FIFA World Cup: ಕೇರಳದಲ್ಲಿ ಫಿಫಾ ವಿಶ್ವಕಪ್‌ ಕ್ರೇಜ್​, ಯುವಪೀಳಿಗೆಯ ಉತ್ಸಾಹಕ್ಕೆ ಕೇರಳ ಸರ್ಕಾರದ ಸಾಥ್​! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಭಾರತದ ಕಾಲಮಾನದ ಪ್ರಕಾರ ತಡರಾತ್ರಿ ನಡೆದ ಫುಟ್ಬಾಲ್​ ಪಂದ್ಯ ವೀಕ್ಷಿಸಿದ ವಿದ್ಯಾರ್ಥಿಗಳಿಗೆ ಕೇರಳ ಸರ್ಕಾರ ರಜೆಯ ಗುಡ್​ ನ್ಯೂಸ್​ ನೀಡಿದೆ. 

News18
News18

ಕಾಸರಗೋಡು (ಜು.20): ಮೆಟ್‌ ಲೈಫ್ ಸ್ಟೇಡಿಯಂನಲ್ಲಿ ನಡೆದ 2026ರ ಫಿಫಾ ವಿಶ್ವಕಪ್‌ ಫೈನಲ್​ ಪಂದ್ಯದಲ್ಲಿ  ಅರ್ಜೆಂಟೀನಾ ವಿರುದ್ಧ 1-0 ಗೋಲುಗಳ ಮೂಲಕ ಸ್ಪೇನ್ ಭರ್ಜರಿ ಜಯ ಸಾಧಿಸಿದೆ. ಭಾರತದಲ್ಲೂ ಫುಟ್ಬಾಲ್​ ಕ್ರೇಜ್ ಕಡಿಮೆ ಇಲ್ಲ. ಅದರಲ್ಲೂ ಕೇರಳ ರಾಜ್ಯದಲ್ಲಿ ಫುಟ್ಬಾಲ್​​ ಪ್ರೇಮಿಗಳ ದಂಡೇ ಇದೆ. ಭಾರತದ ಕಾಲಮಾನದ ಪ್ರಕಾರ ತಡರಾತ್ರಿ ನಡೆದ ಫುಟ್ಬಾಲ್​ ಪಂದ್ಯ ವೀಕ್ಷಿಸಿದ ವಿದ್ಯಾರ್ಥಿಗಳಿಗೆ ಕೇರಳ ಸರ್ಕಾರ ರಜೆಯ ಗುಡ್​ ನ್ಯೂಸ್​ ನೀಡಿದೆ. 

ಕೇರಳ ಸರ್ಕಾರದಿಂದ ರಜೆ ಘೋಷಣೆ

ವಿಶ್ವಕಪ್‌ ಫೈನಲ್‌ ಪಂದ್ಯದ ಹಿನ್ನೆಲೆ ಕೇರಳ ಸರ್ಕಾರ ಸೋಮವಾರ (ಜುಲೈ 20) ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಕೇರಳದಲ್ಲಿ ಅದರಲ್ಲೂ ಮಲಬಾರ್‌ ಪ್ರದೇಶದಲ್ಲಿ ಫುಟ್ಬಾಲ್‌ ಕ್ರೇಜ್ ತುಸು ಹೆಚ್ಚಾಗಿದೆ. ಅಲ್ಲಲ್ಲಿ ಪ್ರತ್ಯೇಕ ಪರದೆಯನ್ನ ಹಾಕಿ ಪಂದ್ಯಾವಳಿ ವೀಕ್ಷಣೆ ಮಾಡ್ತಾರೆ ಜನ. ಜೊತೆಗೆ ಕ್ರೀಡಾ ಪಟುಗಳ ಕಟ್‌ ಔಟ್‌ಗಳನ್ನು ಹಾಕಿ ಸಂಭ್ರಮಿಸುವಷ್ಟು ಕ್ರೇಜ್ ಹೊಂದಿದ್ದಾರೆ ಈ ಜನ.

ಇಂದು ಶಾಲೆಗಳಿಗೆ ರಜೆ

ಕ್ರೀಡೆಯನ್ನ ಹೆಚ್ಚು ಉತ್ತೇಜಿಸುವ ಕೇರಳದ ಸರ್ಕಾರದ ನೀತಿಯ ಭಾಗವಾಗಿ, ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜುಲೈ 20  ಸೋಮವಾರದಂದು ರಜೆ ನೀಡಿ ಆದೇಶ ಹೊರಡಿಸಿದೆ. ಆದ್ರೆ ಪಿಎಸ್‌ಸಿ, ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಿಗದಿಯಂತೆ ಪರೀಕ್ಷೆ ನಡೆಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮ್ಯಾಚ್‌ ನೋಡಿ ಸುಸ್ತಾದ ಮಕ್ಕಳಿಗೆ ರಜೆ

ಭಾನುವಾರ ಮಧ್ಯರಾತ್ರಿಯ ಫುಟ್ಬಾಲ್​ ಪಂದ್ಯ ನಡೆದಿದ್ದು, ಆಟ ಸೋಮವಾರ ಬೆಳಗ್ಗೆ ಅಷ್ಟೇ ಕೊನೆಗೊಂಡಿದೆ. ರಾತ್ರಿಯಿಡೀ ವಿದ್ಯಾರ್ಥಿಗಳು ಫುಟ್ಬಾಲ್​ ಪಂದ್ಯ ನೋಡಿ ಮಲಗಿ, ಬೆಳಗ್ಗೆ ಎಂದು ಶಾಲೆ-ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಿಲ್ಲ. ಅಲ್ಲದೆ ತೀವ್ರ ಆಯಾಸಗೊಳ್ತಾರೆ ಎಂದು ವಿದ್ಯಾರ್ಥಿಗಳ ಆರೋಗ್ಯ ಪರಿಗಣಿಸಿ ರಜೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಕ್ಕಳ ಉತ್ಸಾಹ ಬೆಂಬಲಿಸಲು ಈ ನಿರ್ಧಾರ

ಕೇರಳದ ಎಲ್ಲಾ ಶಾಲೆ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದ್ದು.  ಹಲವು ಶಾಲೆಗಳಲ್ಲಿನ ಸೋಮವಾರದ ಪರೀಕ್ಷೆಯನ್ನು ಸಹ ಮುಂದೂಡಲಾಗಿದೆ.‌ ಮಕ್ಕಳ ಉತ್ಸಾಹವನ್ನು ಕುಗ್ಗಿಸದೆ ಅವರ ಉತ್ಸಾಹವನ್ನ ಬೆಂಬಲಿಸೋದೇ ಈ ರಜೆ ನಿರ್ಧಾರದ ಹಿಂದಿನ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.

ಇದನ್ನೂ ಓದಿ: Prajwal Revanna: ಅಜ್ಜಿ ಅಂತ್ಯಕ್ರಿಯೆಯಲ್ಲಿ ಪ್ರಜ್ವಲ್ ರೇವಣ್ಣ ಭಾಗಿ, ಆದ್ರೆ ಜೈಲಿಂದ ಹೊರಗೆ ಬರಲ್ಲ!

ಫಿಫಾ ವಿಶ್ವಕಪ್​ನಲ್ಲಿ ಸ್ಪೇನ್ ಭರ್ಜರಿ ಜಯ ಸಾಧಿಸಿದೆ. ಸ್ಪೇನ್​ ತಂಡ ಗೆದ್ದ ಎರಡನೇ ವಿಶ್ವಕಪ್ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ 2010 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ಮತ್ತೊಮ್ಮೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ, ಫುಟ್‌ಬಾಲ್ ಇತಿಹಾಸದಲ್ಲೇ ಒಂದೇ ಸಮಯದಲ್ಲಿ ಪುರುಷರ ಮತ್ತು ಮಹಿಳೆಯರ (2023) ವಿಶ್ವಕಪ್ ಟ್ರೋಫಿಗಳನ್ನು ಹೊಂದಿರುವ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಸ್ಪೇನ್ ಪಾತ್ರವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed