Job News: ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದಲ್ಲಿ ಭರ್ಜರಿ ನೇಮಕಾತಿ, 18 ಹುದ್ದೆಗಳಿಗೆ ಅರ್ಜಿ ಆಹ್ವಾನ! | ಉದ್ಯೋಗ ಸುದ್ದಿ | ACTPnews

ಕರ್ನಾಟಕ ಸರ್ಕಾರದ ಉದ್ಯೋಗಗಳು


Last Updated:

ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದಲ್ಲಿ 18 ಸೆಕ್ಷನ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. LLB ಪದವೀಧರರಿಗೆ ₹69,250-1,34,200 ವೇತನ. ಅರ್ಜಿ ಸಲ್ಲಿಸಲು 19-08-2026 ಕೊನೆಯ ದಿನ.

ಕರ್ನಾಟಕ ಸರ್ಕಾರದ ಉದ್ಯೋಗಗಳು
ಕರ್ನಾಟಕ ಸರ್ಕಾರದ ಉದ್ಯೋಗಗಳು

ಬೆಂಗಳೂರು: ಕರ್ನಾಟಕ ಸರ್ಕಾರದ (Govt) ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಹೌದು, ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದಲ್ಲಿ (Karnataka State Legal Services Authority) ಖಾಲಿ ಇರುವ ವಿವಿಧ ಹುದ್ದೆಗಳನ್ನು (Jobs) ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ನೀವು ಕೂಡ ಉತ್ತಮ ಸರ್ಕಾರಿ ಅಥವಾ ಪ್ರಾಧಿಕಾರದ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಕೂಡಲೇ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮತ್ತು ಅರ್ಜಿ ಸಲ್ಲಿಸಿ.

ಯಾವ ಹುದ್ದೆಗಳಿಗೆ ನೇಮಕಾತಿ? ವಿವರ ಇಲ್ಲಿದೆ

ಈ ಬಾರಿಯ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 18 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಸೆಕ್ಷನ್ ಆಫೀಸರ್ ಹುದ್ದೆಗಳು ಸೇರಿದಂತೆ ವಿವಿಧ ವೃಂದದ ಖಾಲಿ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಾನೂನು ಇಲಾಖೆ ಹಾಗೂ ಪ್ರಾಧಿಕಾರದಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ ಎಂದು udyogadeepa.net ವರದಿ ಮಾಡಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಕ್ಕಾಗಿ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಒಳ್ಳೆಯದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 19-08-2026 ಕೊನೆಯ ದಿನಾಂಕವಾಗಿದೆ. ನಿಗದಿತ ದಿನಾಂಕದೊಳಗೆ ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಅರ್ಜಿಯನ್ನು ಸಲ್ಲಿಸಿ.

ಹುದ್ದೆಗಳ ಸಂಖ್ಯೆ: 18

ಪ್ರಮುಖ ಹುದ್ದೆ: ಸೆಕ್ಷನ್ ಆಫೀಸರ್

ಕೊನೆಯ ದಿನಾಂಕ: 19-08-2026

ವಿದ್ಯಾರ್ಹತೆ

ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ LLB ಪೂರ್ಣಗೊಳಿಸಿರಬೇಕು.

ಮಾಸಿಕ ವೇತನರೂ. 69,250 – 1,34,200/-ವರೆಗೆ

ಉದ್ಯೋಗ ಸ್ಥಳಬೆಂಗಳೂರು – ಕರ್ನಾಟಕ

ವಯೋಮಿತಿ

ಅಭ್ಯರ್ಥಿಯ ಗರಿಷ್ಠ ವಯಸ್ಸು 20-07-2026 ರಂತೆ 40 ವರ್ಷ ವಯೋಮಿತಿಯನ್ನು ಹೊಂದಿರಬೇಕು.ವಯೋಮಿತಿ ಸಡಿಲಿಕೆ

ಇತರ ಹಿಂದುಳಿದ ವರ್ಗಗಳ 2(A)/ 2(B)/ 3(A)/ 3(B): 3 ವರ್ಷಗಳು

SC/ST ವರ್ಗ–I ಅಭ್ಯರ್ಥಿಗಳಿಗೆ: 5 ವರ್ಷಗಳು

ಅರ್ಜಿ ಶುಲ್ಕ

SC/ ST/ OBC/ Cat-I ಅಭ್ಯರ್ಥಿಗಳಿಗೆ: ₹500/-

ಇತರ ಎಲ್ಲಾ ಅಭ್ಯರ್ಥಿಗಳಿಗೆ: ₹1000/-

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

ಸ್ಪರ್ಧಾತ್ಮಕ ಪರೀಕ್ಷೆ

ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?

ಅಧಿಕೃತ ವೆಬ್‌ಸೈಟ್ಗೆ  ಭೇಟಿ ನೀಡಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed