Last Updated:
FIRನಲ್ಲಿ ಉಲ್ಲೇಖವಾದ ಕಂಪ್ಲೀಟ್ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದ್ದು, ಬೆದರಿಕೆ ಹಾಕಿದ್ದು, ಒಬ್ಬರಲ್ಲ ನಾಲ್ವರು ಅನ್ನೋ ವಿಚಾರ ಬಯಲಾಗಿದೆ. ಯಾರೆಲ್ಲಾ ಸಾಕ್ಷಿ ಸಂದೀಪ್ನನ್ನು ಮೀಟ್ ಮಾಡಿದ್ರು?
ಬೆಂಗಳೂರು (ಜು.03): ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣದಲ್ಲೇ ನಟ ದರ್ಶನ್ ಹಾಗೂ ಗೆಳತಿ ಪವಿತ್ರಾ ಗೌಡ ಜೈಲು ಸೇರುವಂತಾಗಿದೆ. ಬೇಲ್ ಸಿಗದೆ ದರ್ಶನ್ (Darshan) ಜೈಲಿನಲ್ಲೇ ದಿನದೂಡುವಂತಾಗಿದೆ. ಇದರ ನಡುವೆ ಕೋರ್ಟ್ನಲ್ಲಿ ನಡೀತಿರೋ ಟ್ರಯಲ್ ಟೆನ್ಷನ್ ದರ್ಶನ್ ನಿದ್ದೆಗೆಡಿಸಿದೆ. ಸಾಕ್ಷಿಗಳ (Witness) ಹೇಳಿಕೆ ದಾಖಲು ವೇಳೆ ಓರ್ವ ಸಾಕ್ಷಿ ತನಗೆ ಕೆಲವರು ಬೆದರಿಕೆ ಹಾಕಿದ ಬಗ್ಗೆ ತಿಳಿಸಿ ದೂರು ಕೊಟ್ಟಿದ್ರು. ಒಬ್ಬರನ್ನ ನಾಲ್ವರು ಬಂದು ತುಮಕೂರಿನ ಬಾರ್ ಕ್ಯಾಶಿಯರ್ಗೆ ಹಾಕಿದ್ರಾ ಧಮ್ಕಿ?
ರೇಣುಕಾಸ್ವಾಮಿಯ ಕಿಡ್ನ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ಸಾಕ್ಷಿಗಳ ವಿಚಾರಣೆ ನಡೆದಿದೆ. ಇತ್ತ ಬೆದರಿಕೆ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. FIRನಲ್ಲಿ ಉಲ್ಲೇಖವಾದ ಕಂಪ್ಲೀಟ್ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದ್ದು, ಬೆದರಿಕೆ ಹಾಕಿದ್ದು, ಒಬ್ಬರಲ್ಲ ನಾಲ್ವರು ಅನ್ನೋ ವಿಚಾರ ಬಯಲಾಗಿದೆ. ಯಾರೆಲ್ಲಾ ಸಾಕ್ಷಿ ಸಂದೀಪ್ನನ್ನು ಮೀಟ್ ಮಾಡಿದ್ರು?
ಸಿಸಿಟಿವಿ ಡಿವಿಆರ್ ಸೀಜ್ ಸಂಬಂಧ ಸಾಕ್ಷಿ ಸಂದೀಪ್ಗೆ ಸುಳ್ಳು ಹೇಳುವಂತೆ ಕೆಲವರು ಬೆದರಿಸಿದ ಆರೋಪ ಕೇಳಿ ಬಂದಿದೆ. 29/06/2026 ರಂದು ಸಾಕ್ಷಿ ನುಡಿಯಲು ಕೋರ್ಟ್ಗೆ ಬರುವಂತೆ ಎಎಸ್ಐ ನಟೇಶ್ ಅವರು ಸಂದೀಪ್ ಗೆ ಕರೆ ಮಾಡಿದ್ದರಂತೆ. ಬಳಿಕ ಕೆಲವರು ಸಂದೀಪ್ಗೆ ಆಮಿಷವೊಡ್ಡಿದ್ದಾರೆ ಎನ್ನುವ ಆರೋಪವಿದೆ.
ಮೊದಲಿಗೆ ಭೋವಿಪಾಳ್ಯದ ನಿವಾಸಿ ಆಕೃಷ್ ಎಂಬಾತನಿಂದ ಸಂದೀಪ್ ಅವ್ರಿಗೆ ಕರೆ ಬಂದಿದ್ದು. 25/06/2026 ರಂದು ಸಂಜೆ ಸುಮಾರು 18:30 ರ ವೇಳೆಗೆ ಆಕೃಷ್ ನಂಬರ್ ನಿಂದ ಕರೆ ಬಂದಿತ್ತಂತೆ. ಪದೇ ಪದೇ ಕರೆ ಬರ್ತಿದ್ದ ಹಿನ್ನಲೆ ಸಂದೀಪ್ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಹೋಗಿ ಅವರನ್ನ ಭೇಟಿಯಾಗಿದ್ದರು ಎನ್ನಲಾಗ್ತಿದೆ.
ಬಿಳಿ ಬಣ್ಣದ ಹ್ಯುಂಡೈ ವೆರ್ನಾ (Hyundai Verna) ಕಾರಲ್ಲಿ ಬಂದು ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳಲು ತಿಳಿಸಿದ್ದಾರೆ.ಕಾರಿನ ಮುಂಭಾಗದ ಸೀಟಿನಲ್ಲಿ ಡ್ರೈವರ್ ಜೊತೆಗೆ ಓರ್ವ ವ್ಯಕ್ತಿ ಹಾಗೂ ಹಿಂಭಾಗದ ಸೀಟಿನಲ್ಲಿ ಮತ್ತೊಬ್ಬ ವ್ಯಕ್ತಿ ಕುಳಿತಿದ್ರು. ಆಗ ಸಂದೀಪ್ ಅವರನ್ನ ನ್ಯಾಯಾಲಯಕ್ಕೆ ಹೋಗಿದ್ದೀರಾ? ಏನು ಹೇಳಿದ್ದೀರಾ?” ಎಂದು ಓರ್ವ ಪ್ರಶ್ನಿಸಿದ್ದಾನೆ. ಬಳಿಕ ಸಂದೀಪ್ ಮೊಬೈಲ್ ಫೋನ್ ಕಸಿದುಕೊಂಡು, ಮಾತನಾಡಿದ್ರು. ಕಾರಿನಲ್ಲೇ ಫೋನ್ ಮಾಡಿ ಲೌಡ್ ಸ್ಪೀಕರ್ ಆನ್ ಮಾಡಿದ್ರು. ಬಳಿಕ ಆ ಕಡೆಯಿಂದ ವಾಟ್ಸಾಪ್ ಕರೆ ಮಾಡಲು ತಿಳಿಸಿದ್ರು.
ವಾಟ್ಸಾಪ್ ಕರೆಯಲ್ಲಿ ನಾಲ್ವರು ಸಂಪರ್ಕದಲ್ಲಿದ್ದು ನನ್ನ ಜೊತೆ ಮಾತುಕತೆ ನಡೆಸಿದ್ರು. ಆಗ ಪೋನ್ ನಲ್ಲಿದ್ದ ವ್ಯಕ್ತಿಯೋರ್ವ ತಮಗೆ ಸಹಾಯ ಮಾಡುವಂತೆ ಕೇಳಿಕೊಂಡ. ರಾಘವೇಂದ್ರ, ಅನಿಲ್ ಕುಮಾರ್, ಜಗದೀಶ್ ಗೊತ್ತಿಲ್ಲ. ಪೊಲೀಸರೇ ಬಂದು ವಿಡಿಯೋ ಕ್ಲಿಪ್ಪಿಂಗ್ ತೆಗೆದುಕೊಂಡು ಹೋದ್ರು ಅಂತೇಳಲು ಒತ್ತಾಯಿಸಿದ್ರು ಎಂದು ಸಂದೀಪ್ ದೂರಿನಲ್ಲಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಸಾಕ್ಷಿ ಸಂದೀಪ್ ಬಳಿ ಒಂದು ಬಿಳಿ ಹಾಳೆಯ ಮೇಲೂ ಸಹಿ ಮಾಡುವಂತೆ ಒತ್ತಾಯಿಸಿದ್ದಾರೆ. ಕೋರ್ಟ್ ನಲ್ಲಿ ಸಹಾಯ ಮಾಡಿದ್ರೆ ಏನಾದ್ರೂ ನೋಡಿಕೊಳ್ಳುವುದಾಗಿ ಆಮಿಷವೊಡ್ಡಿದ್ದರಂತೆ. ಈ ಬಗ್ಗೆ ವಿಜಯನಗರ ಎಸಿಪಿ ಗಮನಕ್ಕೆ ತಂದು ಕೇಸ್ ದಾಖಲು ಮಾಡಿರೋ ಬಗ್ಗೆ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.
(ವರದಿ: ಗಂಗಾಧರ್, ನ್ಯೂಸ್18 ಕನ್ನಡ, ಬೆಂಗಳೂರು)
Actor Darshan: ದರ್ಶನ್ಗೆ ಕಂಟಕವಾಗುತ್ತಾ ‘ಸಾಕ್ಷಿ’ ಬೆದರಿಕೆ? ಒಬ್ಬರಲ್ಲ ಕಾರಿನಲ್ಲಿ ಬಂದು ಈ ನಾಲ್ವರು ಕೊಟ್ರು ವಾರ್ನಿಂಗ್! FIRನಲ್ಲಿದೆ ಸ್ಫೋಟಕ ಮಾಹಿತಿ













