Last Updated:
ಶಿವರಾಜ್ ಕುಮಾರ್ ಜನ್ಮ ದಿನಕ್ಕೆ ಹೊಸ ಚಿತ್ರ ಅನೌನ್ಸ್ ಆಗುತ್ತಿದೆ. ಮಧ್ಯ ರಾತ್ರಿ 12.12 Am ಗೆ ಈ ಚಿತ್ರದ ಬಿಗ್ ಅನೌನ್ಸ್‌ಮೆಂಟ್ ಇದೆ. ಇದನ್ನ ಜೇಮ್ಸ್ ನಿರ್ಮಾಪಕರೇ ಪ್ರೊಡ್ಯೂಸರ್ ಮಾಡುತ್ತಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪವರ್ ಸ್ಟಾರ್ ಪುನೀತ್ ರಾಜ್ (Puneeth Rajkumar) ಅವರ ಕೊನೆಯ ಚಿತ್ರ ಜೇಮ್ಸ್ ಅನ್ನೋದು ಗೊತ್ತೇ ಇದೆ. ಡೈರೆಕ್ಟರ್ ಚೇತನ್ ಕುಮಾರ್ (Chethan Kumar) ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. ಕಿಶೋರ್ ಪತ್ತಿಕೊಂಡ ಈ (Kishore Pathikonda) ಚಿತ್ರವನ್ನ ನಿರ್ಮಾಣ ಮಾಡಿದ್ದರು. ಈ ಚಿತ್ರ ಆದ್ಮೇಲೆ ಇವರು ಈಗ ಮತ್ತೊಂದು ಚಿತ್ರ ಮಾಡೋಕೆ ಹೊರಟ್ಟಿದ್ದಾರೆ. ಈ ಚಿತ್ರಕ್ಕೆ ಶಿವರಾಜ್ ಕುಮಾರ್ (Shiva Rajkumar) ಅವರೇ ಹೀರೋ ಆಗಿದ್ದಾರೆ. ಜುಲೈ-12 ರಂದು ಶಿವಣ್ಣನ ಜನ್ಮ ದಿನ ಇದೆ. ಈ ಹಿನ್ನೆಲೆಯಲ್ಲಿಯೆ ಈ ಚಿತ್ರ ಅನೌನ್ಸ್ ಆಗುತ್ತಿದೆ. ಇದರ ಇತರ ವಿವರ ಇಲ್ಲಿದೆ ಓದಿ.
ಪುನೀತ್ ಅಭಿನಯದ ಜೇಮ್ಸ್ ಚಿತ್ರ ಮಾರ್ಚ್-17,2022 ರಂದು ರಿಲೀಸ್ ಆಗಿತ್ತು. ಬಹದ್ದೂರ್ ಚೇತನ್ ಈ ಚಿತ್ರನ್ನ ಡೈರೆಕ್ಷನ್ ಮಾಡಿದ್ದರು.
ಶಿವಣ್ಣನ ಜೊತೆಗೆ ಜೇಮ್ಸ್ ಪ್ರೊಡ್ಯೂಸರ್ ಸಿನಿಮಾ (ಚಿತ್ರ ಕೃಪೆ: ಶಿವರಾಜಕುಮಾರ್ ಇನ್‌ಸ್ಟಾಗ್ರಾಮ್)
ಈ ಚಿತ್ರದಲ್ಲಿ ಪುನೀತ್ ಪಾತ್ರಕ್ಕೆ ಎರಡು ಹೆಸರಿವೆ. ಸಂತೋಷ್ ಕುಮಾರ್ ಅನ್ನೋದು ಒಂದು ಹೆಸರಾಗಿದೆ. ಜೇಮ್ಸ್ ಅನ್ನೋದು ಮತ್ತೊಂದು ಹೆಸರು ನೋಡಿ. ಈ ಚಿತ್ರವನ್ನ ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದರು. ಹಾಗೆ ಇವರ ಈ ಚಿತ್ರ ಬಂದು ನಾಲ್ಕು ವರ್ಷಗಳೇ ಕಳೆದು ಹೋಗಿವೆ.
ಜೇಮ್ಸ್ ಚಿತ್ರದ ಬಹುತೇಕ ಕೆಲಸ ಮುಗಿದಿತ್ತು. ಆದರೆ, ಡಬ್ಬಿಂಗ್ ಬಾಕಿ ಇತ್ತು. ಅಷ್ಟರಲ್ಲಿಯೇ ಪುನೀತ್ ಎಲ್ಲರನ್ನೂ ಬಿಟ್ಟು ಹೋಗಿ ಬಿಟ್ಟರು.
ಜೇಮ್ಸ್ ಚಿತ್ರ ನಿರ್ಮಿಸಿದ್ದ ಕಿಶೋರ್ ಪತ್ತಿಕೊಂಡ ಮತ್ತೊಂದು ಚಿತ್ರ ಮಾಡುತ್ತಿದ್ದಾರೆ. ಪುನೀತ್ ಜೊತೆಗೆ ಜೇಮ್ಸ್ ಚಿತ್ರ ಮಾಡಿದರು.
ಆದರೆ, ಇದೀಗ ಶಿವಣ್ಣನ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹೆಸರೇನು ಅನ್ನುವ ಕುತೂಹಲ ಇದ್ದೇ ಇದೆ. ಆದರೆ, ಇದನ್ನ ಶಿವಣ್ಣನ ಜನ್ಮ ದಿನದಂದು ರಿವೀಲ್ ಮಾಡಲಾಗುತ್ತಿದೆ.
ಜುಲೈ-12 ರಂದು ಮಧ್ಯ ರಾತ್ರಿನೇ ಅನೌನ್ಸ್!
ಶಿವರಾಜ್ ಕುಮಾರ್ ಅವರ ಜನ್ಮ ದಿನ ಜುಲೈ-12 ರಂದು ಇದೆ. ಈ ದಿನ ಮಧ್ಯ ರಾತ್ರಿ 12.12 Am ಗೆ ಈ ಚಿತ್ರದ ಮಾಹಿತಿ ಹೊರ ಬೀಳುತ್ತಿದೆ.
ಈ ಚಿತ್ರವನ್ನ ಯಾರು ಡೈರೆಕ್ಷನ್ ಮಾಡುತ್ತಾರೆ.? ಶಿವಣ್ಣ ಜೋಡಿಯಾಗಿ ಯಾರು ಇರ್ತಾರೆ? ಶಿವರಾಜ್ ಕುಮಾರ್ ಅವರ ಲುಕ್ ಆ್ಯಂಡ್ ಫೀಲ್ ಎರಡೂ ಹೇಗೆ ಇರುತ್ತವೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕರು ಸಿಗಬಹುದು. ಆದರೆ, ಸದ್ಯಕ್ಕೆ ಈ ಚಿತ್ರಕ್ಕೆ ಸಂಬಂಧಿಸಿದಂತೆ ಇಷ್ಟೇ ಇದೆ.
ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮ ರಾತ್ರಿನೇ ಇದೆ. ಜುಲೈ-12 ರಂದು ಮಧ್ಯ ರಾತ್ರಿ 12ಕ್ಕೇನೆ ಸಿಡಿಮದ್ದು ಸಿಡಿಸುವ ್ಲ ಪ್ಲಾನ್ ಇದೆ. ಈ ಮೂಲಕ ಶಿವಣ್ಣನ ಜನ್ಮ ದಿನವನ್ನ ಸೆಲೆಬ್ರೇಟ್ ಮಾಡೋಕೆ ಅಭಿಮಾನಿಗಳು ರೆಡಿ ಆಗಿದ್ದಾರೆ.
ಶಿವಣ್ಣ ಈಗಾಗಲೇ ಫ್ಯಾನ್ಸ್‌ಗೆ ಒಂದು ಮಾತು ಹೇಳಿದ್ದಾರೆ. ಕೇಕ್ ಮತ್ತು ಇತರ ಗಿಫ್ಟ್ ತರಬೇಡಿ. ಆ ದಿನ ಬನ್ನಿ ಎಲ್ಲರೂ ಸೆಲೆಬ್ರೇಟ್ ಮಾಡೋಣ. ನಿಮ್ಮ ಪರವಾಗಿ ನಾನು ಒಂದು ಕೇಕ್ ಕಟ್ ಮಾಡುವೆ ಅಂತಲೇ ಹೇಳಿದ್ದಾರೆ. ಇನ್ನುಳಿದಂತೆ ಶಿವಣ್ಣನ 64 ನೇ ಜನ್ಮ ದಿನ ಈ ಸಲ ಜೋರಾಗಿಯೇ ಸೆಲೆಬ್ರೇಟ್ ಮಾಡಲಾಗುತ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 11, 2026 11:40 PM IST














