Last Updated:
ಅತ್ಯಚಾರ ಆರೋಪಿ ತಾಯಿ ಮಗನ ಪಾಪಾದ ಕೃತ್ಯಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಆತ ಮಾಡಿರುವ ತಪ್ಪಿಗೆ ತಕ್ಕ ಶಿಕ್ಷೆಯಾಗಿದೆ. ನನ್ನ ಮಗನ ಶವವನ್ನು ನೋಡಲು ನಾನು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ: ಬಾರೂಯೀಪುರ್ (Baruipur Case) 12 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣದ (Rape And Murder Case) ಆರೋಪಿ ಪೊಲೀಸರ ಎನ್ಕೌಂಟರ್ನಲ್ಲಿ (Encounter) ಹತ್ಯೆಯಾಗಿದ್ದಾನೆ. ಪಶ್ಚಿಮ ಬಂಗಾಳದ (West Bengal) ಬರುಯಿಪುರ್ನಲ್ಲಿ 12 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ್ರಮುಖ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಮುಖ್ಯ ಆರೋಪಿ ಪ್ರಭಾಶ್ ಮಂಡಲ್ನನ್ನು ಪೊಲೀಸರು ಎನ್ಕೌಂಟರ್ನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ತನಿಖೆಯ ಭಾಗವಾಗಿ ಕ್ರೈಂ ಸೀನ್ ಪುನರ್ ನಿರ್ಮಿಸಲು ಪೊಲೀಸರು ಅಪರಾಧ ಎಸಗಿದ್ದ ಸ್ಥಳಕ್ಕೆ ಕರೆದುಕೊಂಡು ಹೋದಾಗ ಆರೋಪಿ ಪ್ರಭಾಶ್ ಮಂಡಲ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸರ ಬಂದೂಕನ್ನು ಕಸಿದುಕೊಂಡು, ಪೊಲೀಸರ ಮೇಲೆ ಫೈರಿಂಗ್ ಮಾಡಿದ್ದಾನೆ, ಪ್ರತೀಕಾರವಾಗಿ ಪೊಲೀಸರು ಆರೋಪಿ ಮೇಲೆ ಗುಂಡು ಹಾರಿಸಿದ್ದರು. ಗುಂಡಿನ ದಾಳಿಯಲ್ಲಿ ಗಾಯಗೊಂಡು ಮೊಂಡೋಲ್ನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದ್ರೆ, ಗಂಭೀರವಾಗಿ ಗಾಯಗೊಂಡಿದ್ದ ಪ್ರಭಾಶ್ ಮೃತಪಟ್ಟರು ಎಂದು ಪೊಲೀಸರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ‘ಒಬ್ಬ ತಾಯಿಯಾಗಿ ನನಗೆ ದುಃಖವಾಗಿದೆ, ಆದರೆ ಅವನು ಮಾಡಿದ ಅಪರಾಧಕ್ಕೆ ಶಿಕ್ಷೆ ಸಿಕ್ಕಿದ್ದರಿಂದ ನನಗೆ ಸಮಾಧಾನವಾಗಿದೆ’ ಅವನ ಶವವನ್ನು ಸಹ ಮನೆಗೆ ತರುವುದಿಲ್ಲ. ಅವನ ಶವವನ್ನು ನೋಡಲು ಇಷ್ಟಪಡಲ್ಲ. ನಮ್ಮ ಕುಟುಂಬದವರು ಯಾರೂ ಹೋಗುವುದಿಲ್ಲ. ಅವನು ನಮ್ಮ ಮಾತನ್ನು ಕೇಳಲಿಲ್ಲ ಎಂದು ಮಗನ ವಿರುದ್ಧ ಆಕ್ರೋಶ ಹೊರಹಾಕಿದರು.
ಜುಲೈ 4ರಂದು ಬಾಲಕಿ ಕಾಣೆಯಾಗಿದ್ದಳು. ಜುಲೈ 5ರಂದು ಬರುಯಿಪುರ್ನ ಕೊಳದಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದರು. ಪೊಲೀಸರು ವಿಧಿವಿಜ್ಞಾನ ಮತ್ತು ಪೋಸ್ಟ್ಮಾರ್ಟಮ್ ವರದಿಗಳಿಗಾಗಿ ಕಾಯುತ್ತಿದ್ದರು. ನಂತರ ಅಸಲಿ ಸತ್ಯ ಬಯಲಾಗಿದೆ.
ಪ್ರಾಥಮಿಕ ಮರಣೋತ್ತರ ವರದಿಯ ಪ್ರಕಾರ, ಬಾಲಕಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಅಂದರೆ ಕೊಳಕ್ಕೆ ಎಸೆಯುವಾಗ ಆಕೆ ಜೀವಂತವಾಗಿದ್ದಳು ಎನ್ನಲಾಗಿದೆ. ಆಕೆಯ ಶ್ವಾಸಕೋಶ ಮತ್ತು ಹೊಟ್ಟೆಯಲ್ಲಿ ನೀರು ಕಂಡುಬಂದಿದೆ. ಬಾಲಕಿಯ ದೇಹದ ಮೇಲೆ ಗಾಯಗಳಿದ್ದವು. ಮೂವರು ಆರೋಪಿಗಳು ಸೇರಿ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾಗಿ ತಿಳಿದುಬಂದಿದೆ. ಅಲ್ಲದೇ ಆರೋಪಿಗಳು ಈ ಘಟನೆಗೆ ಮುಂಚೆ ಮಾದಕ ದ್ರವ್ಯ ಸೇವಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರ ಪ್ರಕಾರ, ಆರೋಪಿಗಳಲ್ಲಿ ಒಬ್ಬರು ಬಾಲಕಿಯನ್ನು ಗುಡಿಸಲಿಗೆ ಕರೆದೊಯ್ದಿದ್ದರು. ಅಲ್ಲಿ ಇತರ ಇಬ್ಬರು ಆರೋಪಿಗಳು ಇದ್ದರು. ಘಟನೆ ನಡೆದ ನಂತರ ಮೂವರೂ ಪ್ರತ್ಯೇಕವಾಗಿ ಪರಾರಿಯಾಗಿದ್ದರು.
Baruipur Case: ‘ಎಸೆದುಬಿಡಿ, ಇಲ್ಲ ಸುಟ್ಟುಬಿಡಿ’! ಅತ್ಯಾಚಾರ ಮಾಡಿದ್ದ ಪಾಪಿ ಮಗನ ಕೃತ್ಯಕ್ಕೆ ಹೆತ್ತ ತಾಯಿ ಆಕ್ರೋಶ!













