Last Updated:
ಇಂಗ್ಲೆಂಡ್ ಪ್ರವಾಸದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಅವರ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಿರೀಕ್ಷೆಗೆ ತಕ್ಕಂತೆ ಆಗಲಿಲ್ಲ. ಐಪಿಎಲ್ ವೇಳೆ ನೆಟ್ಸ್ನಲ್ಲಿ ಜೋಫ್ರಾ ಆರ್ಚರ್ ವಿರುದ್ಧ ಧೈರ್ಯವಾಗಿ ಬ್ಯಾಟಿಂಗ್ ಮಾಡಿದ್ದ ವೈಭವ್, ಇಂಗ್ಲೆಂಡ್ನಲ್ಲಿ ಅದೇ ಬೌಲರ್ ಎದುರು ಮಂಕಾದರು. ಇಲ್ಲಿ ಸೂರ್ಯವಂಶಿಯ ವಿಕ್ನೇಸ್ ರಿವೀಲ್ ಆಯಿತು.
ಇಂಗ್ಲೆಂಡ್ (England) ಪ್ರವಾಸದಲ್ಲಿ ಭಾರತ (India)ದ 15 ವರ್ಷದ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ (Vaibhav Sooryavanshi) ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದವು. ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದಲ್ಲಿ ಐರ್ಲೆಂಡ್ (Ireland) ಮತ್ತು ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತ ತಂಡದಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಭವಿಷ್ಯದ ತಾರೆ ಎಂದು ಹೇಳಲಾಗಿತ್ತು. ಇಂಗ್ಲೆಂಡ್ ವಿರುದ್ಧ ಟಿ20ಐ ಗೆ ಪಾದಾರ್ಪಣೆ ಮಾಡಿದರು. ಆದರೆ, ಅವರ ಅಂತಾರಾಷ್ಟ್ರೀಯ ಕ್ರಿಕೆಟ್ (Cricket) ವೃತ್ತಿಜೀವನ ಇದುವರೆಗೆ ನಿರೀಕ್ಷೆಗೆ ತಕ್ಕಂತೆ ಸಾಗಿಲ್ಲ.
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ನೆಟ್ಸ್ನಲ್ಲಿ ಇಂಗ್ಲೆಂಡ್ ವೇಗದ ಜೋಫ್ರಾ ಆರ್ಚರ್ ವಿರುದ್ಧ ವೈಭವ್ ಸೂರ್ಯವಂಶಿ ಧೈರ್ಯವಾಗಿ ಬ್ಯಾಟಿಂಗ್ ಮಾಡಿದ್ದರು. ಈಗ ಇಂಗ್ಲೆಂಡ್ನಲ್ಲಿ ಅದೇ ಬೌಲರ್ ಆರ್ಚರ್ ಎದುರು ವೈಭವ್ ಮಂಕಾದರು. ಜೋಫ್ರಾ ಆರ್ಚರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವೈಭವ್ನ ಅತಿದೊಡ್ಡ ವಿಕ್ನೇಸ್ ಅನ್ನು ಬಯಲು ಮಾಡಿದರು.
ಐಪಿಎಲ್ ನೆಟ್ಸ್ನಲ್ಲಿ ಆರ್ಚರ್ ವಿರುದ್ಧ ತುಂಬಾ ಆತ್ಮವಿಶ್ವಾಸದಿಂದ ಆಡುತ್ತಿದ್ದ ವೈಭವ್ ಪಂದ್ಯದಲ್ಲಿ ಅದೇ ಆತ್ಮವಿಶ್ವಾಸ ತೋರಿಸಲು ಸಾಧ್ಯವಾಗಲಿಲ್ಲ. ವೈಭವ್ ಸೂರ್ಯವಂಶಿ ಮತ್ತು ಜೋಫ್ರಾ ಆರ್ಚರ್ ಇಬ್ಬರೂ 2026ರ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರಾಗಿದ್ದರು. ನೆಟ್ಸ್ನಲ್ಲಿ ಆರ್ಚರ್ನ ವೇಗದ ಎಸೆತಗಳಿಗೆ ವೈಭವ್ ಅದ್ಭುತ ಹೊಡೆತಗಳನ್ನು ಹೊಡೆಯುತ್ತಿದ್ದ ವೀಡಿಯೊಗಳನ್ನು ರಾಜಸ್ಥಾನ್ ರಾಯಲ್ಸ್ ತಂಡವು ಹಲವು ಬಾರಿ ಹಂಚಿಕೊಂಡಿತ್ತು.
ಐಪಿಎಲ್ 2026 ರಲ್ಲಿ ವೈಭವ್ ಅವರು ವಿಶ್ವದ ದಿಗ್ಗಜ ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ವಿರುದ್ಧ ನಿರ್ಭಯವಾಗಿ ಬ್ಯಾಟಿಂಗ್ ಮಾಡಿ ಸಿಕ್ಸರ್ಗಳನ್ನು ಬಾರಿಸಿದ್ದರು. ಆದರೆ, ವೈಭವ್ ಅವರ ಕಥೆ ಅಂತಾರಾಷ್ಟ್ರೀಯ ಕ್ರಿಕೆಟ್ ಬೇರೆಯೇ ಆಗಿದೆ. ಇಂಗ್ಲೆಂಡ್ನ ವೇಗದ ಮತ್ತು ಬೌನ್ಸ್ ಇರುವ ಪಿಚ್ನಲ್ಲಿ ಆರ್ಚರ್ ತನ್ನ ವೇಗವನ್ನು ಪೂರ್ಣವಾಗಿ ಬಳಸಿಕೊಂಡರು. ವೈಭವ್ಗೆ ಸ್ವಚ್ಛಂದವಾಗಿ ಆಡಲು ಅವಕಾಶ ಕೊಡದೆ ಅವನ ದೌರ್ಬಲ್ಯಗಳನ್ನು ಮತ್ತೆ ಮತ್ತೆ ದಾಳಿ ಮಾಡಿದರು.
ಮೊದಲ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸ್ಪಿನ್ನರ್ ವಿಲ್ ಜ್ಯಾಕ್ಸ್ಗೆ ವಿಕೆಟ್ ಒಪ್ಪಿಸಿದರು. ಆದರೆ ಆ ಪಂದ್ಯದಲ್ಲೇ ಜೋಫ್ರಾ ಆರ್ಚರ್ ಶಾರ್ಟ್ ಬಾಲ್ಗಳನ್ನು ಎಸೆದು ವೈಭವ್ ಅವರನ್ನು ಕಾಡಿದರು. ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಲ್ಲೂ ಆರ್ಚರ್ ಅದೇ ತಂತ್ರವನ್ನು ಮುಂದುವರಿಸಿದರು. ಎರಡೂ ಪಂದ್ಯಗಳಲ್ಲಿ ಶಾರ್ಟ್ ಬಾಲ್ಗಳಿಂದ ವೈಭವ್ ಅವರನ್ನು ಔಟ್ ಮಾಡಿದರು. ಎರಡು ಬಾರಿಯೂ ವೈಭವ್ ಶಾರ್ಟ್ ಬಾಲ್ಗೆ ಔಟಾಗಿದ್ದಾರೆ. ಇದು ವೈಭವ್ ಸೂರ್ಯವಂಶಿಯ ವಿಕ್ನೇಸ್ ಎಂದು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ.
ಇಂಗ್ಲೆಂಡ್ ಮತ್ತು ಭಾರತ ನಡುವಿನ ಟಿ20 ಸರಣಿಯಲ್ಲಿ ಆರ್ಚರ್ ಇದುವರೆಗೆ ವೈಭವ್ ವಿರುದ್ಧ ಕೇವಲ 13 ಎಸೆತಗಳನ್ನು ಎಸೆದಿದ್ದಾರೆ. ಆ 13 ಎಸೆತಗಳಲ್ಲಿ ಅವರು 2 ವಿಕೆಟ್ ಪಡೆದಿದ್ದಾರೆ. ಈ ಅವಧಿಯಲ್ಲಿ ವೈಭವ್ ಅವರು ಆರ್ಚರ್ ವಿರುದ್ಧ 2 ಸಿಕ್ಸರ್ಗಳು ಸೇರಿದಂತೆ ಕೇವಲ 18 ರನ್ ಮಾತ್ರ ಗಳಿಸಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಪ್ರತಿಭೆಯ ಬಗ್ಗೆ ಯಾರಿಗೂ ಸಂದೇಹವಿಲ್ಲ. ಐಪಿಎಲ್ನಲ್ಲಿ ಅವರು ವಿಶ್ವದ ಉತ್ತಮ ಬೌಲರ್ಗಳ ವಿರುದ್ಧ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಶಸ್ಸು ಸಿಗಬೇಕಾದರೆ, ಶಾರ್ಟ್ ಬಾಲ್ ವಿರುದ್ಧ ತಮ್ಮ ಶಾಟ್ ಆಯ್ಕೆ ಮತ್ತು ತಂತ್ರವನ್ನು ಸುಧಾರಿಸಿಕೊಳ್ಳಬೇಕು. ಇಂಗ್ಲೆಂಡ್ನಂತಹ ಪರಿಸ್ಥಿತಿಗಳಲ್ಲಿ ಈ ಶಾರ್ಟ್ ಬಾಲ್ ಪರೀಕ್ಷೆಯು ಯುವ ಬ್ಯಾಟ್ಸ್ಮನ್ಗಳಿಗೆ ನಿಜವಾದ ಕಷ್ಟಕರ ಪರೀಕ್ಷೆ ಎಂದು ಹೇಳಲಾಗುತ್ತದೆ. ವೈಭವ್ ಈ ಸವಾಲನ್ನು ಜಯಿಸಿದರೆ, ಅವರ ದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಇನ್ನಷ್ಟು ಬಲ ಬರುತ್ತದೆ.
Jul 10, 2026 10:49 AM IST














