IND vs ENG: ಆರ್ಚರ್-ಅಟ್ಕಿನ್ಸನ್​ ದಾಳಿಗೆ ಧೂಳೀಪಟವಾದ ಟೀಮ್ ಇಂಡಿಯಾ! 233 ರನ್​ಗಳಿಗೆ ಸರ್ವಪತನ ಕಂಡ ಭಾರತ ತಂಡ | ಕ್ರೀಡಾ ಸುದ್ದಿ | ACTPnews

ಶ್ರೇಯಸ್ ಅಯ್ಯರ್


Last Updated:

2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ವಿರಾಟ್ ಕೊಹ್ಲಿ (65) ಹಾಗೂ ಶ್ರೇಯಸ್​ ಅಯ್ಯರ್ (66) ಸಿಡಿಸಿದ ಅರ್ಧಶತಗಳ ಹೊರತಾಗಿಯೂ 233 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್

ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಇಂಗ್ಲೆಂಡ್ ವೇಗಿಗಳ ದಾಳಿಗೆ ತತ್ತರಿಸಿತು. ವಿರಾಟ್ ಕೊಹ್ಲಿ (65) ಹಾಗೂ ಶ್ರೇಯಸ್​ ಅಯ್ಯರ್ (66) ಸಿಡಿಸಿದ ಅರ್ಧಶತಕಗಳ ಹೊರತಾಗಿಯೂ 233 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ. ಇಂಗ್ಲೆಂಡ್ ಸರಣಿ ಸಮಬಲ ಸಾಧಿಸಲು ಇಂಗ್ಲೆಂಡ್ 50 ಓವರ್​ಗಳಲ್ಲಿ 234 ರನ್​ಗಳಿಸಬೇಕಾಗಿದೆ.

ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ ನಾಯಕ ಶುಭ್​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ 44 ರನ್ ಸೇರಿಸಿದರು. ಸ್ಫೋಟಕ ಆಟಕ್ಕೆ ಮುಂದಾದ ಗಿಲ್​ 30 ಎಸೆತಗಳಲ್ಲಿ 6 ಬೌಂಡರಿ ಸಹಿತ 31 ರನ್​​ಗಳಿಸಿ ಗಸ್​ ಅಟ್ಕಿನ್ಸನ್​ಗೆ ವಿಕೆಟ್ ಒಪ್ಪಿಸಿದರು. ನಂತರ ಒಂದಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ 2ನೇ ವಿಕೆಟ್​​ಗೆ 60 ರನ್​ ಸೇರಿಸಿದರು. ಇಂದೂ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದ ರೋಹಿತ್ 47 ಎಸೆತಗಳಲ್ಲಿ ತಲಾ ಒಂದು ಬೌಂಡರಿ, 1 ಸಿಕ್ಸರ್ ಸಹಿತ ಕೇವಲ 26 ರನ್​ ಗಳಿಸಿ ಔಟ್ ಆದರು.

ರೋಹಿತ್ ನಂತರ ಬಂದ ಇಶಾನ್ ಕಿಶನ್ 8 ಎಸೆತಗಳನ್ನಾಡಿ ಕೇವಲ 1 ರನ್​ಗಳಿಸಿ ಆರ್ಚರ್​ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಬಂದ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ 4ನೇ ವಿಕೆಟ್ ಜೊತೆಯಾಟದಲ್ಲಿ 67 ರನ್​ ಸೇರಿಸಿ ತಂಡದ ಮೊತ್ತವನ್ನ ಹೆಚ್ಚಿಸಿದರು. ಆದರೆ ವಿರಾಟ್ ಕೊಹ್ಲಿ 66 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 65 ರನ್​ಗಳಿಸಿ ಔಟ್ ಆದರು. ವಿರಾಟ್ ವಿಕೆಟ್ ಬೀಳುತ್ತಿದ್ದಂತೆ ಭಾರತ ಪೆವಿಲಿಯನ್ ಪರೇಡ್ ನಡೆಸಿತು.

6ನೇ ಕ್ರಮಾಂಕದಲ್ಲಿ ಬಂದ ವಾಷಿಂಗ್ಟನ್ ಸುಂದರ್ 5 ಎಸೆತಗಳಲ್ಲಿ 2, ಅಕ್ಷರ್ ಪಟೇಲ್ 5 ಎಸೆತಗಳಲ್ಲಿ 1 ರನ್​, ಶಿವಂ ದುಬೆ ಖಾತೆ ತೆರೆಯದೇ ಗೋಲ್ಡನ್ ಡಕ್ ಆದರು. ಬಾಲಂಗೋಚಿಗಳಾದ ಗುರ್ನೂರ್ ಬ್ರಾರ್ 15 ಎಸೆತಗಳಲ್ಲಿ 7 ರನ್​ಗಳಿಸಿ ಔಟ್ ಆದರು. ಶ್ರೇಯಸ್ ಅಯ್ಯರ್ 71 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​ಗಳ ಸಹಿತ 66 ರನ್​ಗಳಿಸಿ 44ನೇ ಓವರ್​​ನಲ್ಲಿ ಆಟ್ಕಿನ್ಸನ್​ಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್​​ನಲ್ಲಿ ಪ್ರಸಿದ್ಧ್ ಕೃಷ್ಣ ಖಾತೆ ತೆರೆಯದೇ ನಿರ್ಗಮಿಸಿದರು. ಬುಮ್ರಾ 13 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 20 ರನ್​ಗಳಿಸಿದರು.

ಇಂಗ್ಲೆಂಡ್ ಪರ ಮಾರಕ ದಾಳಿ ನಡೆಸಿದ ಜೋಫ್ರಾ ಆರ್ಚರ್ 47ಕ್ಕೆ3, ಗಸ್ ಅಟ್ಕಿನ್ಸನ್ 50ಕ್ಕೆ3, ಸಾದಿಕ್ ಮಹ್ಮೂದ್ 50ಕ್ಕೆ2, ಸ್ಯಾಮ್ ಕರನ್ 23ಕ್ಕೆ1, ವಿಲ್ ಜಾಕ್ಸ್ 21ಕ್ಕೆ1 ವಿಕೆಟ್ ಪಡೆದು ಭಾರತವನ್ನ 250ರೊಳಗೆ ನಿಯಂತ್ರಿಸಿದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports