Huma Qureshi: ಬೆಂಗಳೂರಿಗೆ ಬಂದ ಟಾಕ್ಸಿಕ್ ಬೆಡಗಿ; ಯಶ್ ಬಗ್ಗೆ ಹೇಳಿದ್ದೇನು? | | ACTPnews

ಬೆಂಗಳೂರಿಗೆ ಬಂದ ಟಾಕ್ಸಿಕ್ ಬೆಡಗಿ; ಯಶ್ ಬಗ್ಗೆ ಹೇಳಿದ್ದೇನು


Last Updated:

ಟಾಕ್ಸಿಕ್ ಚಿತ್ರ ಅತೀ ಶೀಘ್ರದಲ್ಲಿಯೇ ಬರುತ್ತದೆ. ಸ್ವಲ್ಪ ತಾಳ್ಮೆಯಿಂದ ಇರಿ. ಈ ಚಿತ್ರದ ನಾಯಕ ಯಶ್ ಅವರಿಂದ ತುಂಬಾನೆ ಕಲಿತುಕೊಂಡಿದ್ದೇನೆ. ಇವರು ದೇಶದ ಅತಿ ದೊಡ್ಡ ಸೂಪರ್ ಸ್ಟಾರ್ ಆಗಿದ್ದಾರೆ ಅಂತಲೂ ಟಾಕ್ಸಿಕ್ ಬೆಡಗಿ ಹುಮಾ ಖುರೇಷಿ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಬೆಂಗಳೂರಿಗೆ ಬಂದ ಟಾಕ್ಸಿಕ್ ಬೆಡಗಿ; ಯಶ್ ಬಗ್ಗೆ ಹೇಳಿದ್ದೇನು
ಬೆಂಗಳೂರಿಗೆ ಬಂದ ಟಾಕ್ಸಿಕ್ ಬೆಡಗಿ; ಯಶ್ ಬಗ್ಗೆ ಹೇಳಿದ್ದೇನು

ಟಾಕ್ಸಿಕ್ ಬೆಡಗಿ ಹುಮಾ ಖುರೇಷಿ (Huma Qureshi) ರಾಕಿ ಭಾಯ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ. ಡೈರೆಕ್ಟರ್ ಗೀತು ಮೋಹನ್‌ ದಾಸ್ (Geetu Mohandas) ಅವರಿಗೂ ಧನ್ಯವಾದ ಹೇಳಿದ್ದಾರೆ. ಇದಕ್ಕೆ ಕಾರಣವೂ ಇದೆ. ತಮ್ಮ ನಿರ್ಮಾಣದ ಅತಿ ಚಿಕ್ಕ ಚಿತ್ರಕ್ಕೆ ಯಶ್ (Yash) ಹಾಗೂ ಗೀತು ಮೋಹನ್‌ದಾಸ್ ಸಪೋರ್ಟ್‌ ಮಾಡಿದ್ದಾರೆ. ಹಾಗಾಗಿಯೇ ಇಬ್ಬರಿಗೂ ಧನ್ಯವಾದ ಹೇಳಿದ್ದಾರೆ. ಆದರೆ, ಇವರು ಈ ಮಾತುಗಳನ್ನ ಬೆಂಗಳೂರಿನಲ್ಲಿಯೇ ಬಂದು ಹೇಳಿದ್ದಾರೆ. ಇದಕ್ಕೂ ಹೆಚ್ಚಾಗಿ ಟಾಕ್ಸಿಕ್ ಸಿನಿಮಾ (Toxic Movie) ಬಗ್ಗೆನೂ ಹೇಳಿಕೊಂಡಿದ್ದಾರೆ. ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

ಹುಮಾ ಖುರೇಷಿ ಹೇಳಿದ್ದೇನು

ಹುಮಾ ಖುರೇಷಿ ಟಾಕ್ಸಿಕ್ ಚಿತ್ರದಲ್ಲಿ ಎಲಿಜಬೆತ್ ರೋಲ್ ಮಾಡಿದ್ದಾರೆ. ಈ ಪಾತ್ರದ ಖದರ್ ಏನು ಅನ್ನೋದು ಗೊತ್ತಾಗಿದೆ. ಸಿನಿಮಾದ ಪೋಸ್ಟರ್ ಅದನ್ನ ಹೇಳುತ್ತದೆ.
Bollywood Actress Huma Qureshi talks about Yash work and Toxic Movie at Benglauru

ರಾಕಿ ಭಾಯ್‌ಗೆ ಥ್ಯಾಂಕ್ಸ್

(ಚಿತ್ರ ಕೃಪೆ: ಹುಮಾ ಖುರೇಷಿ ಇನ್‌ಸ್ಟಾಗ್ರಾಮ್)

ಆದರೆ, ಈ ಚಿತ್ರದ ಸಮಯದಲ್ಲಿ ಯಶ್ ಅವರಿಂದ ತುಂಬಾನೆ ಕಲಿತುಕೊಂಡಿದ್ದೇನೆ. ಇವರು ದೇಶದ ಅತಿ ದೊಡ್ಡ ಸೂಪರ್ ಸ್ಟಾರ್ ಆಗಿದ್ದಾರೆ. ಈ ಸಿನಿಮಾ ಆದಷ್ಟು ಬೇಗ ಬರುತ್ತದೆ. ಸ್ವಲ್ಪ ತಾಳ್ಮೆಯಿಂದಿರಿ ಅಂತಲೇ ಹುಮಾ ಖುರೇಷಿ ಹೇಳಿಕೊಂಡಿದ್ದಾರೆ.

ಚಿತ್ರ ಪ್ರಚಾರಕ್ಕೆ ಬಂದ ಹುಮಾ

ಹುಮಾ ಖುರೇಷಿ ತಮ್ಮ ಚಿತ್ರ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದರು. ತಮ್ಮ ಸಹೋದರ ಸಾಕಿಬ್ ಸಲೀಮ್ ಹಾಗೂ ತಾವು ಸೇರಿಯೇ ಈ ಒಂದು ಚಿತ್ರ ನಿರ್ಮಾಣ ಮಾಡಿದ್ದಾರೆ.

ಹುಮಾ ಖುರೇಷಿ ಪಾತ್ರ

ಈ ಒಂದು ಚಿತ್ರದಲ್ಲಿ ಹುಮಾ ಖುರೇಷಿ ಅವರು ಬೇಬಿ ಕರ್ಮರ್ಕರ್ ಅನ್ನುವ ಪಾತ್ರ ಮಾಡಿದ್ದಾರೆ. ಕಿವುಡಿ ಮತ್ತು ಮೂಗಿಯ ಪಾತ್ರವನ್ನೆ ಈ ಚಿತ್ರದಲ್ಲಿ ಹುಮಾ ಖುರೇಷಿ ಮಾಡಿದ್ದಾರೆ.

ಈ ಒಂದು ಪಾತ್ರಕ್ಕಾಗಿಯೇ ಹುಮಾ ಖುರೇಷಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಸನ್ನೆಭಾಷೆಯನ್ನು ಕಲಿತುಕೊಂಡಿದ್ದಾರೆ. ತೀರಾ ಸಾಕ್ಷ್ಯಚಿತ್ರ ಆಗಬಾರದು ಅಂತಲೇ ಎಲ್ಲರಿಗೂ ಅರ್ಥ ಆಗುವ ರೀತಿನೇ ಈ ಚಿತ್ರದಲ್ಲಿ ಸನ್ನೆ ಭಾಷೆಯನ್ನ ಇಟ್ಟಿದ್ದೇವೆ ಅಂತಲೂ ಹುಮಾ ಖುರೇಷಿ ಹೇಳಿಕೊಂಡಿದ್ದಾರೆ.

Bollywood Actress Huma Qureshi talks about Yash work and Toxic Movie at Benglauru

ಯಶ್ ಬಗ್ಗೆ ಹೇಳಿದ್ದೇನು

(ಚಿತ್ರ ಕೃಪೆ: ಯಶ್ ಇನ್‌ಸ್ಟಾಗ್ರಾಮ್)

ರಾಕಿ ಭಾಯ್‌ಗೆ ಥ್ಯಾಂಕ್ಸ್

ಈ ಚಿತ್ರಕ್ಕೆ ಯಶ್ ಸಪೋರ್ಟ್ ಮಾಡಿದ್ದಾರೆ. ಟಾಕ್ಸಿಕ್ ಚಿತ್ರದ ಡೈರೆಕ್ಟರ್ ಗೀತು ಮೋಹನ್‌ದಾಸ್ ಕೂಡ ಸಪೋರ್ಟ್ ಮಾಡಿದ್ದಾರೆ. ಚಿತ್ರ ರಿಲೀಸ್ ಆಗುವ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಬಗ್ಗೆ ಪೋಸ್ಟ್ ಹಾಕಿದ್ದಾರೆ.

ಬೇಬಿ ಡು ಡೈ ಡು ಮಾಹಿತಿ

ಈ ಒಂದು ಚಿತ್ರ ಕ್ರೈಮ್ ಕಾಮಿಡಿ ಥ್ರಿಲ್ಲರ್ ಚಿತ್ರವೇ ಆಗಿದೆ. ಈ ಚಿತ್ರವನ್ನ ನಾಚಿಕೇತ್ ಸಮಂತ್ ಡೈರೆಕ್ಷನ್ ಮಾಡಿದ್ದಾರೆ. ಚಿತ್ರದಲ್ಲಿ ಸಿಕಂದರ್ ಖೇರ್, ಚಂಕಿ ಪಾಂಡೆ, ರಚಿತ್ ಸಿಂಗ್ ಸೇರಿದಂತೆ ಇನ್ನು ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports