Mohan Bhagwat: ರಾಮಮಂದಿರ ಹಗರಣದ ಬಗ್ಗೆ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಸಹಮತವಿದೆ ಎಂದ ಮೋಹನ್ ಭಾಗವತ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ನಾಗ್ಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ, ‘ದತ್ತಾತ್ರೇಯ ಹೊಸಬಾಳೆ ಜಿ ಬಿಡುಗಡೆ ಮಾಡಿದ ಹೇಳಿಕೆಯನ್ನು ನೋಡಿ. ನನ್ನ ಪ್ರತಿಕ್ರಿಯೆಯೂ ಅದೇ ಆಗಿದೆ’ ಎಂದು ತಿಳಿಸಿದರು.

News18
News18

ನಾಗ್ಪುರ: ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ಭಕ್ತರ ಕಾಣಿಕೆಯ ಹಗರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ತಮ್ಮ ಸಹಮತ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಭಾನುವಾರ ಹೇಳಿದ್ದಾರೆ.

ನಾಗ್ಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ, ‘ದತ್ತಾತ್ರೇಯ ಹೊಸಬಾಳೆ ಜಿ ಬಿಡುಗಡೆ ಮಾಡಿದ ಹೇಳಿಕೆಯನ್ನು ನೋಡಿ. ನನ್ನ ಪ್ರತಿಕ್ರಿಯೆಯೂ ಅದೇ ಆಗಿದೆ’ ಎಂದು ತಿಳಿಸಿದರು.

ಇದನ್ನೂ ಓದಿ: Rain Alert: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ! 13 ರಾಜ್ಯಗಳಿಗೆ 61KM ವೇಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಎಚ್ಚರಿಕೆ!

ರಾಮ ಮಂದಿರದ ದೇಣಿಗೆ ಹಗರಣ ವಿವಾದದ ಕುರಿತು ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯೆ ಕೇಳಿದಾಗ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಶುಕ್ರವಾರ ಹೇಳಿಕೆ ನೀಡಿರುವ ದತ್ತಾತ್ರೇಯ ಹೊಸಬಾಳೆ, ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನವು ಇಡೀ ಸಮಾಜದ ಭಾವನೆಗಳು ಮತ್ತು ನಂಬಿಕೆಯನ್ನು ‘ತೀವ್ರವಾಗಿ ನೋಯಿಸಿದೆ’ ಎಂದು ಹೇಳಿದ್ದಾರೆ ಮತ್ತು ತನಿಖೆಯ ನಂತರ ತಪ್ಪಿತಸ್ಥರೆಂದು ಕಂಡುಬಂದ ಯಾರೇ ಆದರೂ ಕಠಿಣ ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: Amarnath Yatra: 87 ವಿದೇಶಿಯರೂ ಸಹಿತ 6000 ಮಂದಿಯಿಂದ ಇಂದು ಅಮರನಾಥ ಯಾತ್ರೆ ಆರಂಭ

‘ಈ ದುರದೃಷ್ಟಕರ ಘಟನೆಯನ್ನು’ ದುರ್ಬಳಕೆ ಮಾಡಿಕೊಳ್ಳುವ ಮೂಲಕ ‘ಹಿಂದೂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳು’ ಹಿಂದೂ ಧರ್ಮಕ್ಕೆ ಕಳಂಕ ತರಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದ್ದರು. ಮತ್ತು ಅಂತಹ ‘ಪಿತೂರಿಗಳನ್ನು’ ತಡೆಯಲು ‘ಈ ಕಠಿಣ ಕ್ಷಣದಲ್ಲಿ’ ಅಗತ್ಯವಾದ ತಾಳ್ಮೆ ಮತ್ತು ಸಂಯಮವನ್ನು ಪ್ರದರ್ಶಿಸುವಂತೆ ಹಿಂದೂ ಸಮಾಜವನ್ನು ಕೇಳಿದರು.

ತಪ್ಪಿತಸ್ಥರೆಂದು ಕಂಡುಬಂದ ಯಾರಾದರೂ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports