Esha Lankesh: ಕನ್ನಡ ಚಿತ್ರರಂಗಕ್ಕೆ ಕವಿತಾ ಲಂಕೇಶ್ ಮಗಳ ಎಂಟ್ರಿ; ಡೈರೆಕ್ಟರ್ ಯಾರು ಗೊತ್ತಾ? | | ACTPnews

ಕನ್ನಡ ಚಿತ್ರರಂಗಕ್ಕೆ ಕವಿತಾ ಲಂಕೇಶ್ ಮಗಳ ಎಂಟ್ರಿ!


Last Updated:

ಕವಿತಾ ಲಂಕೇಶ್ ಅವರ ಮಗಳು ಇಶಾ ಲಂಕೇಶ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ನಾಯಕಿ ಆಗಿಯೇ ಬರ್ತಿರೋ ಇವರ ಚಿತ್ರವನ್ನ ಪ್ರೀತಂ ಗುಬ್ಬಿ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಚಿತ್ರದ ಇನ್ನಷ್ಟು ಅಧಿಕೃತ ವಿವರ ಇಲ್ಲಿದೆ ಓದಿ.

ಕನ್ನಡ ಚಿತ್ರರಂಗಕ್ಕೆ ಕವಿತಾ ಲಂಕೇಶ್ ಮಗಳ ಎಂಟ್ರಿ!
ಕನ್ನಡ ಚಿತ್ರರಂಗಕ್ಕೆ ಕವಿತಾ ಲಂಕೇಶ್ ಮಗಳ ಎಂಟ್ರಿ!

ಡೈರೆಕ್ಟರ್ ಪ್ರೀತಂ ಗುಬ್ಬಿ (Preetham Gubbi) ಮತ್ತೆ ಬಂದಿದ್ದಾರೆ. ಬಾನದಾರಿಯಲಿ (Baanadariyalli Movie) ಆದ್ಮೇಲೆ ಈಗಲೇ ಮತ್ತೊಂದು ಚಿತ್ರ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. ಹೀರೋ ಯಾರು ಅನ್ನೋದು ಗೊತ್ತಾಗಿಲ್ಲ. ಆದರೆ, ಅದಕ್ಕೂ ಮೊದಲೇ ಚಿತ್ರದ ನಾಯಕಿ (Movie Heroine) ಯಾರು ಅನ್ನೋದು ರಿವೀಲ್ ಆಗಿದೆ. ಅಧಿಕೃತವಾಗಿಯೇ ಈ ಮಾಹಿತಿ ಬಂದಿದೆ. ಈಗಾಗಲೇ ಹೇಳಿದಂತೆ ಈ ಚಿತ್ರದ ಮೂಲಕ ಕವಿತಾ ಲಂಕೇಶ್ (Kavitha Lankesh) ಅವರ ಮಗಳು ಇಶಾ ಲಂಕೇಶ್ ಸಿನಿರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಇಶಾ ಲಂಕೇಶ್

ಡೈರೆಕ್ಟರ್ ಕವಿತಾ ಲಂಕೇಶ್ ಅವರ ಮಗಳು ಇಶಾ ಲಂಕೇಶ್ ಆ್ಯಕ್ಟೀವ್ ಆಗಿದ್ದಾರೆ. ಮಾಡಲಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾರೆ.

Kavitha Lankesh Daughter Esha Lankesh going to enter kannada film industry soon

ಡೈರೆಕ್ಟರ್ ಯಾರ್ ಗೊತ್ತಾ?
ಆದರೆ, ಬಣ್ಣದ ಲೋಕಕ್ಕೆ ಈಗ ಕಾಲಿಡುತ್ತಿದ್ದಾರೆ. ಡೈರೆಕ್ಟರ್ ಪ್ರೀತಂ ಗುಬ್ಬಿ ಅವರು ಇಶಾ ಲಂಕೇಶ್ ಅವರನ್ನ ಬೆಳ್ಳಿ ತೆರೆಗೆ ಕರೆದುಕೊಂಡು ಬರ್ತಿದ್ದಾರೆ.
ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ

ಈ ಒಂದು ಚಿತ್ರಕ್ಕೆ ಇನ್ನು ಶೀರ್ಷಿಕೆ ಇಟ್ಟಿಲ್ಲ. ಆದರೆ, ನಾಯಕಿ ಇಶಾ ಲಂಕೇಶ್ ಅನ್ನೋದು ರಿವೀಲ್ ಆಗಿದೆ. ಪ್ರೀತಂ ಗುಬ್ಬಿ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ ಅನ್ನೋದು ಅಧಿಕೃತವಾಗಿಯೇ ಗೊತ್ತಾಗಿದೆ.

ಚಿತ್ರ ನಿರ್ಮಾಣ ಸಂಸ್ಥೆ ಅಂತ ಬಂದಾಗ, ಈ ಚಿತ್ರವನ್ನ ನವಿಶಾ ಫಿಲಂಸ್ ಲಾಂಛನದಲ್ಲಿ ಶಿವರಾಜ್ ಕನಗನಪಲ್ಲಿ ನಿರ್ಮಿಸುತ್ತಿದ್ದಾರೆ. ಈ ಸಂಸ್ಥೆಯ ನಿರ್ಮಾಣದಲ್ಲಿ ಈಗಾಗಲೇ ಒಂದು ಚಿತ್ರ ಬಂದಿದೆ. ಇಶಾ ಲಂಕೇಶ್ ನಟನೆಯ ಈ ಚಿತ್ರ ಎರಡನೇ ಚಿತ್ರವಾಗಿದೆ.

ಪ್ರೀತಂ ಗುಬ್ಬಿ ಈ ಹಿಂದಿನ ಚಿತ್ರ

ಪ್ರೀತಂ ಗುಬ್ಬಿ ಯಾರು ಅನ್ನೋದು ಗೊತ್ತೇ ಇದೆ. ಮುಂಗಾರು ಮಳೆ ಚಿತ್ರಕ್ಕೆ ಇವರೇ ಕತೆ ಬರೆದಿದ್ದರು. ಈ ಚಿತ್ರ ಆದ್ಮೇಲೆ ಇವರೇ ಸ್ವತಂತ್ರ ನಿರ್ದೇಶಕರೂ ಆದರು.

Kavitha Lankesh Daughter Esha Lankesh going to enter kannada film industry soon

ಪ್ರೀತಂ ಕೊನೆಯ ಚಿತ್ರ ಯಾವುದು

ಇವರ ಡೈರೆಕ್ಷನ್ ಅಲ್ಲಿ ಹಾಗೆ ಸುಮ್ಮನೆ, ಮಳೆಯಲಿ ಜೊತೆಯಲಿ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಜಾನು, ನಮ್ ದುನಿಯಾ ನಮ್ ಸ್ಟೈಲ್, ದಿಲ್ ರಂಗೀಲಾ, ಜಾನಿ ಜಾನಿ ಯೆಸ್ ಪಾಪಾ ಚಿತ್ರವೂ ಬಂದಿದೆ.

ಪ್ರೀತಂ ಕೊನೆಯ ಚಿತ್ರ ಯಾವುದು

ಪ್ರೀತಂ ಗುಬ್ಬಿ ಸುಮಾರು 3 ವರ್ಷದಿಂದ ಯಾವ ಸಿನಿಮಾನೂ ಮಾಡಿಲ್ಲ. 99 ಚಿತ್ರ ಮಾಡಿದ್ದರು. ಇದು 2019 ರಲ್ಲಿ ರಿಲೀಸ್ ಆಗಿತ್ತು.

ಈ ಸಿನಿಮಾ ಆದ್ಮೇಲೆ 2023 ರಲ್ಲಿ ಬಾನದಾರಿಯಲಿ ಚಿತ್ರ ಮಾಡಿದ್ದರು. ಇವರೆಡೂ ಚಿತ್ರಗಳು ಗಣೇಶ್ ಅವರ ಜೊತೆಗೆ ಮಾಡಿರೋ ಚಿತ್ರಗಳೇ ಆಗಿವೆ.

ಈಗೀನ ಚಿತ್ರದ ಹೀರೋ ಯಾರು

ಆದರೆ, ಇಶಾ ಲಂಕೇಶ್ ನಾಯಕಿ ಆಗಿರೋ ಈ ಹೊಸ ಚಿತ್ರದ ನಾಯಕ ಯಾರು ಅನ್ನುವ ಪ್ರಶ್ನೆ ಇದೆ. ಈ ಪ್ರಶ್ನೆಗೆ ಉತ್ತರ ಇನ್ನಷ್ಟೆ ಸಿಗಬೇಕಿದೆ. ಹಾಗೆ ಮುಂದಿನ ದಿನಗಳಲ್ಲಿ ಚಿತ್ರದ ಇತರ ಮಾಹಿತಿ ಕೊಡುವುದಾಗಿ ಪ್ರೀತಂ ಗುಬ್ಬಿ ಹೇಳಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed