Kumar Bangarappa: ನ್ಯಾಯ ಬೆಲೆ ಅಂಗಡಿ ಮುಂದೆ ಡ್ಯಾನ್ಸ್ ಮಾಡಿದ ಕುಮಾರ್ ಬಂಗಾರಪ್ಪ! ಯಾಕೆ ಗೊತ್ತಾ? | | ACTPnews

ನ್ಯಾಯ ಬೆಲೆ ಅಂಗಡಿ ಮುಂದೆ ಡ್ಯಾನ್ಸ್ ಮಾಡಿದ ಕುಮಾರ್ ಬಂಗಾರಪ್ಪ!


Last Updated:

ದರ್ಶನ್ ಅಭಿನಯದ ಚಕ್ರವರ್ತಿ ಆದ್ಮೇಲೆ ಕುಮಾರ್ ಬಂಗಾರ ಬಣ್ಣ ಹಚ್ಚಿದ್ದಾರೆ. ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಿತ್ರದಲ್ಲಿ ಇವರೇ ನಾಯಕರೂ ಆಗಿದ್ದಾರೆ. ಈ ಚಿತ್ರದ ಪ್ರಚಾರವು ಶುರು ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ನ್ಯಾಯ ಬೆಲೆ ಅಂಗಡಿ ಮುಂದೆ ಡ್ಯಾನ್ಸ್ ಮಾಡಿದ ಕುಮಾರ್ ಬಂಗಾರಪ್ಪ!
ನ್ಯಾಯ ಬೆಲೆ ಅಂಗಡಿ ಮುಂದೆ ಡ್ಯಾನ್ಸ್ ಮಾಡಿದ ಕುಮಾರ್ ಬಂಗಾರಪ್ಪ!

ಸರ್ಕಾರಿ ನ್ಯಾಯ ಬೆಲೆ ಅಂಗಡಿ (Sarkaari Nyayabele Angadi Movie) ಅನ್ನುವ ಚಿತ್ರ ಬರ್ತಿದೆ. ಈ ವಿಷಯದ ಮೇಲೆ ಬರ್ತಿರೋ ಮೊದಲ ಚಿತ್ರ ಇದಾಗಿದೆ. ಕುಮಾರ್ ಬಂಗಾರಪ್ಪ (Kumar Bangarappa) ಈ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ. ಈ ತಿಂಗಳ ಕೊನೆಯಲ್ಲಿ ಈ ಸಿನಿಮಾ ಬರ್ತಿದೆ. ಇದರ ಪ್ರಚಾರಕ್ಕೆ ಕುಮಾರ್ ಬಂಗಾರಪ್ಪ (Kumar Bangarappa) ಸಾಥ್ ಕೊಟ್ಟಿದ್ದಾರೆ. ಸರ್ಕಾರಿ ನ್ಯಾಯ ಬೆಲೆ ಅಂಗಡಿ (Sarkaari Nyayabele Angadi) ಮುಂದೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಪ್ರಚಾರದ ಈ ವಿಡಿಯೋ ವೈರಲ್ ಕೂಡ ಆಗಿದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕುಮಾರ್ ಬಂಗಾರಪ್ಪ

ಕುಮಾರ್ ಬಂಗಾರಪ್ಪ ಕೊನೆಯದಾಗಿ 2017 ರಲ್ಲಿ ಬಂದ ಚಕ್ರವರ್ತಿ ಚಿತ್ರದಲ್ಲಿ ನಟಿಸಿದ್ದರು. ದರ್ಶನ್ ಈ ಚಿತ್ರದ ನಾಯಕರಾಗಿದ್ದರು. ಈ ಚಿತ್ರ ಆದ್ಮೇಲೆ ಮತ್ತೆ ಬಣ್ಣ ಹಚ್ಚಿರಲಿಲ್ಲ.
Kumar Bangarappa Sarkaari Nyayabele Angadi Movie Latest Updates

ಚಿತ್ರ ಯಾವಾಗ ರಿಲೀಸ್ (ಚಿತ್ರ ಕೃಪೆ: ಫಸ್ಟ್ ಡೇ ಫ್ಟ್ ಶೋ ಇನ್‌ಸ್ಟಾಗ್ರಾಮ್)

ಆದರೆ, ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಿತ್ರದಲ್ಲಿ ಇವರು ನಾಯಕರಾಗಿದ್ದಾರೆ. ತುಂಬಾ ವರ್ಷಗಳ ಬಳಿಕ ಹೀರೋ ಆಗಿದ್ದಾರೆ. ಈ ಚಿತ್ರದ ಪ್ರಚಾರ ಶುರು ಆಗಿದೆ.

ನ್ಯಾಯ ಬೆಲೆ ಅಂಗಡಿ

ಸರ್ಕಾರಿ ನ್ಯಾಯ ಬೆಲೆ ಅಂಗಡಿ ಮುಂದೆ ಡ್ಯಾನ್ಸ್ ಮಾಡಿದ್ದಾರೆ. ಚಿತ್ರ ತಂಡದ ಇತರ ಸದಸ್ಯರು ಹಾಗೂ ಡ್ಯಾನ್ಸರ್ಸ್ ಇವರಿಗೆ ಸಾಥ್ ಕೊಟ್ಟಿದ್ದಾರೆ.

ಈ ಡ್ಯಾನ್‌ ಸುಮ್ನೆ ಏನೂ ಅಲ್ಲ. ಸಿನಿಮಾದ ಪ್ರಚಾರಕ್ಕಾಗಿಯೇ ಈ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಒಳ್ಳೆ ವಿಷಯವೇ ಇದೆ. ಈ ವಿಷಯದ ಮೇಲೆ ಬರ್ತಿರೋ ಮೊದಲ ಕನ್ನಡ ಸಿನಿಮಾ ಇದಾಗಿದೆ ಅನ್ನುವ ಮಾಹಿತಿ ಸಿಗುತ್ತದೆ.

ಟೈಟಲ್ ಟ್ರ್ಯಾಕ್

ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಿತ್ರದಲ್ಲಿ ಒಂದು ಟೈಟಲ್ ಟ್ರ್ಯಾಕ್ ಇದೆ. ಇದನ್ನ ಗಾಯಕ ನವೀನ್ ಸಜ್ಜು ಹಾಡಿದ್ದಾರೆ. ವಿಶೇಷವೆಂದ್ರೆ ಈ ಹಾಡಿನಲ್ಲಿ ಇವರೂ ಕಾಣಿಸಿಕೊಂಡಿದ್ದಾರೆ. ವಿ.ಮನೋಹರ್ ಇದನ್ನ ಬರೆದಿದ್ದಾರೆ. ಅನಂತ್ ಆರ್ಯನ್ ಮ್ಯೂಸಿಕ್ ಮಾಡಿದ್ದಾರೆ.

Kumar Bangarappa Sarkaari Nyayabele Angadi Movie Latest Updates

ಸರ್ಕಾರಿ ನ್ಯಾಯ ಬೆಲೆ ಅಂಗಡಿ ಪ್ರಚಾರ (ಚಿತ್ರ ಕೃಪೆ: ಫಸ್ಟ್ ಡೇ ಫ್ಟ್ ಶೋ ಇನ್‌ಸ್ಟಾಗ್ರಾಮ್)

ಹಾಗೆ ಚಿತ್ರದ ಪ್ರಚಾರಕ್ಕೆ ಈ ಹಾಡನ್ನೆ ಚಿತ್ರ ಆಯ್ಕೆ ಮಾಡಿಕೊಂಡಿದೆ. ಈ ಹಾಡಿಗೇನೆ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಮುಂದೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಕುಮಾರ್ ಬಂಗಾರಪ್ಪ ಕೂಡ ಅಂಗಡಿ ಮುಂದೆ ಡ್ಯಾನ್ಸ್ ಮಾಡಿದ್ದಾರೆ ನೋಡಿ.

ಚಿತ್ರ ಯಾವಾಗ ರಿಲೀಸ್

ಸರ್ಕಾರಿ ನ್ಯಾಯ ಬೆಲೆ ಅಂಗಡಿ ರಿಲೀಸ್ ಆಗುತ್ತಿದೆ. ಇದೇ ಜುಲೈ-31ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾದ ಪ್ರಚಾರ ಶುರು ಆಗಿದೆ.

ಈ ಚಿತ್ರವನ್ನ ಸಾತ್ವಿಕ್ ಪವನ್ ಕುಮಾರ್ ಡೈರೆಕ್ಷನ್ ಮಾಡಿದ್ದಾರೆ. ವಿಶೇಷವೆಂದ್ರೆ ಇವರು ಈ ಚಿತ್ರದ ಕ್ಯಾಮರಾಮನ್ ಕೂಡ ಆಗಿದ್ದಾರೆ. ಇವರು ಈ ಹಿಂದೆ ತಾಯವ್ವ ಚಿತ್ರಕ್ಕೂ ಕೆಲಸ ಮಾಡಿದ್ದಾರೆ.

ಚಿತ್ರಕತೆ ಯಾರದ್ದು

ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಕತೆ ಬರೆದಿದ್ದಾರೆ. ಚಿತ್ರಕತೆಯನ್ನು ಕೂಡ ಇವರೇ ಮಾಡಿದ್ದಾರೆ. ಡೈಲಾಗ್ ಕೂಡ ಇವರೆ ಕೊಟ್ಟಿದ್ದಾರೆ. ಈ ಚಿತ್ರವನ್ನ ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿಯೇ ಸಂಪೂರ್ಣವಾಗಿಯೇ ಚಿತ್ರೀಕರಣ ಮಾಡಲಾಗಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed