Actor Sam Neill: ಜುರಾಸಿಕ್ ಪಾರ್ಕ್ ಖ್ಯಾತಿಯ ಹಿರಿಯ ನಟ ಸ್ಯಾಮ್ ನೀಲ್ ನಿಧನ! | | ACTPnews

ನಟ ಸ್ಯಾಮ್ ನೀಲ್


Last Updated:

ಹಿರಿಯ ನಟ ಸರ್ ಸ್ಯಾಮ್ ನೀಲ್ (Actor Sam Neill) ಇನ್ನು ನೆನಪು ಮಾತ್ರ. ಜುರಾಸಿಕ್ ಪಾರ್ಕ್ ಚಿತ್ರದ ಮೂಲಕ ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಅವರು 78ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ನಟ ಸ್ಯಾಮ್ ನೀಲ್
ನಟ ಸ್ಯಾಮ್ ನೀಲ್

ಜಾಗತಿಕ ಸಿನಿಮಾ ಅಭಿಮಾನಿಗಳ ಮನಸ್ಸಿನಲ್ಲಿ ಡಾ. ಅಲನ್ ಗ್ರಾಂಟ್ ಪಾತ್ರದ ಮೂಲಕ ಅಚ್ಚಳಿಯದ ಗುರುತು ಮೂಡಿಸಿದ್ದ ಹಿರಿಯ ನಟ ಸರ್ ಸ್ಯಾಮ್ ನೀಲ್ (Actor Sam Neill) ಇನ್ನು ನೆನಪು ಮಾತ್ರ. ಜುರಾಸಿಕ್ ಪಾರ್ಕ್ ಚಿತ್ರದ ಮೂಲಕ ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಅವರು 78ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸ್ಯಾಮ್ ನೀಲ್ ತಮ್ಮ ಅದ್ಭುತ ಅಭಿನಯ ಮೂಲಕ ಕೋಟ್ಯಂತರ ಅಭಿಮಾನಿಗಳ ಪ್ರೀತಿ ಗಳಿಸಿದ್ದರು. ಅವರ ನಿಧನದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಜಾಗತಿಕ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

ನ್ಯೂಜಿಲೆಂಡ್‌ನ ಖ್ಯಾತ ಹಿರಿಯ ನಟ ಸರ್ ಸ್ಯಾಮ್ ನೀಲ್ ಸೋಮವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ಕುಟುಂಬ ಸದಸ್ಯರು ಇನ್‌ಸ್ಟಾಗ್ರಾಮ್ ಮೂಲಕ ಅಧಿಕೃತವಾಗಿ ದೃಢಪಡಿಸಿದ್ದಾರೆ. ಆದರೆ ಸಾವಿಗೆ ನಿಖರ ಕಾರಣವನ್ನು ಕುಟುಂಬ ಬಹಿರಂಗಪಡಿಸಿಲ್ಲ. ಈ ಸುದ್ದಿ ಹೊರಬಿದ್ದ ತಕ್ಷಣವೇ ವಿಶ್ವದಾದ್ಯಂತದ ಸಿನಿಮಾ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ದುಃಖ ವ್ಯಕ್ತಪಡಿಸಿದ್ದಾರೆ.

2022ರಲ್ಲಿ ಸ್ಯಾಮ್ ನೀಲ್ ಅಪರೂಪದ ರಕ್ತದ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಬಳಿಕ ಅವರು ಚಿಕಿತ್ಸೆ ಪಡೆಯುತ್ತಿರುವ ವಿಷಯವನ್ನು 2023ರಲ್ಲಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ತಮ್ಮ ಆರೋಗ್ಯದ ಕುರಿತು ಅವರು ಹಲವು ಬಾರಿ ಧೈರ್ಯದಿಂದ ಮಾತನಾಡಿ, ಜೀವನದ ಪ್ರತಿಯೊಂದು ಕ್ಷಣವನ್ನು ಸಂತೋಷದಿಂದ ಕಳೆಯಲು ಪ್ರಯತ್ನಿಸುತ್ತಿದ್ದರು.

ಇದನ್ನೂ ಓದಿ: Imtiaz Ali: ಹಿಂದೂ ಬಾಯ್​ಫ್ರೆಂಡ್ ಜೊತೆ ಎಂಗೇಜ್ ಆದ ಇಮ್ತಿಯಾಜ್ ಅಲಿ ಮಗಳು

ಸ್ಯಾಮ್ ನೀಲ್ ಅವರ ನಿಧನಕ್ಕೆ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಪನೀಸ್ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡ ಅವರು, ಸ್ಯಾಮ್ ನೀಲ್ ಅನೇಕ ಮರೆಯಲಾಗದ ಚಿತ್ರಗಳಲ್ಲಿ ಅಭಿನಯಿಸಿ ಲಕ್ಷಾಂತರ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 14, 1947ರಂದು ಉತ್ತರ ಐರ್ಲೆಂಡ್‌ನಲ್ಲಿ ಜನಿಸಿದ ಸ್ಯಾಮ್ ನೀಲ್ ಅವರ ಮೂಲ ಹೆಸರು ನೈಜೆಲ್ ಜಾನ್ ಡೆರ್ಮಾಟ್ ನೀಲ್. 1954ರಲ್ಲಿ ಅವರ ಕುಟುಂಬ ನ್ಯೂಜಿಲೆಂಡ್‌ಗೆ ವಲಸೆ ಹೋದ ಬಳಿಕ ಅಲ್ಲಿಯೇ ಶಿಕ್ಷಣ ಪಡೆದರು. ಶಾಲಾ ದಿನಗಳಲ್ಲಿಯೇ ತಮ್ಮ ಹೆಸರನ್ನು ‘ಸ್ಯಾಮ್’ ಎಂದು ಬದಲಾಯಿಸಿಕೊಂಡ ಅವರು ಆರಂಭದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದರು. ಆದರೆ ನಟನೆಯ ಮೇಲಿನ ಅಪಾರ ಆಸಕ್ತಿ ಅವರನ್ನು ರಂಗಭೂಮಿಯತ್ತ ಸೆಳೆದಿತು. ಅಲ್ಲಿಂದಲೇ ಅವರ ಯಶಸ್ವಿ ಸಿನಿ ಪಯಣ ಆರಂಭವಾಯಿತು.

ಇದನ್ನೂ ಓದಿ: Kangana Ranaut: ಅಡುಗೆ ಹೆಣ್ಮಕ್ಕಳ ಶಕ್ತಿ ಎಂದ ಕಂಗನಾ, ನಟಿಯ ಹೇಳಿಕೆಗೆ ಪೋಸ್ಟ್​ಗೆ ವಿರೋಧ

1977ರಲ್ಲಿ ಬಿಡುಗಡೆಯಾದ ‘ಸ್ಲೀಪಿಂಗ್ ಡಾಗ್ಸ್’ ಚಿತ್ರದ ಮೂಲಕ ಸ್ಯಾಮ್ ನೀಲ್ ಅವರಿಗೆ ದೊಡ್ಡ ಯಶಸ್ಸು ದೊರೆಯಿತು. ಆದರೆ 1993ರಲ್ಲಿ ಸ್ಟೀವನ್ ಸ್ಪೀಲ್ಬರ್ಗ್ ನಿರ್ದೇಶನದ ‘ಜುರಾಸಿಕ್ ಪಾರ್ಕ್’ ಚಿತ್ರವೇ ಅವರನ್ನು ಜಾಗತಿಕ ಮಟ್ಟದ ತಾರೆಯನ್ನಾಗಿ ರೂಪಿಸಿತು. ಈ ಚಿತ್ರದಲ್ಲಿ ಅವರು ನಿರ್ವಹಿಸಿದ ಡಾ. ಅಲನ್ ಗ್ರಾಂಟ್ ಪಾತ್ರ ಇಂದಿಗೂ ಸಿನಿಮಾ ಇತಿಹಾಸದ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ಒಂದಾಗಿದೆ.

ಜುರಾಸಿಕ್ ಪಾರ್ಕ್ ಮಾತ್ರವಲ್ಲದೆ ದಿ ಪಿಯಾನೋ, ದಿ ಹಂಟ್ ಫಾರ್ ರೆಡ್ ಅಕ್ಟೋಬರ್, ಇವೆಂಟ್ ಹರೈಸನ್ ಹಾಗೂ ಜನಪ್ರಿಯ ವೆಬ್ ಸರಣಿ ಪೀಕಿ ಬೈಂಡರ್ಸ್ ಸೇರಿದಂತೆ ಹಲವು ಯಶಸ್ವಿ ಚಿತ್ರ ಮತ್ತು ಧಾರಾವಾಹಿಗಳಲ್ಲಿ ಸ್ಯಾಮ್ ನೀಲ್ ಅಭಿನಯಿಸಿದ್ದಾರೆ. ಪ್ರತಿಯೊಂದು ಪಾತ್ರದಲ್ಲೂ ವಿಭಿನ್ನ ಅಭಿನಯದ ಮೂಲಕ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಹಾಲಿವುಡ್ ಸೇರಿದಂತೆ ಅಂತರರಾಷ್ಟ್ರೀಯ ಚಿತ್ರರಂಗದಲ್ಲಿ ಅವರ ಅಭಿನಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed