ಇವರು ಯಾರು ಬಲ್ಲೀರಾ?
(ಚಿತ್ರ ಕೃಪೆ: ಕಾವ್ಯ ಶೈವ ಇನ್ಸ್ಟಾಗ್ರಾಮ್)
ಗಿಲ್ಲಿ ನಟ ಅದೆಷ್ಟು ಸಲ ಲವ್ ಯು ಹೇಳಿದ್ದಾರೋ ಏನೋ? ಆದರೆ, ಅದೆಲ್ಲ ಏನೂ ಇಲ್ಲ ಅಂತ ಕಾವ್ಯ ಹೇಳಿರೋದೇ ಹೆಚ್ಚು. ಗಿಲ್ಲಿ ನಟ ನಾಯಕನಾಗಿರೋ ಪಳಾರ್ ಸೆಟ್ಟೇರಿದ್ದು ಆಗಿದೆ.
ಪಳಾರ್ ಚಿತ್ರದ ನಾಯಕಿ ಯಾರು ಅನ್ನೋದು ಮೊನ್ನೆಯಿಂದಲೇ ಇರೋ ಪ್ರಶ್ನೆ ಆಗಿದೆ. ಚಿತ್ರದ ಮುಹೂರ್ತ ಆದ ದಿನವೂ ಇದನ್ನೆ ಪತ್ರಕರ್ತರು ಕೇಳಿದರು.
ಆದರೆ, ಅದನ್ನ ಹೇಳ್ತೀವಿ ಅಂತಲೇ ಗಿಲ್ಲಿ ನಟನೂ ಹೇಳಿದ್ದಾರೆ. ಚಿತ್ರದ ನಿರ್ದೇಶಕ ಚಂದ್ರ ಮೋಹನ್ ಕೂಡ ಹೇಳಿದ್ದಾರೆ. ಆದರೆ, ಈ ವಿಚಾರವನ್ನ ಗುಟ್ಟಾಗಿಯೇ ಇಟ್ಟಿರೋ ಚಿತ್ರ ತಂಡದ ಸೀಕ್ರೆಟ್ ಅನ್ನ ಕಾವ್ಯ ಅವರೇ ರಿವೀಲ್ ಮಾಡಿದಂತೆ ಇದೆ ನೋಡಿ.
ಕಾವ್ಯ ಶೈವ ಈಗೊಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಅಲ್ಲಿರೋ ಫೋಟೋ ಗಮನಿಸಿದರೆ ಗೊತ್ತೇ ಆಗುತ್ತದೆ. ಪಳಾರ್ ನಾಯಕಿ ಬೇರೆ ಯಾರೋ ಅಲ್ಲ. ಅದು ಕಾವ್ಯ ಶೈವ ಅಂತಲೇ ತಿಳಿಯುತ್ತದೆ.
ಬರೆದಿಟ್ಟುಕೊಳ್ಳಿ ಇದು ಕಾವ್ಯಾನೇ
(ಚಿತ್ರ ಕೃಪೆ: ಕಾವ್ಯ ಶೈವ ಇನ್ಸ್ಟಾಗ್ರಾಮ್)
ಆದರೆ, ಇಲ್ಲಿರೋ ಫೋಟೋದಲ್ಲಿ ಮುಖವನ್ನ ತೋರಿಸಿಲ್ಲ. ಬದಲಾಗಿ ಹಿಂದಿನಿಂದ ತೆಗೆದ ಫೋಟೋವನ್ನೆ ಇಲ್ಲಿ ಬಳಕೆ ಮಾಡಲಾಗಿದೆ. ಆದಷ್ಟು ಬೇಗ ನಾಯಕಿ ಯಾರು ಅಂತ ಹೇಳ್ತೀವಿ ಅನ್ನೋದನ್ನು ಇಲ್ಲಿ ಬರೆಯಲಾಗಿದೆ.
ಆದರೆ, ಕಾವ್ಯ ಅವರ ಈ ಪೋಸ್ಟ್ಗೆ ಬಂದ ಕಾಂಪ್ಲಿಮೆಂಟ್ಸ್ ಕೂಡ ಗಮನ ಸೆಳೆಯುತ್ತವೆ. ಕಾವ್ಯ ಶೈವ ಫಿಕ್ಸ್ ಬರೆದಿಟ್ಟಿಕೊಳ್ಳಿ ಅಂತ ಯಾರೋ ಕಾಮೆಂಟ್ ಬಾಕ್ಸ್ ಅಲ್ಲಿ ಬರೆದಿದ್ದಾರೆ.
ಆದರೆ ಈ ವಿಚಾರವಾಗಿ ಅಧಿಕೃತ ಮಾಹಿತಿ ಹೊರಗೆ ಬರಬೇಕಿದೆ. ಅದು ಆದಷ್ಟು ಬೇಗ ಆಗುತ್ತದೆ ಅನ್ನುವ ಮಾಹಿತಿನೂ ಇದೆ. ಯಾವಾಗ ಅನ್ನೋ ಪ್ರಶ್ನೇನು ಇದೆ.
ಕಾರಣ, ಈಗ ಕಾವ್ಯ ಹಂಚಿಕೊಂಡ ಪೋಸ್ಟರ್ ಅಲ್ಲಿ ನಾಯಕಿ ರಿವೀಲ್ ಮಾಹಿತಿ ಇಲ್ವೇ ಇಲ್ಲ. ಪಳಾರ್ ಹೀರೋಯಿನ್ ಲೋಡಿಂಗ್..ಕಮಿಂಗ್ ಸೂನ್ ಅಂತಲೇ ಬರೆಯಾಗಿದೆ.
ಇನ್ನುಳಿದಂತೆ ಈ ಚಿತ್ರದ ಶೂಟಿಂಗ್ ಶುರು ಆಗಿದೆ. ಮೊನ್ನೆಯಿಂದಲೇ ಚಿತ್ರೀಕರಣ ಆಗುತ್ತಿದೆ. ಮಾತಿನ ಭಾಗದ ಶೂಟಿಂಗ್ ಅನ್ನೇ ಮಾಡ್ತಿದ್ದಾರೆ ಅಂತ ಹೇಳಬಹುದ. ಹಾಗೆ ಇದು ಪಕ್ಕಾ ಕಾಮಿಡಿ ಸಿನಿಮಾನೇ ಆಗಿದೆ. ಗಿಲ್ಲಿ ನಟನಿಗೆ ಸೂಕ್ತ ಕಂಟೆಂಟ್ ಅಂತಲೂ ಸ್ವತಃ ಗಿಲ್ಲಿ ನಟ ಮುಹೂರ್ತದ ದಿನ ಹೇಳಿದ್ದಾರೆ ಅಂತ ಹೇಳಬಹುದು.












