Karavali Movie: ಕರಾವಳಿ ಸಿನಿಮಾದ ಡಬ್ಬಿಂಗ್ ವಿವಾದ ಮುಗಿದಿಲ್ವಾ? ಪ್ರಜ್ವಲ್ ಧ್ವನಿ ಇಲ್ಲದೇ ಚಿತ್ರ ರಿಲೀಸ್ ಆಗುತ್ತಾ? | | ACTPnews

ಕರಾವಳಿ ಚಿತ್ರದ ಡಬ್ಬಿಂಗ್ ವಿವಾದ ಮುಗಿಯೋದೇ ಇಲ್ವಾ?


Last Updated:

ಕರಾವಳಿ ಚಿತ್ರದ ಡಬ್ಬಿಂಗ್ ವಿವಾದ ಮುಗಿಯೋದೇ ಇಲ್ವಾ? ಚಿತ್ರ ಪ್ರಜ್ವಲ್ ದೇವರಾಜ್ ವಾಯ್ಸ್ ಇಲ್ಲದೇ ರಿಲೀಸ್ ಆಗುತ್ತಾ? ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಕರಾವಳಿ ಚಿತ್ರದ ಡಬ್ಬಿಂಗ್ ವಿವಾದ ಮುಗಿಯೋದೇ ಇಲ್ವಾ?
ಕರಾವಳಿ ಚಿತ್ರದ ಡಬ್ಬಿಂಗ್ ವಿವಾದ ಮುಗಿಯೋದೇ ಇಲ್ವಾ?

ಕರಾವಳಿ ಚಿತ್ರದ (Karavali Movie) ಡಬ್ಬಿಂಗ್ ವಿವಾದ ಮುಗಿಯೋದೇ ಇಲ್ವಾ? ಪ್ರಜ್ವಲ್ ದೇವರಾಜ್ (Prajwal Devaraj) ಧ್ವನಿ ಇಲ್ಲದೇ ಚಿತ್ರ ತೆರೆಗೂ ಬರುತ್ತಾ? ಈ ಎಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಸದ್ಯದ ಬೆಳವಣಿಗೆ ನೋಡಿದ್ರೆ ಏನೋನೋ ಆಗುತ್ತಿದೆ. ನಿರ್ಮಾಪಕ ಮತ್ತು ನಿರ್ದೇಶಕರದ್ದೇ ತಪ್ಪು ಅನ್ನುವ ರೀತಿಯಲ್ಲಿಯೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ಹರಿದಾಡುತ್ತಿವೆ. ನಮ್ಮದೇನೂ ತಪ್ಪಿಲ್ಲ ಅನ್ನುವ ಅರ್ಥದಲ್ಲಿಯೇ ಚಿತ್ರದ ಟ್ರೈಲರ್ ರಿಲೀಸ್ (Movie Trailer Release) ಇವೆಂಟ್ ಅಲ್ಲಿ ಚಿತ್ರದ ನಿರ್ಮಾಪಕ ನಿರ್ದೇಶಕ ಗುರುದತ್ತ ಗಾಣಿಗ (Gurudatt Ganiga) ಹೇಳಿಕೊಂಡಿರೋದು ಇದೆ. ಇದೆಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕರಾವಳಿ ಡಬ್ಬಿಂಗ್ ವಿವಾದ

ಕರಾವಳಿ ಚಿತ್ರದ ಡಬ್ಬಿಂಗ್ ವಿವಾದ ಏನೇನೋ ಆಗುತ್ತಿದೆ. ಪ್ರಜ್ವಲ್ ದೇವರಾಜ್ ಈ ಕುರಿತು ಮಾಧ್ಯಮಗಳಿಗೂ ಮಾತನಾಡಿರೋದು ಇದೆ. ಟ್ರೈಲರ್ ಡಬ್ಬಿಂಗ್ ಮಾಡೋಕೆ ಕರೆದಿದ್ದರೆ ಬರ್ತಾ ಇದ್ದೆ. ಬೇರೆಯದ್ದು ನಂತರ ನೋಡಿಕೊಳ್ಳೋಕೆ ಬರ್ತಿತ್ತು ಅಂತಲೇ ಹೇಳಿಕೊಂಡಿದ್ದಾರೆ.
karavali Movie prajwal devarja gurudatt ganiga dubbing controversy

ಪ್ರಜ್ವಲ್ ಧ್ವನಿ ಇಲ್ಲದೇ ಚಿತ್ರ ರಿಲೀಸ್ ಆಗುತ್ತಾ?

(ಚಿತ್ರ ಕೃಪೆ: ಗುರುದತ್ತ ಗಾಣಿಗ ಇನ್‌ಸ್ಟಾಗ್ರಾಮ್)

ಪ್ರಜ್ವಲ್ ಅವರಿಗೆ 1 ಕೋಟಿ 25 ಲಕ್ಷ ಸಂಭಾವನೆ ಮಾತನಾಡಿದ್ದೇವೆ. ಅದರಲ್ಲಿ ಒಂದು ಕೋಟಿ ಕೊಟ್ಟಿದ್ದೇವೆ. ಇನ್ನು 25 ಲಕ್ಷ ಇದೆ ಅಂತ ಚಿತ್ರದ ಡೈರೆಕ್ಟರ್ ಗುರುದತ್ತ ಗಾಣಿಗ ಹೇಳಿಕೊಂಡಿದ್ದಾರೆ. ಕುಳಿತು ಮಾತನಾಡಿಕೊಳ್ಳಬಹುದು. ಕೋರ್ಟು ಕಚೇರಿ ಹೋಗುವ ಪ್ಲಾನ್ ಏನು ಇಲ್ಲ ಅನ್ನುವ ಅರ್ಥದಲ್ಲಿಯೇ ಗುರುದತ್ ಗಾಣಿಗ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ.

ವಿಡಿಯೋ ವೈರಲ್ಲೋ ವೈರಲ್

ಈ ಎಲ್ಲ ಬೆಳವಣಿಗೆ ಬಳಿಕ ನಿರ್ಮಾಪಕರು ಮತ್ತು ನಿರ್ದೇಶಕರೇ ಸರಿ ಇಲ್ಲ. ಇವರೇ ತಪ್ಪು ಮಾಡಿದ್ದಾರೆ ಅನ್ನೋ ಅರ್ಥದಲ್ಲೂ ವಿಡಿಯೋಗಳ ವೈರಲ್ ಆಗುತ್ತಿದೆ.

ಪ್ರಜ್ವಲ್ ದೇವರಾಜ್ ಒಳ್ಳೆಯವರು ಅನ್ನುವ ಅರ್ಥದಲ್ಲಿಯೇ ವಿಡಿಯೋಗಳು ಬರ್ತಿವೆ. ಆದರೆ, ಪ್ರಜ್ವಲ್ ಅವರಿಗೆ ನನ್ನ ಮೇಲೆ ಸಿಟ್ಟು ಇಲ್ಲದೆ ಇದ್ದರೆ, ಮನುಷ್ಯತ್ವ ಇಟ್ಟುಕೊಂಡು ಮಾತನಾಡೋಕೆ ರೆಡಿ ಇದ್ದರೆ, ನಾನು ಪ್ರಜ್ವಲ್ ದೇವರಾಜ್ ಜೊತೆಗೆ ಮಾತನಾಡೋಕೆ ರೆಡಿ ಅಂತ ರಾಜ್ ಬಿ ಶೆಟ್ಟಿ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ.

karavali Movie prajwal devarja gurudatt ganiga dubbing controversy

ಕರಾವಳಿ ಚಿತ್ರದ ಡಬ್ಬಿಂಗ್ ವಿವಾದ ಮುಗಿಯೋದೇ ಇಲ್ವಾ

(ಚಿತ್ರ ಕೃಪೆ: ಗುರುದತ್ತ ಗಾಣಿಗ ಇನ್‌ಸ್ಟಾಗ್ರಾಮ್)

ಈ ವಿವಾದ ಮುಗಿಯೋದೇ ಇಲ್ವೇ

ಕರಾವಳಿ ಚಿತ್ರದ ಡಬ್ಬಿಂಗ್ ವಿವಾದ ಮುಗಿಯೋದೇ ಇಲ್ಲ ಅನಿಸುತ್ತದೆ. ಈ ಒಂದು ಬೆಳವಣಿಗೆ ಚಿತ್ರದ ಮೇಲೆ ಸರಿಯಾಗಿಯೇ ಏಟು ಕೊಡುತ್ತದೆ.

ಜುಲೈ-24 ರಂದು ಚಿತ್ರ ರಿಲೀಸ್

ಕರಾವಳಿ ಚಿತ್ರ ಜುಲೈ-24 ರಂದು ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ಇದನ್ನ ತೆರೆಗೂ ತರ್ತಾ ಇದ್ದಾರೆ. ಅಷ್ಟರಲ್ಲಿಯೇ ಈ ಒಂದು ಡಬ್ಬಿಂಗ್ ವಿವಾದ ಶುರು ಆಗಿದೆ. ದುಡ್ಡಿನ ವಿಚಾರ ಹೊರ ಬಂದಿದೆ.

ಪ್ರಜ್ವಲ್ ದೇವರಾಜ್ ಅವರಿಗೆ 1 ಕೋಟಿ 25 ಲಕ್ಷ ಸಂಭಾವನೆ ಕೊಡ್ತಿರೋ ವಿಚಾರವೂ ಹೊರ ಬಂದಿದೆ. ಒಟ್ಟಾರೆ, ಕರಾವಳಿ ಚಿತ್ರ ತಂಡ ರಿಲೀಸ್ ಮುಂಚೇನೆ ಅಭಿಮಾನಿಗಳ ಸದ್ದುಗದ್ದಲದಿಂದಲೂ ಗಮನ ಸೆಳೆದಿದೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed