Last Updated:
ಪ್ರಾಸಿಕ್ಯೂಷನ್ ಪ್ರಕರಣದ ಪ್ರಕಾರ, ಹುಡುಗಿಯ ತಾಯಿ ಜೂನ್ 12, 2020 ರಂದು ತನ್ನ ಅಣ್ಣನ ಅತ್ತೆಯ ಮನೆಗೆ ಹೋಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದಾಗ, ತನ್ನ ಮೂರು ವರ್ಷದ ಮಗಳು ಕಾಣೆಯಾಗಿದ್ದಾಳೆ ಎಂದು ವರದಿಯಾಗಿತ್ತು.
ಪ್ರಯಾಗ್‌ರಾಜ್: ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ (Crime News) ಕೊಲೆ ಮಾಡಿದ್ದ ವ್ಯಕ್ತಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 25,000 ರೂ. ದಂಡ ಹಾಕಿ, ಮರಣದಂಡನೆ ವಿಧಿಸಿದೆ.
ಜಿಲ್ಲಾ ಸರ್ಕಾರಿ ವಕೀಲ ಮನೋಜ್ ಕುಮಾರ್ ಪಾಂಡೆ ಮಾತನಾಡಿ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮತ್ತು ವಿಶೇಷ ನ್ಯಾಯಾಧೀಶ (ಪೋಕ್ಸೊ) ವಿನೋದ್ ಕುಮಾರ್ ಚೌರಾಸಿಯಾ ಅವರು ಸೋಮವಾರ ಗಗನ್ ಕುಮಾರ್‌ಗೆ ಐಪಿಸಿ ಸೆಕ್ಷನ್ 376 ಎ (ಅತ್ಯಾಚಾರದ ಪರಿಣಾಮವಾಗಿ ಸಾವು), 302 (ಕೊಲೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ ಎಂದು ಹೇಳಿದರು.
ಪ್ರಾಸಿಕ್ಯೂಷನ್ ಪ್ರಕರಣದ ಪ್ರಕಾರ, ಹುಡುಗಿಯ ತಾಯಿ ಜೂನ್ 12, 2020 ರಂದು ತನ್ನ ಅಣ್ಣನ ಅತ್ತೆಯ ಮನೆಗೆ ಹೋಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದಾಗ, ತನ್ನ ಮೂರು ವರ್ಷದ ಮಗಳು ಕಾಣೆಯಾಗಿದ್ದಾಳೆ ಎಂದು ಪಾಂಡೆ ಹೇಳಿದರು.
ವಿಚಾರಿಸಿದಾಗ, ಮಗುವಿನ ಅಜ್ಜಿ, ಸಂಜೆ 7.30 ರ ಸುಮಾರಿಗೆ ಕುಮಾರ್ ಹುಡುಗಿಯನ್ನು ತಿಂಡಿ ಖರೀದಿಸುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾಗಿ ತಿಳಿಸಿದ್ದಾಳೆ ಎಂದು ಅವರು ಹೇಳಿದರು. ಮಗು ಹಿಂತಿರುಗದಿದ್ದಾಗ, ಕುಟುಂಬ ಸದಸ್ಯರು ಹುಡುಕಾಟ ನಡೆಸಿದಾಗ ಆರೋಪಿಯ ಮನೆಯ ಬಳಿ ಆಕೆಯ ಶವ ಪತ್ತೆಯಾಗಿದೆ.
ಅಪರಾಧದ ಗಂಭೀರತೆಯನ್ನು ಗಮನಿಸಿದ ನ್ಯಾಯಾಲಯವು ಕುಮಾರ್‌ಗೆ ಮರಣದಂಡನೆ ವಿಧಿಸಿ 25,000 ರೂ. ದಂಡವನ್ನು ಪಾವತಿಸಲು ನಿರ್ದೇಶಿಸಿದೆ ಎಂದು ಪಾಂಡೆ ಹೇಳಿದರು.













