Last Updated:
NHAI ನಿಂದ ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಡಿಜಿಟಲ್ ಪಾಸ್ ಸೌಲಭ್ಯ. ‘ರಾಜಮಾರ್ಗಯಾತ್ರಾ’ ಆ್ಯಪ್ ಮೂಲಕ ಸುಲಭವಾಗಿ ಪಡೆಯಬಹುದು. ಅನಿಯಮಿತ ಪ್ರಯಾಣ, ಸಮಯ ಮತ್ತು ಹಣ ಉಳಿತಾಯ.
ಬೆಂಗಳೂರು: ನೀವು ಟೋಲ್ ಪ್ಲಾಜಾದ (Toll Plaza) ಅಕ್ಕ-ಪಕ್ಕದಲ್ಲೇ ವಾಸಿಸುತ್ತಿದ್ದೀರಾ? ಹಾಗಾದರೆ ಈ ಲೇಖನ ಸಂಪೂರ್ಣವಾಗಿ ನಿಮ್ಮ ಗಮನಕ್ಕೆ. ಪ್ರತಿದಿನ ಟೋಲ್ ಗೇಟ್ ದಾಟಲು ಹೈರಾಣಾಗಿ ಹೋಗಿರುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಅತ್ಯಂತ ಮಹತ್ವದ ಹಾಗೂ ಖುಷಿಯ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ನೀವು ಟೋಲ್ ಶುತಿ ಕಟ್ಟಿ ಸುಸ್ತಾಗಬೇಕಿಲ್ಲ, ಬದಲಿಗೆ ಸರಳವಾಗಿ ಡಿಜಿಟಲ್ (Digital) ಪಾಸ್ (Pass) ಪಡೆಯುವ ಮೂಲಕ ಹಣ ಉಳಿಸಬಹುದು.
ಅನಿಯಮಿತ ಪ್ರಯಾಣ: ಒಮ್ಮೆ ಸ್ಥಳೀಯ ಪಾಸ್ ಪಡೆದರೆ, ಒಂದು ತಿಂಗಳ ಪೂರ್ತಿ ಸಂಬಂಧಿತ ಟೋಲ್ ಪ್ಲಾಜಾದ ಮೂಲಕ ಯಾವುದೇ ಅಡೆತಡೆಯಿಲ್ಲದೆ ಅನಿಯಮಿತವಾಗಿ ಸಂಚರಿಸಬಹುದು.
ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ: ಸಾಪ್ರದಾಯಿಕವಾಗಿ ದೀರ್ಘ ಸಾಲುಗಳಲ್ಲಿ ನಿಂತು ದಾಖಲೆಗಳನ್ನು ನೀಡಿ ಪಾಸ್ ನವೀಕರಿಸುವ ತಾಪತ್ರಯದಿಂದ ಸಂಪೂರ್ಣ ಮುಕ್ತಿ ಸಿಕ್ಕಿದೆ.
ಹಣ ಮತ್ತು ಸಮಯ ಉಳಿತಾಯ: ಹತ್ತಿರದಲ್ಲೇ ವಾಸಿಸುವ ನಿವಾಸಿಗಳಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಉಪಶಮನ ದೊರೆಯಲಿದೆ.
ನೀವು ಕೂಡ ಟೋಲ್ ಪ್ಲಾಜಾದ 20 ಕಿ.ಮೀ ಸುತ್ತಮುತ್ತಲಿನ ನಿವಾಸಿಯಾಗಿದ್ದರೆ, ತಡಮಾಡದೆ ಕೂಡಲೇ ನಿಮ್ಮ ಮೊಬೈಲ್ನಲ್ಲಿ ‘ರಾಜಮಾರ್ಗಯಾತ್ರಾ’ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ. ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ನಿಮ್ಮ ‘ಸ್ಥಳೀಯ ಪಾಸ್’ ಅನ್ನು ಆನ್ಲೈನ್ನಲ್ಲೇ ಸಕ್ರಿಯಗೊಳಿಸಿ ಹಾಗೂ ನಿಮ್ಮ ದೈನಂದಿನ ಮಾಸಿಕ ಪ್ರಯಾಣವನ್ನು ಸಂಪೂರ್ಣ ತೊಂದರೆರಹಿತ ಮತ್ತು ಸುಲಭವಾಗಿಸಿಕೊಳ್ಳಿ.
Bangalore [Bangalore],Bangalore,Karnataka
Jul 22, 2026 12:00 PM IST














