Nabha Natesh: ಸ್ವಯಂಭು ಚಿತ್ರದ ಬಗ್ಗೆ ಹೆಚ್ಚಿದ ನಿರೀಕ್ಷೆ; ನಭಾ ನಟೇಶ್ ಹೈ ಬಜೆಟ್‌ ಸಿನಿಮಾ ಆಲ್‌ ಮೋಸ್ಟ್ ಕಂಪ್ಲೀಟ್! | | ACTPnews

ನಭಾ ನಟೇಶ್ ಹೈ ಬಜೆಟ್‌ ಸಿನಿಮಾ ಆಲ್‌ ಮೋಸ್ಟ್ ಕಂಪ್ಲೀಟ್!


Last Updated:

ವಜ್ರಕಾಯ ಬೆಡಗಿ ನಭಾ ನಟೇಶ್ ಸೆಕೆಂಡ್ ಇನ್ನಿಂಗ್ಸ್ ಜೋರಾಗಿದೆ. ನಾಗಬಂಧಂ ಚಿತ್ರದ ಗೆಲುವಿನ ಖುಷಿಯಲ್ಲಿಯೇ ಇವರಿದ್ದಾರೆ. ಇದರ ನಡುವೆ ಇದೀಗ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆ ಚಿತ್ರದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ನಭಾ ನಟೇಶ್ ಹೈ ಬಜೆಟ್‌ ಸಿನಿಮಾ ಆಲ್‌ ಮೋಸ್ಟ್ ಕಂಪ್ಲೀಟ್!
ನಭಾ ನಟೇಶ್ ಹೈ ಬಜೆಟ್‌ ಸಿನಿಮಾ ಆಲ್‌ ಮೋಸ್ಟ್ ಕಂಪ್ಲೀಟ್!

ಕನ್ನಡತಿ ನಭಾ ನಟೇಶ್ (Nabha Natesh) ಅವರಿಗೆ 2ನೇ ಬಾರಿ ಲಕ್ ಮತ್ತೆ ಹೊಡೆದಿದೆ. ನಾಗಬಂಧಂ ಚಿತ್ರಕ್ಕೆ (Nagabandham Movie) ಟಾಲಿವುಡ್ ಅಲ್ಲಿ ಒಳ್ಳೆ ರೆಸ್ಪಾನ್ಸ್ ಬಂದಿದೆ. ಈ ಚಿತ್ರದ ನಭಾ ನಟೇಶ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನಭಾ ನಟೇಶ್ ನೃತ್ಯವನ್ನು ಜನ ಇಷ್ಟಪಟ್ಟಿದ್ದಾರೆ. ಈ ಸಕ್ಸಸ್ ಖುಷಿಯಲ್ಲಿರೋ ನಭಾ ನಟೇಶ್ (Nabha Natesh) ಮತ್ತೊಂದು ಚಿತ್ರ ರಿಲೀಸ್‌ (Movie Release) ಹಂತಕ್ಕೆ ಬಂದಿದೆ. ಈ ಚಿತ್ರವೂ ಬಹು ಕೋಟಿ ವೆಚ್ಚದ ಚಿತ್ರವೇ ಆಗಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸ್ವಯಂಭು ಸಿನಿಮಾ

ಸ್ವಯಂಭು ಸಿನಿಮಾ ಪಿರಿಯೋಡಿಕಲ್ ಚಿತ್ರವೇ ಆಗಿದೆ. ಇದು ಕೂಡ ಹೈ ಬಜೆಟ್ ಚಿತ್ರವೇ ಆಗಿದೆ. ಇದರಲ್ಲಿ ನಭಾ ನಟೇಶ್ ರಾಣಿ ಪಾತ್ರವನ್ನೆ ಮಾಡಿದ್ದಾರೆ.
Nabha Natesh Nikhil Siddharth Swayambhu Movie Latest Updates

ವಜ್ರಕಾಯ ಚಿತ್ರದಲ್ಲಿ ನಟನೆ

ಸುಂದರ ವಲ್ಲಿ ಅನ್ನುವ ಈ ಪಾತ್ರದಲ್ಲಿ ನಭಾ ನಟೇಶ್ ಅಭಿನಯಿಸಿದ್ದಾರೆ. ಈ ಒಂದು ಚಿತ್ರದ ಬಗ್ಗೆನೂ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾದ ನಾಯಕ ಕೂಡ ಸ್ಪೆಷಲ್ ಆಗಿದ್ದಾರೆ.

ನಿಖಿಲ್ ಸಿದ್ಧಾರ್ಥ್

ಈ ಸ್ವಯಂಭು ಚಿತ್ರಕ್ಕೆ ನಿಖಿಲ್ ಸಿದ್ಧಾರ್ಥ್ ನಾಯಕರಾಗಿದ್ದಾರೆ. ಈ ಹಿಂದೆ ಇವರು ಸ್ಪೈ ಚಿತ್ರ ಮಾಡಿದ್ದರು. ಕಾರ್ತಿಕೇಯ-1 ಹಾಗೂ ಕಾರ್ತಿಕೇಯ-2 ಚಿತ್ರದಲ್ಲೂ ನಟಿಸಿದ್ದರು.

ನಭಾ ನಟೇಶ್‌ಗೆ ಬಿಗ್ ಆಫರ್ಸ್

ನಭಾ ನಟೇಶ್ ಅವರ ಈ ಚಿತ್ರದ ನಿರೀಕ್ಷೆ ಜಾಸ್ತಿನೇ ಇದೆ. ಈ ಚಿತ್ರವೂ ನಭಾ ನಟೇಶ್ ಅವರಿಗೆ ಒಳ್ಳೆ ಹೆಸರು ತಂದುಕೊಡುತ್ತದೆ ಅನ್ನುವ ನಂಬಿಕೆನೂ ಇದೆ.

ನಾಗಬಂಧಂ ಚಿತ್ರ ಒಳ್ಳೆಯ ಹೆಸರು ತಂದುಕೊಟ್ಟಿದೆ. ಈ ಚಿತ್ರದಿಂದಲೇ ನಭಾ ನಟೇಶ್ ಕಂಬ್ಯಾಕ್ ಮಾಡಿದ್ದಾರೆ. ಇದು ಇವರಿಗೆ ಹೊಸದೊಂದು ಉತ್ಸಾಹ ತುಂಬಿದೆ. ಈ ಚಿತ್ರದ ಬಳಿಕ ದೊಡ್ಡ ಸಿನಿಮಾಗಳ ಆಫರ್ಸ್ ಕೂಡ ಬರ್ತಿವೆ ಅನ್ನುವ ಮಾಹಿತಿನೂ ಇದೆ ಅಂತಲೇ ಹೇಳಬಹುದು.

Nabha Natesh Nikhil Siddharth Swayambhu Movie Latest Updates

ಸ್ವಯಂಭು ಚಿತ್ರದ ಬಗ್ಗೆ ಹೆಚ್ಚಿದ ನಿರೀಕ್ಷೆ
10 ವರ್ಷದ ಬಳಿಕ…

ನಭಾ ನಟೇಶ್ 10 ವರ್ಷದ ಬಳಿಕ ಕನ್ನಡದ ಮೀಡಿಯಾ ಮುಂದೆ ಬಂದಿದ್ದರು. ನಾಗಬಂಧಂ ಚಿತ್ರದ ಪ್ರಚಾರಕ್ಕೆ ಇವರು ಬೆಂಗಳೂರಿಗೂ ಬಂದಿದ್ದರು.

ಆಗಲೇ ಇವರು ತಮ್ಮ ಆ ದಿನಗಳನ್ನ ನೆನಪಿಸಿಕೊಂಡಿದ್ದರು. ಕಳೆದ 10 ವರ್ಷದ ಹಿಂದೆ ನಾನು ಕನ್ನಡ ಮೀಡಿಯಾದ ಮುಂದೆ ಬಂದಿದ್ದೆ.

ವಜ್ರಕಾಯ ಚಿತ್ರದಲ್ಲಿ ನಟನೆ

ನಭಾ ನಟೇಶ್ ಅವರು 11 ವರ್ಷ ಹಿಂದೆ ಬಂದ ಶಿವಣ್ಣ ಅಭಿನಯದ ವಜ್ರಕಾಯ ಚಿತ್ರದಲ್ಲಿ ನಟಿಸಿದ್ದರು. ಇದು ಇವರು ನಾಯಕಿ ಆಗಿ ನಟಿಸಿದ ಮೊದಲ ಚಿತ್ರವೇ ಆಗಿದೆ.

ಇದರಲ್ಲಿ ಪಟಾಕಿ ಪಾರ್ವತಿ ಅನ್ನುವ ಪಾತ್ರವನ್ನೆ ಮಾಡಿದ್ದರು. ನಾಗಬಂಧಂ ಚಿತ್ರದಲ್ಲಿ ಕೂಡ ಇವರು ಪಾರ್ವತಿ ಅನ್ನುವ ಪಾತ್ರವನ್ನೆ ಮಾಡಿದ್ದರು.

ಆದರೆ, ಇದು ಸಾಫ್ಟ್ ಆಗಿಯೇ ಇದೆ ಅಂತಲೇ ಸ್ವತಃ ನಭಾ ನಟೇಶ್ ಚಿತ್ರದ ಬೆಂಗಳೂರು ಪ್ರಚಾರ ಕಾರ್ಯಕ್ರಮದಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed