ಅಪ್ಪುಗಾಗಿ ಬರೆದ ‘ಆಹ್ವಾನ’ ಕಥೆ ಅಪ್ಪು ಜೊತೆಗೆ ಹೋಯಿತು; ಪ್ರಶಾಂತ್ ನೀಲ್ ಎಮೋಷನಲ್!
ಆದರೆ, ಆ ಸಮಯದಲ್ಲಿ ಪುನೀತ್ ತಮ್ಮ ಬೇರೆ ಪ್ರಾಜೆಕ್ಟ್‌ಗಳಲ್ಲಿಯೇ ಬ್ಯುಸಿ ಇದ್ದರು. ತಮಿಳು ಪ್ರಾಜೆಕ್ಟ್ ಒಂದನ್ನ ಅವರು ಮಾಡೋರಿದ್ದರು. ಅದು ಆದ್ಮೇಲೇನೆ ಈ ಆಹ್ವಾನ ಚಿತ್ರ ಮಾಡೋ ಪ್ಲಾನ್ ಇತ್ತು.
ಪ್ರಶಾಂತ್ ನೀಲ್ ಅವರಿಗೆ ಪುನೀತ್ ಅವರ ಬಗ್ಗೆ ವಿಶೇಷ ಪ್ರೀತಿ ಇದೆ. ಅದನ್ನ ಅವರು ಹಾಗೆ ಉಳಿಸಿಕೊಂಡಿದ್ದಾರೆ. ಪುನೀತ್ ಅವರಿಗಾಗಿಯೇ ಮಾಡಿರೋ ಕಥೆಯನ್ನ ಬೇರೆ ಯಾರಿಗೂ ಮಾಡಲಿಲ್ಲ.
ಅದನ್ನ Galatta Plus ಸಂದರ್ಶನದಲ್ಲಿಯೇ ಈಗ ಹೇಳಿಕೊಂಡಿದ್ದಾರೆ. ಪುನೀತ್ ಅವರಿಗಾಗಿಯೇ ಆ ಒಂದು ಕಥೆಯನ್ನ ಮಾಡಿದ್ದೆ. ಆ ಫ್ಯಾಮಿಲಿ ಕಥೆ ಅವರಿಗೇನೆ ಮಾಡಿರೋದು. ಆ ಕಥೆ ಅವರ ಜೊತೆಗೇನೆ ಹೋಯಿತು ಅಂತಲೇ ಕೊಂಚ ಎಮೋಷನಲ್ ಆಗಿಯೇ ಹೇಳಿಕೊಂಡಿದ್ದಾರೆ.
ಅಪ್ಪು ಅವರ ಈ ಸಿನಿಮಾ ಬಗ್ಗೆ ಈಗ ಯಾಕೆ ಮಾತು ಅನ್ನುವ ಪ್ರಶ್ನೆನೂ ಬರುತ್ತದೆ. ಆದರೆ, ಪ್ರಶಾಂತ್ ನೀಲ್ ತುಂಬಾನೆ ವಿಷಯಗಳನ್ನ ಮಾತನಾಡಿದ್ದಾರೆ.
ಸಲಾರ್, ಕೆಜಿಎಫ್, ಡ್ರ್ಯಾಗನ್ ಚಿತ್ರದ ಕುರಿತು ಹೇಳಿಕೊಂಡಿದ್ದಾರೆ. ಕಾರಣ, ಡ್ರ್ಯಾಗನ್ ಚಿತ್ರದ ಗ್ಲಿಂಪ್ಸ್ ರಿಲೀಸ್ ಆಗಿದೆ. ಈ ಹಿನ್ನೆಲೆಯಲ್ಲಿಯೇ ಪ್ರಶಾಂತ್ ನೀಲ್ Galatta Plus ಗೆ ಸಂದರ್ಶನ ಕೊಟ್ಟಿದ್ದಾರೆ.
ಈ ಸಂದರ್ಶನದಲ್ಲಿ ಸಂದರ್ಶಕರು ಒಂದು ಪ್ರಶ್ನೆ ಕೇಳ್ತಾರೆ. ಪುನೀತ್ ಅವರಿಗೆ ನೀವು ಮಾಡಿದ್ದ ಆ ಫ್ಯಾಮಿಲಿ ಸ್ಟೋರಿಯನ್ನ ಈಗ ಚಿತ್ರ ಮಾಡೋ ಪ್ಲಾನ್ ಇದಿಯಾ? ಆ ರೀತಿ ಆಲೋಚನೆ ಏನಾದರೂ ಇದಿಯಾ?
ಆಹ್ವಾನ ಅನ್ನೋ ಸಿನಿಮಾ
ಹೀಗೆ ಕೇಳಿದ ಪ್ರಶ್ನೆಗೆ ಪ್ರಶಾಂತ್ ನೀಲ್ ಉತ್ತರ ಕೊಟ್ಟಿದ್ದಾರೆ. ಅಪ್ಪುಗಾಗಿಯೇ ಮಾಡಿರೋ ಕಥೆ ಅದು. ಅವರ ಜೊತೆಗೇನೆ ಆ ಕಥೆ ಹೋಯಿತು ಅಂತಲೇ ಹೇಳಿದ್ದಾರೆ.
ಪ್ರಶಾಂತ್ ನೀಲ್ ಈ ಡ್ರ್ಯಾಗನ್ ಚಿತ್ರದಲ್ಲಿ ವಿಲನ್ ಕಥೆ ಹೇಳುತ್ತಿದ್ದಾರೆ. ತಾವು ಇಲ್ಲಿವರೆಗೂ ಬರೆದ ಪಾತ್ರಗಳಲ್ಲಿ ಇದು ಅತ್ಯಂತ ಕ್ರೂರ ಖಳನಾಯಕನ ಪಾತ್ರವೇ ಆಗಿದೆ.
ಡ್ರ್ಯಾಗನ್ ಚಿತ್ರದ ಗ್ಲಿಂಪ್ಸ್ ಮಾತ್ರ ಇದೀಗ ರಿಲೀಸ್ ಆಗಿದೆ. ಜೂನಿಯರ್ ಎನ್‌ಟಿಆರ್ ಜನ್ಮ ದಿನಕ್ಕೆ ಇದನ್ನ ರಿಲೀಸ್ ಮಾಡಿದ್ದಾರೆ. ಆದರೆ, ಈ ಚಿತ್ರ ಬರೋಕೆ ಇನ್ನೂ ಒಂದು ವರ್ಷ ಬೇಕಾಗುತ್ತದೆ.
ಈಗಾಗಲೇ ಸಿನಿಮಾ ತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಜೂನ್-11, 2027 ರಂದು ಈ ಚಿತ್ರ ದೊಡ್ಡಮಟ್ಟದಲ್ಲಿ ರಿಲೀಸ್ ಆಗುತ್ತಿದೆ ಅಂತ ಹೇಳಬಹುದು.












