Last Updated:
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮೇ 20 ರಂದು ಶಿಕ್ಷಕಿಗೆ ಜಾಮೀನು ನೀಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಪುರಸ್ಕರಿಸಿದರು.
ನವದೆಹಲಿ: ಜನಕ್‌ಪುರಿ ಪ್ರದೇಶದ ಖಾಸಗಿ ಶಾಲೆಯೊಳಗೆ ಮೂರು ವರ್ಷದ ಬಾಲಕಿಯ ನಡೆದ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಶಿಕ್ಷಕಿಗೆ ನೀಡಲಾಗಿದ್ದ ಜಾಮೀನನ್ನು ಹೈಕೋರ್ಟ್ (POCSO Case) ರದ್ದುಗೊಳಿಸಿದೆ.
ಪಶ್ಚಿಮ ದೆಹಲಿಯ ಜನಕ್‌ಪುರಿ ಪ್ರದೇಶದ ಖಾಸಗಿ ಶಾಲೆಯೊಳಗೆ ಸಿಬ್ಬಂದಿಯೊಬ್ಬರು ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಶಿಕ್ಷಕಿಗೆ ನೀಡಲಾಗಿದ್ದ ಜಾಮೀನನ್ನು ದೆಹಲಿ ಹೈಕೋರ್ಟ್ ಬುಧವಾರ ರದ್ದುಗೊಳಿಸಿದ್ದು, ಮೂರು ದಿನಗಳಲ್ಲಿ ಶರಣಾಗುವಂತೆ ಸೂಚಿಸಿದೆ.
STORY | HC cancels bail to female teacher in Janakpuri school rape case
The Delhi High Court on Wednesday cancelled the bail granted to a female teacher in a case concerning the alleged rape of a three-year-old girl by a staff member inside a private school in west Delhi’s… pic.twitter.com/SZTgy2HRBX
— Press Trust of India (@PTI_News) July 15, 2026
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮೇ 20 ರಂದು ಶಿಕ್ಷಕಿಗೆ ಜಾಮೀನು ನೀಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಬುಧವಾರ ಪುರಸ್ಕರಿಸಿದರು.
‘ಪ್ರತಿವಾದಿಯು ಮೂರು ದಿನಗಳಲ್ಲಿ ಶರಣಾಗುವಂತೆ ನಿರ್ದೇಶಿಸಲಾಗಿದೆ’ ಎಂದು ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಹೇಳಿದರು ಎಂದು ಪಿಟಿಐ ವರದಿ ಮಾಡಿದೆ.
ಅಧಿಕಾರಿಗಳಿಂದ ಘಟನೆಯನ್ನು ಮರೆಮಾಚಿದ್ದಕ್ಕಾಗಿ ಶಿಕ್ಷಕಿಯನ್ನು ಬಂಧಿಸಲಾಯಿತು ಮತ್ತು ಮೇ 14 ರಂದು ವಿಚಾರಣಾ ನ್ಯಾಯಾಲಯವು ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ಮೇ 1 ರಂದು ಬಾಲಕಿಯ ತಾಯಿ ಜನಕಪುರಿ ಪೊಲೀಸ್ ಠಾಣೆಗೆ ತೆರಳಿ, ಶಾಲಾ ಸಮಯದಲ್ಲಿ ಕೇರ್ ಟೇಕರ್ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮಹಿಳೆ ನೀಡಿದ ದೂರಿನ ಪ್ರಕಾರ, ಮಗು ಶಾಲೆಗೆ ದಾಖಲಾದ ಎರಡನೇ ದಿನವಾದ ಏಪ್ರಿಲ್ 30 ರಂದು ಶಾಲೆಗೆ ಹೋಗಿತ್ತು. ಮನೆಗೆ ಹಿಂದಿರುಗಿದ ನಂತರ ನೋವು ಕಾಣಿಸಿಕೊಂಡಿದೆ ಎಂದು ಬಾಲಕಿ ಹೇಳಿದ್ದಾಳೆ. ಆಕೆಯ ತಾಯಿ ಪ್ರಶ್ನಿಸಿದಾಗ, ಶಾಲೆಯ ನಿರ್ಜನ ಪ್ರದೇಶಕ್ಕೆ ತನ್ನನ್ನು ಕರೆದೊಯ್ಯಲಾಯಿತು, ಅಲ್ಲಿ ಆ ವ್ಯಕ್ತಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂದು ಬಾಲಕಿ ಹೇಳಿದ್ದಾಳೆ.
ಮಗುವಿನ ತಾಯಿಯ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 64(1) (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 6 (ಉಗ್ರ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆದರೆ, ಪ್ರಾಸಿಕ್ಯೂಷನ್‌ನ ತೀವ್ರ ವಿರೋಧದ ಹೊರತಾಗಿಯೂ ಮೇ 7 ರಂದು ದ್ವಾರಕಾದ ನ್ಯಾಯಾಲಯವು ಆತನಿಗೆ ಜಾಮೀನು ನೀಡಿತ್ತು.
New Delhi,Delhi














