V Nagendra Prasad: 50ನೇ ಜನ್ಮ ದಿನಕ್ಕೆ ‘ಕವಿರತ್ನ ಸಾರ್ಥಕ ಸುವರ್ಣ’; ವಿ.ನಾಗೇಂದ್ರ ಪ್ರಸಾದ್‌ ವಿಶೇಷ ಸಮ್ಮಾನ! | | ACTPnews

kaviratna sarthaka suvarna v nagendra prasad 50th birthday celebration program


ವಿ.ನಾಗೇಂದ್ರ ಪ್ರಸಾದ್ @ 50

ವಿ.ನಾಗೇಂದ್ರ ಪ್ರಸಾದ್ ಅವರಿಗೆ 50 ವರ್ಷ ಆಯಿತು ನೋಡಿ. ಈ ಒಂದು ಜನ್ಮ ದಿನವನ್ನ ಅಷ್ಟೆ ವಿಶೇಷವಾಗಿಯೇ ಆಚರಿಸಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಕಳೆದ 30 ವರ್ಷಗಳಿಂದಲೂ ಕೆಲಸ ಮಾಡ್ತಾನೇ ಇದ್ದಾರೆ. ಗೀತರಚನೆ, ಸಂಗೀತ, ನಟನೆ, ಸಂಭಾಷಣೆ ಹೀಗೆ ಎಲ್ಲ ವಿಭಾಗಲ್ಲೂ ಕೆಲಸ ಮಾಡ್ತಾನೇ ಬಂದಿದ್ದಾರೆ.
ವಿ.ನಾಗೇಂದ್ರ ಪ್ರಸಾದ್‌ ವಿಶೇಷ ಸಮ್ಮಾನ

ಇವರ ಈ ಒಂದು ಅಪಾರ ಕೊಡುಗೆಯನ್ನ ಗೌರವಿಸೋ ಕೆಲಸ ಆಗುತ್ತಿದೆ. ಇಲ್ಲಿವರೆಗೂ ಇವರು 3000ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಇವರ ಈ ಹಾಡುಗಳನ್ನ ಸಂಭ್ರಮಿಸೋದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

100 ಕ್ಕೂ ಹೆಚ್ಚು ಹಾಡುಗಳ ಗಾಯನ

ವಿ. ನಾಗೇಂದ್ರ ಪ್ರಸಾದ್ ಬರೆದ ಹಾಡುಗಳಲ್ಲಿ100 ಹಾಡುಗಳನ್ನ ಹಾಡುವ ಕೆಲಸವು ಇಲ್ಲಾಗುತ್ತಿದೆ. ಗಾಯಕ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಸೇರಿದಂತೆ ಇನ್ನು ಹಲವು ಗಾಯಕರು ಮತ್ತು ಗಾಯಕಿಯರು ಈ ಹಾಡುಗಳನ್ನ ಇಲ್ಲಿ ಹಾಡಲಿದ್ದಾರೆ.

ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆ

ಈ ‘ಕವಿರತ್ನ ಸಾರ್ಥಕ ಸುವರ್ಣ’ ಕಾರ್ಯಕ್ರಮ ಬರೋಬ್ಬರು 12 ಗಂಟೆ ಪ್ಲಾನ್ ಮಾಡಲಾಗಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಭವನದಲ್ಲಿಯೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾನಟೆ ಆಗುತ್ತಿದೆ. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಇರುತ್ತದೆ. ಈ ಒಂದು ಕಾರ್ಯಕ್ರಮದಲ್ಲಿ 1,000ಕ್ಕೂ ಹೆಚ್ಚು ನಟರು, ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು, ಗಾಯಕ-ಗಾಯಕಿಯರು, ತಂತ್ರಜ್ಞರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

kaviratna sarthaka suvarna v nagendra prasad 50th birthday celebration program

ವಿ.ನಾಗೇಂದ್ರ ಪ್ರಸಾದ್ ಹೇಳೋದೇನು

ಅಲ್ಲದೆ ಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿ ಹಾಗೂ ಅನೇಕ ಗಣ್ಯರು ಉದ್ಘಾಟನಾ ಮತ್ತು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ ಅಂತಲೇ ಹೇಳಬಹುದು.

ವಿ.ನಾಗೇಂದ್ರ ಪ್ರಸಾದ್ ಹೇಳೋದೇನು

ನನಗೆ ಹರಿಹರ ಕಾರ್ಯಕ್ರಮದಲ್ಲಿ ಕವಿರತ್ನ ಅಂತ ಬಿರುದು ಕೊಟ್ಟರು. ಅದು ಇಲ್ಲಿವರೆಗೂ ಸಾಗಿ ಬಂದಿದೆ. ಇದೀಗ ಕವಿರತ್ನ ಸಾರ್ಥಕ ಸುವರ್ಣ ಕಾರ್ಯಕ್ರಮ ನಡೆಯುತ್ತಿದೆ.

ಈ ಕಾರ್ಯಕ್ರಮಕ್ಕೆ ಕಲಾವಿದರು, ನಿರ್ದೇಶಕರು, ತಂತ್ರಜ್ಞರು, ಸಿನಿಮಾ ಕಾರ್ಮಿಕರು ಹೀಗೆ ಎಲ್ಲರೂ ಭಾಗಿ ಆಗುತ್ತಿದ್ದಾರೆ. ಇದೊಂದು ದೊಡ್ಡ ಕಾರ್ಯಕ್ರಮವೇ ಆಗಿದೆ. ಇದಕ್ಕೆ ನಿಮ್ಮ ಸಹಕಾರ ಇರಲಿ ಅಂತಲೇ ಜುಲೈ-17 ರಂದು ನಡೆದ ಪ್ರೆಸ್ ಮೀಟ್ ಅಲ್ಲಿ ವಿ.ನಾಗೇಂದ್ರ ಪ್ರಸಾದ್ ಕೇಳಿಕೊಂಡಿದ್ದಾರೆ.

ಲವ್ಲಿ ಸ್ಟಾರ್ ಪ್ರೇಮ್ ಬೇಸರ

ಲವ್ಲಿ ಸ್ಟಾರ್ ಪ್ರೇಮ್ ಕೂಡ ಈ ಪ್ರೆಸ್ ಮೀಟ್ ಅಲ್ಲಿದ್ದರು. ಇವರ ಬರವಣಿಗೆ ಇದ್ದರೆ ನಮ್ಮಂತವರ ಮೆರವಣಿಗೆ ಅಂತಲೇ ನೆನಪಿರಲಿ ಪ್ರೇಮ್ ಬಣ್ಣಿಸಿದ್ದಾರೆ.

ಬೇರೆ ಭಾಷೆಯಲ್ಲಿ ಯಾರ್ ಯಾರಿಗೋ ಪ್ರಶಸ್ತಿಗಳು ಬಂದಿವೆ. ಆದರೆ, ನಮ್ಮಲ್ಲಿ ಆ ರೀತಿ ಆಗಲೇ ಇಲ್ಲ. 3000 ಹಾಡು ಬರೆದವರಿಗೆ, 300 ಸಿನಿಮಾಗಳಿಗೆ ಸಂಗೀತ ಮತ್ತು ಸಾಹಿತ್ಯ ಮಾಡಿದ ಹಂಸಲೇಖ ಅವರಿಗೂ ಪದ್ಮಶ್ರೀ ಬರಬೇಕಿತ್ತು. ಆದರೆ, ಬರದೆ ಇರೋದೇ ಶೋಚನೀಯ ಅಂತಲೇ ನೆನಪಿರಲಿ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed