Good News: ಘಾಟಿ ಸುಬ್ರಹ್ಮಣ್ಯ ಭಕ್ತರಿಗೆ ಗುಡ್ ನ್ಯೂಸ್; ಮೆಜೆಸ್ಟಿಕ್‌ನಿಂದ ದೇಗುಲದವರೆಗೂ ಬಸ್‌, ಮುಂಜಾನೆಯ ದರ್ಶನಕ್ಕೆ ಬೆಸ್ಟ್‌ ಆಯ್ಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಘಾಟಿ ಸುಬ್ರಹ್ಮಣ್ಯ


Last Updated:

ಬಿಎಂಟಿಸಿ ಮೆಜೆಸ್ಟಿಕ್‌ನಿಂದ ಘಾಟಿ ಸುಬ್ರಮಣ್ಯ ದೇವಸ್ಥಾನದವರೆಗೆ ನೇರ ಬಸ್ ಸೇವೆ ಆರಂಭಿಸಿದೆ, 5 ಬಸ್ 18 ಟ್ರಿಪ್, 60 ಕಿಮೀ ಪ್ರಯಾಣಕ್ಕೆ 100 ರೂಪಾಯಿಗಿಂತ ಕಡಿಮೆ ದರ

ಘಾಟಿ ಸುಬ್ರಹ್ಮಣ್ಯ
ಘಾಟಿ ಸುಬ್ರಹ್ಮಣ್ಯ

ಬೆಂಗಳೂರು: ಘಾಟಿ ಸುಬ್ರಮಣ್ಯ ದರ್ಶನಕ್ಕೆ ಹೋಗಬೇಕು ಆದ್ರೆ ಮಧ್ಯದಲ್ಲಿ ಬಸ್ (Bus) ಬದಲಿಸುವ ತ್ರಾಸು ಬೇಡ ಅಂತ ನೀವೂ ಇದ್ದೀರಾ? ಅಥವಾ ನಿಮಗೆ ಬಿಎಂಟಿಸಿಯ ಟೂರ್‌ ಪ್ಯಾಕೇಜ್‌ನಲ್ಲಿ (Tour Package) ಪ್ರವಾಸ ಮಾಡಲಿಕ್ಕೆ ಹಣ ಇಲ್ವಾ? ಈಗ ಈ ದಣಿವು, ಹಣವ್ಯಯದ ಪ್ರಯಾಸ (Problem) ತಪ್ಪಿಸಿಕೊಳ್ಳೋಕೆ ಇಲ್ಲಿ ಮಾರ್ಗ ಇದೆ. ಘಾಟಿ ಸುಬ್ರಹ್ಮಣ್ಯಕ್ಕೆ ಬಸ್‌ ಬದಲಿಸುವ ಕಷ್ಟಪಡುತ್ತಿದ್ದವರಿಗೆ ಇದೀಗ ದೊಡ್ಡ ರಿಲೀಫ್!

ಮೆಜೆಸ್ಟಿಕ್‌ನಿಂದ ನೇರ ಬಸ್

ಬಿಎಂಟಿಸಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ದಿಂದ ನೇರವಾಗಿ ಘಾಟಿ ಸುಬ್ರಮಣ್ಯ ದೇವಸ್ಥಾನದ ಪ್ರವೇಶ ದ್ವಾರದವರೆಗೆ ನೇರ ಬಸ್ ಸೌಲಭ್ಯ ಕಲ್ಪಿಸಿದೆ. ಇನ್ನು ಮುಂದೆ ಬಸ್ ಬದಲಿಸುವ ಕಿರಿಕಿರಿ ಸಂಪೂರ್ಣ ಇಲ್ಲ!‌

ಒಟ್ಟೂ 5 ಬಸ್‌ಗಳ ಸಂಚಾರ

ಈ ಸೇವೆಯಲ್ಲಿ ಒಟ್ಟು 5 ಬಸ್‌ಗಳು (18 ಟ್ರಿಪ್‌ಗಳು) ನೇರ ಮಾರ್ಗದಲ್ಲಿ ಸಂಚರಿಸಲಿವೆ. ಜೊತೆಗೆ ವಿಜಯಪುರ ಮಾರ್ಗದಲ್ಲಿ 8 ಬಸ್‌ಗಳು (ಹೆಬ್ಬಾಳ, ಯಲಹಂಕ ಮತ್ತು ದೇವನಹಳ್ಳಿ ನಿಲುಗಡೆ ಸಹಿತ) ಮತ್ತು ನಂದಿ ಕ್ಲಾಸ್ ಮಾರ್ಗದಲ್ಲಿ 3 ಬಸ್‌ಗಳು (60 ಟ್ರಿಪ್‌ಗಳು) ಕಾರ್ಯ ನಿರ್ವಹಿಸಲಿವೆ.
ಬಸ್‌ ವೇಳೆ ಗಮನಿಸಿ

ಮೆಜೆಸ್ಟಿಕ್‌ನಿಂದ ಘಾಟಿ ಸುಬ್ರಮಣ್ಯಕ್ಕೆ ಬಸ್ ಬಿಡುವ ಸಮಯ — ಬೆಳಗ್ಗೆ 5:00, 5:35, 6:35, 8:00, 8:50, ಮಧ್ಯಾಹ್ನ 3:25 ಮತ್ತು ಸಂಜೆ 4:40, 5:10, 6:50, 7:50. ಘಾಟಿ ಸುಬ್ರಮಣ್ಯದಿಂದ ಮೆಜೆಸ್ಟಿಕ್‌ಗೆ ಹಿಂದಿರುಗುವ ಸಮಯ — ಬೆಳಗ್ಗೆ 5:45, 6:25, 7:10, 7:50, ಸಂಜೆ 4:20, 5:15 ಮತ್ತು ರಾತ್ರಿ 7:15, 7:45

ಕಮ್ಮಿ ದುಡ್ಡಲ್ಲಿ ಪ್ರಯಾಣ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports