Narendra Modi: ಮತ್ತೆ ಬಂತು ಮೋದಿ ಸಂದೇಶ! 24 ಗಂಟೆಗಳಲ್ಲೇ 2ನೇ ವಿಡಿಯೋ ಮೆಸೇಜ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೋದಿ ಸಂದೇಶ


Last Updated:

Narendra Modi: ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ವಿಡಿಯೋ ಸಂದೇಶ ಕಳಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ನರೇಂದ್ರ ಮೋದಿ ವಿಡಿಯೋ ಸಂದೇಶವೊಂದನ್ನು ಕಳಿಸಿದ್ದರು. ಅದಾಗುತ್ತಿದ್ದಂತೆ ಇದೀಗ 24 ಗಂಟೆಗಳ ಒಳಗೆ ಮತ್ತೊಂದು ವಿಡಿಯೋ ಸಂದೇಶ ಕಳಿಸಿದ್ದಾರೆ.

ಮೋದಿ ಸಂದೇಶ
ಮೋದಿ ಸಂದೇಶ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ವಿಡಿಯೋ ಸಂದೇಶ ಕಳಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ನರೇಂದ್ರ ಮೋದಿ (Prime Minister Narendra Modi) ವಿಡಿಯೋ ಸಂದೇಶವೊಂದನ್ನು (video message) ಕಳಿಸಿದ್ದರು. ಅದಾಗುತ್ತಿದ್ದಂತೆ ಇದೀಗ 24 ಗಂಟೆಗಳ ಒಳಗೆ ಮತ್ತೊಂದು ವಿಡಿಯೋ ಸಂದೇಶ ಕಳಿಸಿದ್ದಾರೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರುವ ಮೋದಿ, ಒಳ್ಳೊಳ್ಳೆಯ ಸಲಹೆ ಸೂಚನೆಗಳನ್ನು ನನಗೆ ಕೊಟ್ಟಿದ್ದೀರಿ. ಅದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ. ನಿನ್ನೆಯ ವಿಡಿಯೋ ಸಂದೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಅದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

ಈ ವಿಡಿಯೋದಲ್ಲಿ ಏನಿದೆ?

ಮೋದಿ ಇದೀಗ 40 ಸೆಕೆಂಡ್‌ಗಳ ವಿಡಿಯೋ ಸಂದೇಶವನ್ನು ಕಳಿಸಿದ್ದಾರೆ. ನಿಮ್ಮ ಅತ್ಯಮೂಲ್ಯ ಸಲಹೆಗಳಿಗಾಗಿ ಧನ್ಯವಾದಗಳು ಅಂತ ಯುವ ಜನತೆಗೆ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

ನಿನ್ನೆ ಮಧ್ಯರಾತ್ರಿ ವಿಡಿಯೋ ಸಂದೇಶ ಕಳಿಸಿದ್ದ ಮೋದಿ

ಪ್ರಧಾನಿ ನರೇಂದ್ರ ಮೋದಿ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೊಸ ಮಸೂದೆಯನ್ನ ತರೋದಾಗಿಘೋಷಿಸಿದ್ದರು.

ವಿಡಿಯೋ ಮೂಲಕ ಮೋದಿ ಮಹತ್ವದ ಸಂದೇಶ

“ಪ್ರಶ್ನೆಪತ್ರಿಕೆ ಸೋರಿಕೆ ಘಟನೆ ಬೆಳಕಿಗೆ ಬಂದ ತಕ್ಷಣ, ಸರ್ಕಾರ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿತು. ನಾವು ಅಪರಾಧಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೇವೆ. ನಾವು 22 ಲಕ್ಷ ಅಭ್ಯರ್ಥಿಗಳಿಗೆ ತಕ್ಷಣ ಪರೀಕ್ಷೆಯನ್ನು ಮರು ನಡೆಸಿದ್ದೇವೆ ಮತ್ತು ಫಲಿತಾಂಶಗಳನ್ನು ಘೋಷಿಸಿದ್ದೇವೆ. ಈ ಅಪರಾಧಿಗಳ ವಿಚಾರಣೆಗೆ ತ್ವರಿತ ನ್ಯಾಯಾಲಯಗಳು ಮತ್ತು ಕಠಿಣ ಶಿಕ್ಷೆಗಳನ್ನು ಖಚಿತಪಡಿಸಿಕೊಳ್ಳಲು ಕರಡು ಮಸೂದೆಯನ್ನು ಸಿದ್ಧಪಡಿಸುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed