

  • ಗೋಲ್‌ಕೀಪರ್‌ಗಳು: ಮೋಹಿತ್ ಎಚ್‌ಎಸ್, ಸೂರಜ್ ಕರ್ಕೇರಾ.
  • ಡಿಫೆಂಡರ್ಸ್: ಜರ್ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಸಂಜಯ್, ಸುಮಿತ್, ಯಶ್‌ದೀಪ್ ಸಿವಾಚ್.
  • ಮಿಡ್‌ಫೀಲ್ಡರ್‌ಗಳು: ರಾಜಿಂದರ್ ಸಿಂಗ್, ರಾಜ್ ಕುಮಾರ್ ಪಾಲ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ವಿವೇಕ್ ಸಾಗರ್ ಪ್ರಸಾದ್.
  • ಫಾರ್ವರ್ಡ್‌ಗಳು: ದಿಲ್‌ಪ್ರೀತ್ ಸಿಂಗ್, ಶಿಲಾನಂದ್ ಲಾಕ್ರಾ, ಸುಖಜೀತ್ ಸಿಂಗ್, ಮನದೀಪ್ ಸಿಂಗ್, ಅಭಿಷೇಕ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed