Last Updated:
ಕೆಲವರು ಮಾಡೋ ಅನಾಚಾರಗಳು ಸ್ನೇಹ ಅನ್ನೋ ಪದಕ್ಕೇ ಕಳಂಕ ತರ್ತಿದೆ. ಸ್ನೇಹದ ಹೆಸರಲ್ಲಿ ಮಾಡಬಾರದ ಕೃತ್ಯ ಮಾಡ್ತಿದ್ದಾರೆ. ಇವರ ಕೂಡಾ ಇದೇ ಜಾಯಮಾನಕ್ಕೆ ಸೇರಿದವರು. ಸ್ನೇಹದ ಹೆಸರಲ್ಲಿ ಹೆಣ್ಮಗಳನ್ನ ಕರೆಸಿಕೊಂಡವ್ರು ಹುರಿದು ಮುಕ್ಕೋದಕ್ಕೆ ನೋಡಿದ್ದಾರೆ.
ಬೆಂಗಳೂರು: ಅವರಿಬ್ಬರು ಹಾಯ್ ಬಾಯ್ ಅಂತಾ ಶುರುವಾಗಿದ್ದ ಸ್ನೇಹಿತರು (Friends). ಇಬ್ಬರ ಮಧ್ಯೆ ನಂಬಿಕೆ ಮೂಡ್ತಿದ್ದಂತೆ ಒಳ್ಳೆ ಸ್ನೇಹಿತರಾಗಿದ್ದರು. ಇದನ್ನೇ ಬಂಡವಾಳ ಮಾಡ್ಕೊಂಡವ ಬರ್ತ್‌ಡೇ ಪಾರ್ಟಿ ನೆಪದಲ್ಲಿ (Birthday Party) ಕರೆಸಿ ಅಟ್ಟಹಾಸ ಮೆರೆಯೋದಕ್ಕೆ ನೋಡಿದ್ದಾನೆ.
ಸ್ನೇಹಿತರು ಅಂದರೆ ನಮ್ಮ ನಗುವನ್ನು ಹಂಚಿಕೊಳ್ಳುವ, ಕಷ್ಟ-ಸುಖಗಳಲ್ಲಿ ಬೆನ್ನೆಲುಬಾಗಿ ನಿಲ್ಲುವ ಪರಮಾಪ್ತರು. ರಕ್ತ ಸಂಬಂಧವನ್ನೂ ಮೀರಿದ ಸಂಬಂಧವಂದರೆ ಅದು ಸ್ನೇಹ ಸಂಬಂಧ ಮಾತ್ರ. ಹೀಗಾಗಿಯೇ ಸ್ನೇಹ ಅನ್ನೋ ಬಂಧಕ್ಕೆ ಅಷ್ಟು ಪ್ರಾಮುಖ್ಯತೆ ಇರೋದು. ಆದರೆ, ಕೆಲವರು ಮಾಡೋ ಅನಾಚಾರಗಳು ಸ್ನೇಹ ಅನ್ನೋ ಪದಕ್ಕೇ ಕಳಂಕ ತರ್ತಿದೆ. ಸ್ನೇಹದ ಹೆಸರಲ್ಲಿ ಮಾಡಬಾರದ ಕೃತ್ಯ ಮಾಡ್ತಿದ್ದಾರೆ. ಇವರ ಕೂಡಾ ಇದೇ ಜಾಯಮಾನಕ್ಕೆ ಸೇರಿದವರು. ಸ್ನೇಹದ ಹೆಸರಲ್ಲಿ ಹೆಣ್ಮಗಳನ್ನ ಕರೆಸಿಕೊಂಡವ್ರು ಹುರಿದು ಮುಕ್ಕೋದಕ್ಕೆ ನೋಡಿದ್ದಾರೆ.
ಇವ್ರೇ ನೋಡಿ ಮನುಷ್ಯ ರೂಪದ ರಾಕ್ಷಸರು. ಒಬ್ಬನ ಹೆಸರು ಅಮರೇಶ್, ಮತ್ತೊಬ್ಬನ ಹೆಸರು ಸೋಮಶೇಖರ್. ಬೆಂಗಳೂರಿನಲ್ಲೇ ಇದ್ದವ್ರು, ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡ್ಕೊಂಡಿದ್ದರು. ಆಗಲೇ ನೋಡಿ ಹೆಣ್ಮಗಳೊಬ್ಬಳ ಪರಿಚಯವಾಗಿದ್ದು. ಈ ಸೋಮಶೇಖರ್ ಜೊತೆ ಆತ್ಮೀಯಳಾಗಿದ್ದ ಯುವತಿ, ಆಗಾಗ ಮೀಟ್ ಆಗೋದು, ಫೋನ್ನಲ್ಲಿ ಮಾತಾಡೋದು ಮಾಡ್ತಿದ್ಲು. ಸ್ನೇಹಿತ ಅನ್ನೋ ಸಲುಗೆಯಲ್ಲಿ ತುಂಬಾನೇ ಕ್ಲೋಸ್ ಆಗಿದ್ಲು. ಆದರೆ ಈತ ಮಾತ್ರ ಬೇರೆಯದ್ದೇ ಸಂಚು ರೂಪಿಸಿದ್ದ. ಸ್ನೇಹದ ಹೆಸರಲ್ಲಿ ತಮ್ಮ ತೆವಲು ತೀರಿಸಿಕೊಳ್ಳೋದಕ್ಕೆ ಹೊಂಚು ಹಾಕ್ತಿದ್ದ. ಹೀಗಾಗಿಯೇ ಎರಡು ದಿನದ ಹಿಂದೆ ಮುಹೂರ್ತ ಫಿಕ್ಸ್ ಮಾಡಿದ್ದ. ಇದಕ್ಕೆ ದಾಳ ಮಾಡ್ಕೊಂಡಿದ್ದೇ ಹೆಣ್ಮಗಳ ಬರ್ತ್‌ಡೇ ದಿನವನ್ನ.
ಸ್ನೇಹಿತೆಯ ಬರ್ತ್‌ಡೇ ಇದ್ದರೂ ಮೀಟ್ ಮಾಡೋದಕ್ಕೆ ಆಗಿರ್ಲಿಲ್ಲ. ಆಕೆಯನ್ನ ಭೇಟಿ ಮಾಡಿ ವಿಶ್ ಮಾಡಿರ್ಲಿಲ್ಲ. ಇದನ್ನೇ ನೆಪ ಮಾಡ್ಕೊಂಡವ ನಾನಿದ್ದಲ್ಲಿಗೆ ಬಂದ್ಬಿಡು, ಇಬ್ಬರೂ ಸೇರಿ ಪಾರ್ಟಿ ಮಾಡೋಣ ಅಂತಾ ಕಥೆ ಕಟ್ಟಿದ್ದ. ಈತನ ಮಾತು ನಂಬಿದವ್ಳು ರಾತ್ರಿ 7 ಗಂಟೆ ಸುಮಾರಿಗೆ ಱಪಿಡೋ ಬುಕ್ ಮಾಡ್ಕೊಂಡು ಬರ್ತಿದ್ದಳು. ಈ ವೇಳೆ ಸೋಮಶೇಖರನ ಸ್ನೇಹಿತರು ಕೂಡಾ ಎಂಟ್ರಿಕೊಟ್ಟಿದ್ರು. ಎಲ್ಲರನ್ನ ಕರೆಸಿಕೊಂಡವ ನಿರ್ಜನ ಪ್ರದೇಶದ ಮನೆಯಲ್ಲಿ ಅಖಾಡ ರೆಡಿ ಮಾಡಿದ್ದ. ಸ್ನೇಹಿತೆ ಬರ್ತಿದ್ದಂತೆ ಐವರು ಸೇರ್ಕೊಂಡು ಪಾರ್ಟಿ ಮಾಡಿದ್ದಾರೆ. ನಂತರ ಶುರುವಾಗಿದೆ ಇವರ ಅಸಲಿ ಆಟ.
ಅಂಬರೀಷ್ ಎಂಬಾತ ಒಮ್ಮೆಲೆ ಯುವತಿ ಮೈಮೇಲೆ ಬಿದ್ದಿದ್ದಾನೆ. ಈ ವೇಳೆ ಉಳಿದ ನಾಲ್ವರು ಸ್ನೇಹಿತನ ಪಾಪದ ಕೃತ್ಯಕ್ಕೆ ಸಾಥ್ ನೀಡಿದ್ದರಂತೆ. ಸ್ವಲ್ಪ ಯಾಮಾರಿದರೂ ಹೆಣ್ಮಗಳನ್ನ ಹುರಿದು ಮುಕ್ಕಿ ಬಿಡ್ತಿದ್ರು. ಆದರೆ, ಈಕೆಯ ಅದೃಷ್ಟ ಚೆನ್ನಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡು ಬಂದವ್ಳು 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಎಂಟ್ರಿಕೊಟ್ಟ ಹೊಯ್ಸಳ ಸಿಬ್ಬಂದಿ, ಯುವತಿಯನ್ನ ರಕ್ಷಿಸಿ, ಕೀಚಕರ ಕೈಗೆ ಕೋಳ ತೊಡಿಸಿದೆ.
ನೈರುತ್ಯ ವಿಭಾಗ ಡಿಸಿಪಿ ಅನಿತಾ ಹದ್ದಣ್ಣನವರ್, ಐದು ಜನರಿನಲ್ಲಿ ಒಬ್ಬರು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು ಗೊತ್ತಾಗಿದೆ. ಆರೋಪಿ ಅಮರೇಶ್ ಅಂತ ಗೊತ್ತಾಗಿದ್ದು, ಇತರ ಮೂವರನ್ನು ಬಂಧನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
Bangalore [Bangalore],Bangalore,Karnataka













