ಡೇವಿಡ್ ಶ್ವಿಮ್ಮರ್ ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ರೆಸ್ಟೋರೆಂಟ್‌ನಲ್ಲಿ ಯುವತಿ ಜೊತೆ ಕಾಣಿಸಿಕೊಂಡಿದ್ದಾರೆ. ಡಿನ್ನರ್ ಡೇಟ್‌ಗೆ ಬಂದ ಇವರಿಬ್ಬರು ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಹೋಗುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
ಡೈಲಿ ಮೇಲ್ ವರದಿಯ ಪ್ರಕಾರ, ಡೇವಿಡ್ ಶ್ವಿಮ್ಮರ್ ಅವರು 29 ವರ್ಷದ ಎಲಿಯಾನಾ ಜೋಲ್ಕೊವ್ಸ್ಕಿಎಂಬಾಕೆ ಜೊತೆ ಊಟಕ್ಕೆ ಬಂದಿದ್ದರು. ಈಕೆ UCLA ನಲ್ಲಿ ವೈದ್ಯಕೀಯ ಅಭ್ಯಾಸ ಮಾಡುವುದರ ಜೊತೆಗೆ ಯಹೂದಿ ಕಾರ್ಯಕರ್ತೆ ಎಂದು ಸುದ್ದಿ ಮೂಲಗಳು ಮಾಹಿತಿ ನೀಡಿವೆ.
ಕೊರಿಯಾದ ಭಾಗವಾಗಿರುವ ಜೋಲ್ಕೊವ್ಸ್ಕಿ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾಳೆ. ಶಿಕ್ಷಣದ ಕಾರ್ಯಕರ್ತೆಯಾಗಿ ಕೂಡ ಕೆಲಸ ಮಾಡುತ್ತಿದ್ದಾಳೆ.
ಸಾಲ್ಮನ್ ಪಿಜ್ಜಾ ಮತ್ತು ಮಸಾಲೆಯುಕ್ತ ಟ್ಯೂನ ಟ್ಯಾಕೋಗಳಂತಹ ಐಟಂಗಳಿಗೆ ಹೆಸರಾದ ಈ ಬೆವರ್ಲಿ ಹಿಲ್ಸ್ ರೆಸ್ಟೋರೆಂಟ್‌ಗೆ ಹೆಚ್ಚಾಗಿ ಸೆಲೆಬ್ರಿಟಿಗಳು ಬರುತ್ತಾರೆ.
ಈ ಜೋಡಿ ಕೂಡ ಇಲ್ಲಿಯೇ ತಮ್ಮ ಊಟ ಮುಗಿಸಿ ಹೊರಗೆ ಬಂದು ಕಾರು ಹತ್ತುವಾಗ ಕಾಣಿಸಿಕೊಂಡಿದ್ದಾರೆ. ಜೋಲ್ಕೊವ್ಸ್ಕಿ ಕಾರು ಹತ್ತುವಾಗ ಕಾರ್ ಬಾಗಿಲನ್ನು ಡೇವಿಡ್ ಶ್ವಿಮ್ಮರ್ ತೆರೆಯುತ್ತಿರುವುದನ್ನು ಸೆರೆಸಿಕ್ಕ ದೃಶ್ಯಗಳಲ್ಲಿ ನೋಡಬಹುದಾಗಿದೆ.
ಜೊಲ್ಕೊವ್ಸ್ಕಿ ಫ್ರೀ ಹೇರ್‌ನೊಂದಿಗೆ ಕಪ್ಪು ಬಣ್ಣದ ಬಾಡಿಕಾಸ್ ರೀತಿಯ ಡ್ರೆಸ್ ಧರಿಸಿದ್ದರು, ಇನ್ನೂ ಸ್ಟಾರ್ ನಟ ಡೇವಿಡ್ ಶ್ವಿಮ್ಮರ್ ಕ್ಯಾಪ್, ಜಾಕೆಟ್, ಪ್ಯಾಂಟ್, ಶರ್ಟ್ ಧರಿಸಿ ಸಿಂಪಲ್ ಲುಕ್‌ನಲ್ಲಿ ಯಂಗ್ ಆಗಿ ಕಾಣುತ್ತಿದ್ದರು.
ಶ್ವಿಮ್ಮರ್ ಅವರು ವೈಯಕ್ತಿಕ ಜೀವನದ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಬ್ರಿಟಿಷ್ ಕಲಾವಿದ ಜೊಯಿ ಬಕ್‌ಮನ್ ಜೊತೆ ಶ್ವಿಮ್ಮರ್ ಮದುವೆಯಾಗಿದ್ದರು, ದಂಪತಿಗಳು ಏಳು ವರ್ಷಗಳ ಕಾಲ ಒಟ್ಟಿಗೆ ಸಂಸಾರ ಮಾಡಿದ್ದರು. ಆದಾದ ನಂತರ ಇಬ್ಬರಲ್ಲಿ ಬಿರುಕು ಮೂಡಿ 2017 ರಲ್ಲಿ ವಿಚ್ಛೇದನ ಪಡೆದುಕೊಂಡರು.
ಜೋಲ್ಕೊವ್ಸ್ಕಿಯ ಶೈಕ್ಷಣಿಕ ಹಿನ್ನೆಲೆ ಮತ್ತು ಸಿನಿಮಾ ಕಲಾವಿದನ ನಡುವಿನ ಓಡಾಟಕ್ಕೆ ಕೆಲವರು ಪ್ರೀತಿಪ್ರೇಮದ ಹಣೆಪಟ್ಟಿ ನೀಡಿದ್ದಾರೆ. ಆದರೆ ಈ ಬಗ್ಗೆ ಸದ್ಯಕ್ಕೆ, ಶ್ವಿಮ್ಮರ್ ಅಥವಾ ಜೋಲ್ಕೊವ್ಸ್ಕಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹಲವಾರು ಫ್ರೆಂಡ್ಸ್ ಎಪಿಸೋಡ್‌ಗಳನ್ನು ಸಹ ನಿರ್ದೇಶಿಸಿದ್ದರು ಶ್ವಿಮ್ಮರ್. ತದನಂತರ ರನ್ ಫ್ಯಾಟ್‌ಬಾಯ್ ರನ್ ಸಿನಿಮಾ ಮೂಲಕ ನಿರ್ದೇಶಕರಾಗಿ ಚೊಚ್ಚಲ ಪ್ರವೇಶ ಮಾಡಿದರು.













