Last Updated:
ಆಸ್ಟ್ರೇಲಿಯಾದ 39 ವರ್ಷದ ಸ್ಟಾರ್ ಆಟಗಾರ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈಗ ಮತ್ತೊಂದು ದೇಶಕ್ಕಾಗಿ ಆಡಲು ಸಜ್ಜಾಗಿದ್ದಾರೆ.
ಆಸ್ಟ್ರೇಲಿಯಾ(Australia)ದ ಸ್ಟಾರ್ ಆಟಗಾರ ಮೊಯಿಸಸ್ ಹೆನ್ರಿಕ್ಸ್ (Moises Henriques) ನಿವೃತ್ತಿ (Retirement) ಘೋಷಿಸಿದ್ದಾರೆ. ಹೆನ್ರಿಕ್ಸ್ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್(Cricket)ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಕ್ರಿಕೆಟಿಗನಾಗಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಹೆನ್ರಿಕ್ಸ್ ಅವರು ನ್ಯೂ ಸೌತ್ ವೇಲ್ಸ್ (New South Wales) ಮತ್ತು ಸಿಡ್ನಿ ಸಿಕ್ಸರ್ಸ್ (Sydney Sixers) ತಂಡಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಅವರ 22 ವರ್ಷಗಳ ಸುದೀರ್ಘ ಆಸ್ಟ್ರೇಲಿಯಾ ದೇಶೀಯ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಬಿದ್ದಿದೆ.
ಹೆನ್ರಿಕ್ಸ್ ಆಸ್ಟ್ರೇಲಿಯಾ ಪರ ಟೆಸ್ಟ್, ಏಕದಿನ ಮತ್ತು ಟಿ20 ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ್ದಾರೆ. ಆದರೆ ಮುಂದಿನ ತಿಂಗಳು ಅವರು ಈಗ ತಮ್ಮ ತಾಯ್ನಾಡು ಪೋರ್ಚುಗಲ್ ಪರ ಆಡಲಿದ್ದಾರೆ. ಪೋರ್ಚುಗಲ್ ಪರ 2028ರ ಟಿ20 ವಿಶ್ವಕಪ್ ಯುರೋಪಿಯನ್ ಅರ್ಹತಾ ಪಂದ್ಯಗಳಲ್ಲಿ ಆಡಲು ಸಜ್ಜಾಗಿದ್ದಾರೆ.
ಮೊಯಿಸಸ್ ಹೆನ್ರಿಕ್ಸ್ ಅವರು ನ್ಯೂ ಸೌತ್ ವೇಲ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ತಂಡಗಳ ಪರವಾಗಿ ಎಲ್ಲಾ ಮಾದರಿ ಕ್ರಿಕೆಟ್ನಲ್ಲಿ ಒಟ್ಟು 420 ಪಂದ್ಯಗಳನ್ನು ಆಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಿಂದಿನ ವರ್ಷವೇ ಅವರು ಪ್ರಥಮ ದರ್ಜೆ ಕ್ರಿಕೆಟ್ನಿಂದ ನಿವೃತ್ತರಾಗಿದ್ದರು.
ಮೊಯಿಸಸ್ ಹೆನ್ರಿಕ್ಸ್ ಅವರು ಮುಂದಿನ ತಿಂಗಳು 2028ರ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯುವ ಯುರೋಪಿಯನ್ ಪಂದ್ಯಾವಳಿಯಲ್ಲಿ ತಮ್ಮ ಸ್ವಂತ ದೇಶ ಪೋರ್ಚುಗಲ್ ಪರ ಆಡಲಿದ್ದಾರೆ. ಅವರು ವಿದೇಶಿ ಲೀಗ್ಗಳಿಗೂ ಲಭ್ಯವಿರುತ್ತಾರೆ. ಇದಲ್ಲದೆ, ಆಗಸ್ಟ್ನಲ್ಲಿ ಆರಂಭವಾಗುವ ಹೊಸ ಆರು ತಂಡಗಳ ಯುರೋಪಿಯನ್ ಟಿ20 ಲೀಗ್ನಲ್ಲಿ ಗ್ಲ್ಯಾಸ್ಗೋ ಕಾಸ್ಮಿಕ್ಸ್ ತಂಡದ ಪರವಾಗಿ ಆಡಲಿದ್ದಾರೆ.
ಮೊಯ್ಸೆಸ್ ಹೆನ್ರಿಕ್ಸ್ ಮೂಲತಃ ಆಸ್ಟ್ರೇಲಿಯಾದವರಲ್ಲ. ಅವರು ಪೋರ್ಚುಗಲ್ನ ಫಂಚಲ್ ನಗರದಲ್ಲಿ ಜನಿಸಿದರು. ಆದರೆ ಚಿಕ್ಕ ವಯಸ್ಸಿನಲ್ಲೇ ಕುಟುಂಬದೊಂದಿಗೆ ಆಸ್ಟ್ರೇಲಿಯಾಕ್ಕೆ ವಲಸೆ ಬಂದರು. ಅವರ ಇಬ್ಬರು ತಮ್ಮಂದಿರು ಆಸ್ಟ್ರೇಲಿಯಾದಲ್ಲಿ ಜನಿಸಿದ್ದಾರೆ. ಆದರೆ ಅವರ ಕುಟುಂಬದ ಹೆಚ್ಚಿನ ಸದಸ್ಯರು ಇನ್ನೂ ಪೋರ್ಚುಗಲ್ನಲ್ಲೇ ಇದ್ದಾರೆ. ಈಗ ಮೊಯ್ಸೆಸ್ ಹೆನ್ರಿಕ್ಸ್ ಆಸ್ಟ್ರೇಲಿಯಾವನ್ನು ಬಿಟ್ಟು ಪೋರ್ಚುಗಲ್ಗಾಗಿ ಕ್ರಿಕೆಟ್ ಆಡಲು ನಿರ್ಧರಿಸಿದ್ದಾರೆ.
ಮೊಯ್ಸೆಸ್ ಹೆನ್ರಿಕ್ಸ್ ಬಾಲ್ಯದಲ್ಲೇ ಅವರ ಕುಟುಂಬದೊಂದಿಗೆ ಆಸ್ಟ್ರೇಲಿಯಾಕ್ಕೆ ಬಂದರು. ಇಲ್ಲೇ ಅವರು ಕ್ರಿಕೆಟ್ ಆಟಗಾರರಾಗಿ ಬೆಳೆದರು.17 ವಯಸ್ಸಿನಲ್ಲಿ ನ್ಯೂ ಸೌತ್ ವೇಲ್ಸ್ (NSW) ತಂಡದೊಂದಿಗೆ ಒಪ್ಪಂದ ಮಾಡಿಕೊಂಡರು. ಅವರು ನ್ಯೂ ಸೌತ್ ವೇಲ್ಸ್ ಪರ ಒಟ್ಟು 420 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 110 ಪ್ರಥಮ ದರ್ಜೆ ಪಂದ್ಯಗಳು, 112 ಲಿಸ್ಟ್ ಎ ಪಂದ್ಯಗಳು ಮತ್ತು 198 ಟಿ20 ಪಂದ್ಯಗಳು ಸೇರಿವೆ. ತಮ್ಮ ವೃತ್ತಿಜೀವನದಲ್ಲಿ ಅವರು ಕ್ರಿಕೆಟ್ ನ್ಯೂ ಸೌತ್ ವೇಲ್ಸ್ ಜೊತೆ 14 ಮುಖ್ಯ ಟ್ರೋಫಿಗಳನ್ನು ಗೆದ್ದಿದ್ದಾರೆ.














