ತದ್ವಿರುದ್ಧ ಸಿನಿಮಾ
ಈ ಚಿತ್ರ ಆದ್ಮೇಲೆ ಈಗಲೇ ಕುಮಾರ್ ಬಂಗಾರಪ್ಪ ಬಣ್ಣ ಹಚ್ಚಿದ್ದಾರೆ. ಈ ಚಿತ್ರವನ್ನ ಸಾತ್ವಿಕ್ ಪವನ್ ಕುಮಾರ್ ಡೈರೆಕ್ಷನ್ ಮಾಡಿದ್ದಾರೆ. ಈ ಹಿಂದೆ ಇವರು ತಾಯವ್ವ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದರು.
ಈ ಚಿತ್ರಕ್ಕೆ ಕ್ಯಾಮರಾವರ್ಕ್ ಪ್ಲಸ್ ಡೈರೆಕ್ಷನ್ ಮಾಡಿದ್ದಾರೆ. ಬಿ.ರಾಮೂರ್ತಿ ಅವರು ಈ ಚಿತ್ರಕ್ಕೆ ಕತೆ, ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ.
ವಿಜಯ್ ರಾಘವೇಂದ್ರ ಅಭಿನಯದ ಶ್ರೀಮತಿ ಸಿಂಧೂರ ಚಿತ್ರವೂ ಈ ವಾರ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ಪ್ರಿಯಾ ಹೆಗ್ಡೆ ಜೋಡಿ ಆಗಿದ್ದಾರೆ.
ಈ ಚಿತ್ರದ ಪ್ರಚಾರವು ಒಂದು ಹಂತಕ್ಕೆ ಆಗಿದೆ. ಶ್ರೀಮತಿ ಸಿಂಧೂರ ಹೆಸರಿನ ಸಿನಿಮಾ ಬರ್ತಿದೆ ಅನ್ನೋದು ಗೊತ್ತಾಗಿದೆ. ಚಾನೆಲ್‌ಗಳ ಸಂದರ್ಶನ ಮತ್ತು ಪ್ರೆಸ್ ಮೀಟ್‌ಗಳಲ್ಲಿ ಚಿತ್ರ ತಂಡ ತಮ್ಮ ಈ ಸಿನಿಮಾದ ಕುರಿತು ಮಾಹಿತಿ ಕೊಟ್ಟಿದೆ.
ಶ್ರೀಮತಿ ಸಿಂಧೂರ
ಶ್ರೀಮತಿ ಸಿಂಧೂರ ಚಿತ್ರವನ್ನ ಅನಂತ್ ರಾಜು ಡೈರೆಕ್ಷನ್ ಮಾಡಿದ್ದಾರೆ. ರಾಜೇಶ್ ರಾಮನಾಥ್ ಸಂಗೀತದಲ್ಲಿ ಚಿತ್ರದ ಹಾಡುಗಳು ಮೂಡಿ ಬಂದಿವೆ.
ಈ ಚಿತ್ರ ಅಲ್ಲದೆ ಕನ್ನಡದಲ್ಲಿ ಈ ವಾರ ಜಾಲಿ ಅನ್ನುವ ಸಿನಿಮಾ ಕೂಡ ಬರ್ತಿದೆ. ಈ ಚಿತ್ರವನ್ನ ತಾರುಷ್ ಡೈರೆಕ್ಷನ್ ಮಾಡಿದ್ದಾರೆ. ಯೋಗೇಶ್ವರ್ ಆರ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.
ನಿತಿನ್ ರಾಜ್ ಸಂಗೀತ ಮಾಡಿದ್ದಾರೆ. ಡೈರೆಕ್ಟರ್ ತಾರುಷ್ ಈ ಚಿತ್ರದ ನಾಯಕರೂ ಆಗಿದ್ದಾರೆ. ನವ ನಟಿ ಪದ್ಮಶ್ರೀ ಈ ಚಿತ್ರದ ನಾಯಕಿ ಆಗಿದ್ದಾರೆ. ಇದು ಈ ಶುಕ್ರವಾರ ರಿಲೀಸ್ ಆಗುತ್ತಿದೆ.
ಸುಮನ್ ರಂಗನಾಥ್ ಅಭಿನಯದ ತದ್ವಿರುದ್ಧ ಚಿತ್ರವೂ ಬರ್ತಿದೆ. ಸುಮನ್ ರಂಗನಾಥ್ ಅಭಿನಯದ ಚಿತ್ರಗಳೇ ಇತ್ತೀಚಿಗೆ ಬಂದಿರಲಿಲ್ಲ. ಆದರೆ, ಇದೀಗ ಈ ಚಿತ್ರ ರಿಲೀಸ್ ಆಗುತ್ತಿದೆ.
ಆದರೆ, ಈ ಚಿತ್ರದ ಪ್ರಚಾರಕ್ಕೆ ಸುಮನ್ ರಂಗನಾಥ್ ಅವರು ಬರ್ತಿಲ್ಲ. ಕೊಡವು ಸಂಭಾವನೆ ಕೊಟ್ಟಿದ್ದೇವೆ ಅಂತಲೂ ನಿರ್ಮಾಪಕರು ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದರು.
ಇದರ ನಡುವೆ ಸುಮನ್ ರಂಗನಾಥ್ ಇಲ್ಲದೆ ಚಿತ್ರದ ಪ್ರೆಸ್ ಮೀಟ್ ಕೂಡ ನಡೆಯಿತು. ವಿನೋದ್ ಜಿ.ರಾಜ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇವರೇ ಕ್ಯಾಮರಾಮನ್ ಆಗಿದ್ದಾರೆ. ಕತೆ ಮತ್ತು ಎಡಿಟಿಂಗ್ ಕೂಡ ಇವರೇ ಮಾಡಿದ್ದಾರೆ.
ಸುಚಂದ್ರ ಪ್ರಸಾದ್, ಸುಮನ್ ರಂಗನಾಥನ್, ವಿಕ್ರಮ್, ಐಶ್ವರ್ಯ ಬಿ ಶೆಟ್ಟಿ, ಪೂಜಾ ಗೌಡ, ಸುವಿನ ಗೌಡ, ಅಭಿಲಾಷ್ ಎನ್ ಈ ಚಿತ್ರದಲ್ಲಿ ನಟಿಸಿದ್ದಾರೆ ಅಂತ ಹೇಳಬಹುದು.













