Jhanvi: ಚಿಕನ್ ಯಾವಾಗ ವೆಜ್ ಆಯ್ತು ಎಂದ ನೆಟ್ಟಿಗರು! ನಾವು ಲಿಂಗಾಯತರು, ನಾನ್ವೆಜ್ ಮಾಡಲ್ಲ, ಚಿಕನ್ ಬಿರಿಯಾನಿ ತಿಂದಿದ್ದೇನೆ ಎಂದ ಜಾಹ್ನವಿ ಟ್ರೋಲ್! | | ACTPnews

ಜಾಹ್ನವಿ


Last Updated:

Jhanvi: ಬಿಗ್​ಬಾಸ್ ಜಾನ್ವಿ ತಮ್ಮ ಹೇಳಿಕೆಯಿಂದ ಈಗ ಮತ್ತೆ ಸುದ್ದಿಯಾಗಿದ್ದಾರೆ. ಅವರು ನಾಜ್ವೆಲ್ ಹೋಟೆಲ್ ಉದ್ಘಾಟನೆಗೆ ಬಂದಾಗ ಹೇಳಿದ್ದೇನು ಗೊತ್ತಾ?

ಜಾಹ್ನವಿ
ಜಾಹ್ನವಿ

ಬಿಗ್​ಬಾಸ್ ಜಾಹ್ನವಿ (Jhanvi) ರಿಯಾಲಿಟಿ ಶೋಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಬಿಗ್​ಬಾಸ್​ನಲ್ಲಿ (Bigg Boss) ಭಾಗವಹಿಸಿ ಅವರು ಸುದ್ದಿಯಾಗಿದ್ದರು. ಅದಕ್ಕೂ ಮುನ್ನ ಅವರು ಹಲವಾರು ಶೋಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದರು. ಈ ಮೂಲಕ ಕನ್ನಡ ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಕೂಡಾ ಗಳಿಸಿಕೊಂಡಿದ್ದಾರೆ. ಈಗ ಅವರು ಮತ್ತೆ ರಾಜಕೀಯಕ್ಕೆ ಕೂಡಾ ಬಂದಿದ್ದು, ಜೆಡಿಎಸ್ ಸೇರಿಕೊಂಡಿದ್ದಾರೆ.

ಜಾಹ್ನವಿ ಚಿಕನ್ ತಿನ್ನಲ್ವಾ?

ಜಾಹ್ನವಿ ಅವರು ತಾವು ಲಿಂಗಾಯತರಾಗಿದ್ದು ನಾನ್​ವೆಜ್ ಮಾಡಲ್ಲ ಎಂದು ಹೇಳಿದ್ದಾರೆ. ಆದರೆ ಅವರು ಚಿಕನ್ ಬಿರಿಯಾನಿ ತಿಂದಿದ್ದಾರಂತೆ. ಜಾಹ್ನವಿ ಅವರು ನಾನ್ – ವೆಜ್ ಹೋಟೆಲ್‌ವೊಂದರ ಉದ್ಘಾಟನೆಗೆ ತೆರಳಿದ್ದರು.

ಈ ವೇಳೆ ತಮಗೆ ಚಿಕನ್ ಬಿರಿಯಾನಿ ಇಷ್ಟ ಎಂದು ಜಾಹ್ನವಿ ಹೇಳಿದ್ದಾರೆ. ಇದೇ ವೇಳೆ ನಟಿ ತಾವು ಲಿಂಗಾಯತರು ಅಂತ ಬಹಿರಂಗಪಡಿಸಿದರು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ.

ಲಿಂಗಾಯತರು ನಾನ್ವೆಜ್ ತಿನ್ನುತ್ತಾರಾ ಎಂದು ಬಹಳಷ್ಟು ಜನ ಕಮೆಂಟ್ ಮಾಡಿದ್ದು, ಇನ್ನೂ ಕೆಲವರು ಆಹಾರ ಎನ್ನುವುದು ವೈಯಕ್ತಿಕ ಹಕ್ಕು ಎಂದು ಹೇಳಿದ್ದಾರೆ. ಸದ್ಯ ಇದು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ನಾನ್ ವೆಜ್ ಹೋಟೆಲ್ ಉದ್ಘಾಟನೆ ವೇಳೆ ಮಾತನಾಡಿದ್ದ ಜಾಹ್ನವಿ, ‘’ನನಗೆ ಚಿಕನ್ ಬಿರಿಯಾನಿ ಇಷ್ಟ. ಸ್ವಲ್ಪ ಖಾರ ಇಷ್ಟ. ಮಟನ್‌ಗಿಂತ ನನಗೆ ಚಿಕನ್ ಇಷ್ಟ’’ ಅಂತ ಹೇಳಿದ್ದರು. ಜಾಹ್ನವಿ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘’ನಾವು ನಾನ್ ವೆಜ್ ಮಾಡಲ್ಲ. ನಾವು ಲಿಂಗಾಯತರು. ಮಾಡಿದರೆ ನಮ್ಮಮ್ಮ ಮನೆಯಿಂದ ಆಚೆ ಹಾಕ್ತಾರೆ. ನಾನು ತಿಂದಿದ್ದೀನಿ ಅಷ್ಟೇ. ಸವಿರುಚಿ ಶೋ ಮಾಡುವಾಗ ನಾನು ತಿಂದಿದ್ದೀನಿ. ನಾನು ಟೇಸ್ಟ್ ಮಾಡಿರೋದನ್ನ ಎಲ್ಲರೂ ನೋಡಿದ್ದಾರೆ’’ ಎಂದು ಜಾಹ್ನವಿ ಹೇಳಿದ್ದಾರೆ.

ಸದ್ಯಕ್ಕೆ ನಾನ್​ವೆಜ್ ತಿನ್ನುತ್ತಿಲ್ವಂತೆ ಜಾಹ್ನವಿ

ತಮ್ಮ ಮನೆಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿಸಿದ ನಂತರ ನಟಿ ನಾನ್​ವೆಜ್ ತಿನ್ನುತ್ತಿಲ್ಲ ಎಂದಿದ್ದಾರೆ. ನಾನ್ ವೆಜ್ ತಿನ್ನೋದನ್ನು ಬಿಡೋದಕ್ಕು ಅವರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ನಾನು ನಾನ್ ವೆಜ್ ತಿನ್ನೋದು ಬಿಟ್ಟಿದ್ದೇನೆ. ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಆದಾಗಿನಿಂದ ನಾನು ನಾನ್ ವೆಜ್ ತಿನ್ನುತ್ತಿಲ್ಲ. ತಿನ್ನಬಾರದು ಅಂತ ಡಿಸೈಡ್ ಮಾಡಿದ್ದೇನೆ ಎಂದು ಜಾಹ್ನವಿ ಹೇಳಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Jhanvi: ಚಿಕನ್ ಯಾವಾಗ ವೆಜ್ ಆಯ್ತು ಎಂದ ನೆಟ್ಟಿಗರು! ನಾವು ಲಿಂಗಾಯತರು, ನಾನ್ವೆಜ್ ಮಾಡಲ್ಲ, ಚಿಕನ್ ಬಿರಿಯಾನಿ ತಿಂದಿದ್ದೇನೆ ಎಂದ ಜಾಹ್ನವಿ ಟ್ರೋಲ್!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed