Kiccha Sudeep: ಈ ದಿನ ನನ್ನ ಜೀವನದಲ್ಲಿ ತುಂಬಾ ವಿಶೇಷ ! ಭಾವುಕ ಪೋಸ್ಟ್ ಹಂಚಿಕೊಂಡ ಕಿಚ್ಚ ಸುದೀಪ್! | | ACTPnews

'ಕಿಚ್ಚ'


Last Updated:

‘ಹುಚ್ಚ’ ಚಿತ್ರದ ಯಶಸ್ಸಿನ ಬಳಿಕ ಸುದೀಪ್ ಅವರ ವೃತ್ತಿಜೀವನವೇ ಬದಲಾಯಿತು. ಚಿತ್ರದಲ್ಲಿನ ‘ಕಿಚ್ಚ’ ಪಾತ್ರ ಎಷ್ಟರ ಮಟ್ಟಿಗೆ ಜನಪ್ರಿಯವಾಯಿತೆಂದರೆ, ಅಂದಿನಿಂದ ಇಂದಿನವರೆಗೂ ಅಭಿಮಾನಿಗಳು ಅವರನ್ನು ‘ಕಿಚ್ಚ ಸುದೀಪ್’ ಎಂದೇ ಕರೆಯುತ್ತಿದ್ದಾರೆ.

'ಕಿಚ್ಚ'
‘ಕಿಚ್ಚ’

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಪಾಲಿಗೆ ಜುಲೈ 6 ಒಂದು ವಿಶೇಷ ದಿನ. ಏಕೆಂದರೆ ಇದೇ ದಿನ ಬಿಡುಗಡೆಯಾದ ಎರಡು ಸಿನಿಮಾಗಳು ಅವರ ಸಿನಿ ಬದುಕಿಗೆ ಮಹತ್ವದ ತಿರುವು ನೀಡಿದವು. ಒಂದು ಸಿನಿಮಾ ಅವರನ್ನು ಕನ್ನಡ ಚಿತ್ರರಂಗದ ಸ್ಟಾರ್ ಆಗಿ ರೂಪಿಸಿದರೆ, ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಪಾರ ಜನಪ್ರಿಯತೆ ತಂದುಕೊಟ್ಟಿತು.

ಹೌದು ನಟ ಕಿಚ್ಚ ಸುದೀಪ್ 2000ರಲ್ಲಿ ಬಿಡುಗಡೆಯಾದ ‘ಸ್ಪರ್ಶ’ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದರು. ಆದರೆ ಅವರನ್ನು ಮಾಸ್ ಹೀರೋ ಆಗಿ ಮಾಡಿದ್ದು 2001ರ ಜುಲೈ 6ರಂದು ಬಿಡುಗಡೆಯಾದ ‘ಹುಚ್ಚ’ ಸಿನಿಮಾ. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರ ತಮಿಳಿನ ಸೂಪರ್ ಹಿಟ್ ‘ಸೇತು’ ಚಿತ್ರದ ರಿಮೇಕ್ ಆಗಿತ್ತು.

ಚಿತ್ರದಲ್ಲಿ ಸುದೀಪ್ ಎರಡು ವಿಭಿನ್ನ ಮನಸ್ಥಿತಿಯ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಆ್ಯಂಗ್ರಿ ಯಂಗ್‌ಮ್ಯಾನ್ ಆಗಿ ಹಾಗೂ ಮಾನಸಿಕ ಅಸ್ವಸ್ಥನಾಗಿ ಅವರ ಅಭಿನಯ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು.

‘ಹುಚ್ಚ’ ಚಿತ್ರದ ಯಶಸ್ಸಿನ ಬಳಿಕ ಸುದೀಪ್ ಅವರ ವೃತ್ತಿಜೀವನವೇ ಬದಲಾಯಿತು. ಚಿತ್ರದಲ್ಲಿನ ‘ಕಿಚ್ಚ’ ಪಾತ್ರ ಎಷ್ಟರ ಮಟ್ಟಿಗೆ ಜನಪ್ರಿಯವಾಯಿತೆಂದರೆ, ಅಂದಿನಿಂದ ಇಂದಿನವರೆಗೂ ಅಭಿಮಾನಿಗಳು ಅವರನ್ನು ‘ಕಿಚ್ಚ ಸುದೀಪ್’ ಎಂದೇ ಕರೆಯುತ್ತಿದ್ದಾರೆ. ಈ ಸಿನಿಮಾ ಅವರಿಗೆ ಮೊದಲ ಬಾರಿಗೆ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು.

ಒಂದು ನೊಣದ ಸುತ್ತ ಸಾಗುವ ವಿಶಿಷ್ಟ ಕಥಾಹಂದರ ಹೊಂದಿದ್ದ ಈ ಚಿತ್ರದಲ್ಲಿ ಸುದೀಪ್ ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ಅವರ ಸ್ಟೈಲ್, ಮ್ಯಾನರಿಸಂ ಮತ್ತು ಅಭಿನಯ ಭಾರತೀಯ ಸಿನಿಪ್ರಿಯರ ಗಮನ ಸೆಳೆಯಿತು. ನಾಯಕನಿಗಿಂತಲೂ ಖಳನಾಯಕನ ಪಾತ್ರಕ್ಕೆ ಹೆಚ್ಚು ಚಪ್ಪಾಳೆ ಸಿಕ್ಕ ಅಪರೂಪದ ಸಿನಿಮಾಗಳಲ್ಲಿ ‘ಈಗ’ ಕೂಡ ಒಂದು.

ಜುಲೈ 6 ಏಕೆ ವಿಶೇಷ?

2001ರ ಜುಲೈ 6ರಂದು ಬಿಡುಗಡೆಯಾದ ‘ಹುಚ್ಚ’ ಸಿನಿಮಾ ಸುದೀಪ್ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟರೆ, 2012ರ ಜುಲೈ 6ರಂದು ಬಿಡುಗಡೆಯಾದ ‘ಈಗ’ ಸಿನಿಮಾ ಅವರನ್ನು ದೇಶಾದ್ಯಂತ ಪರಿಚಯಿಸಿತು. ಎರಡು ವಿಭಿನ್ನ ಹಂತಗಳಲ್ಲಿ ಬಿಡುಗಡೆಯಾದ ಈ ಸಿನಿಮಾಗಳು ಅವರ ವೃತ್ತಿಜೀವನದ ಎರಡು ಮಹತ್ವದ ಮೈಲಿಗಲ್ಲುಗಳಾಗಿ ಉಳಿದಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed