GT vs CSK,IPL 2026: ಹೀನಾಯ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಸಿಎಸ್​ಕೆ! 89 ರನ್​ಗಳ ಜಯ ಸಾಧಿಸಿದ ಜಿಟಿ 2ನೇ ಸ್ಥಾನ ಭದ್ರ | ಕ್ರೀಡಾ ಸುದ್ದಿ | ACTPnews

ಸಿಎಸ್​ಕೆ vs ಜಿಟಿ


Last Updated:

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ 2026ರ 66ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ 89 ರನ್​​​​​​​​​​​ಗಳ ಬೃಹತ್ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ತನ್ನ 2ನೇ ಸ್ಥಾನವನ್ನ ಮತ್ತಷ್ಟು ಭದ್ರಗೊಳಿಸಿಕೊಂಡಿತು.

ಸಿಎಸ್​ಕೆ vs ಜಿಟಿ
ಸಿಎಸ್​ಕೆ vs ಜಿಟಿ

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ 2026ರ 66ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ 89 ರನ್​​​​​​​​​​​ಗಳ ಬೃಹತ್ ಜಯ ಸಾಧಿಸಿದೆ. ಇದು ಉಭಯ ತಂಡಗಳ ನಡುವಿನ ಕೊನೆಯ ಲೀಗ್ ಪಂದ್ಯವಾಗಿತ್ತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ತವರಿನ ಮೈದಾನದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 229 ರನ್​ಗಳಿಸಿತ್ತು. 230 ರನ್​ಗಳ ಗುರಿ ಬೆನ್ನಟ್ಟಿದ ಸಿಎಸ್​ಕೆ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿ  13.4 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 140 ರನ್​ಗಳಿಗೆ ಆಲೌಟ್ ಆಗುವ ಮೂಲಕ 89 ರನ್​ಗಳ ಹೀನಾಯ ಸೋಲು ಕಂಡಿತು. ಸಿಎಸ್​ಕೆ ಈ ಸೋಲಿನೊಂದಿಗೆ ಟೂರ್ನಿಯಿಂದ 3ನೇ ತಂಡವಾಗಿ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು. ಇತ್ತ ಜಿಟಿ ಬೃಹತ್ ಜಯದೊಂದಿಗೆ ತನ್ನ 2ನೇ ಸ್ಥಾನವನ್ನ ಮತ್ತಷ್ಟು ಬಲಿಷ್ಠಗೊಳಿಸಿಕೊಂಡಿತು.

ಸಿಎಸ್​ಕೆ ಕಳಪೆ ಆರಂಭ 

230 ರನ್ಗಳ ಬೃಹತ್​ ಗುರಿಯನ್ನ ಬೆನ್ನಟ್ಟಿದ ಸಿಎಸ್​ಕೆ ಕಳಪೆ ಆರಂಭ ಪಡೆಯಿತು.  ಪವರ್​ ಪ್ಲೇನಲ್ಲೇ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಸಂಜು ಸ್ಯಾಮನ್ಸ್ ಸಿರಾಜ್​ ಬೌಲಿಂಗ್​ನಲ್ಲಿ ಬಟ್ಲರ್​ಗೆ ಕ್ಯಾಚ್ ನೀಡಿ​​ ಗೋಲ್ಡನ್ ಡಕ್ ಆದರು.  ನಾಯಕ ರುತುರಾಜ್ ಗಾಯಕ್ವಾಡ್ 7 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್​ಗಳ ಸಹಿತ 16 ರನ್​ಗಳಿಸಿ ಸಿರಾಜ್​ ಬೌಲಿಂಗ್​​ನಲ್ಲಿ ಬೌಲ್ಡ್ ಆದರು. ಉರ್ವಿಲ್​​ ಪಟೇಲ್ 2 ಎಸೆತಗಳಲ್ಲಿ ಡಕ್ ಆದರು.

ಆರಂಭಿಕನಾಗಿ  ಬಡ್ತಿ ಪಡೆದು ಬಂದಿದ್ದ ಮ್ಯಾಥ್ಯೂ ಶಾರ್ಟ್ 14 ಎಸೆತಗಳಲ್ಲಿ 24 ರನ್​​ಗಳಿಸಿ ರಬಾಡ ಬೌಲಿಂಗ್​ನಲ್ಲಿ 16 ರನ್​ಗಳಿಸಿ ಔಟ್ ಆದರು.   5.1 ಓವರ್​​ಗಳಲ್ಲಿ ಸಿಎಸ್​ಕೆ 51ಕ್ಕೆ 4 ವಿಕೆಟ್ ಕಳೆದಿಕೊಂಡಿತು. ನಂತರ 7ನೇ ಓವರ್​ನಲ್ಲಿ ಕಾರ್ತಿಕ್ ಶರ್ಮಾ ರನ್​ಔಟ್ ಆದರು.  ಕಾರ್ತಿಕ್ ಶರ್ಮಾ 15 ಎಸೆತಗಳಲ್ಲಿ  19 ರನ್​ಗಳಿಸಿ ರನ್​ಔಟ್ ಆದರು.

6ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ದುಬೆ ಹಾಗೂ  ಬ್ರೆವಿಸ್​ 21 ಎಸೆತಗಳಲ್ಲಿ  53 ರನ್​ಗಳ ಜೊತೆಯಾಟ ನೀಡಿದರು. ದುಬೆ ಅಬ್ಬರದ ಬ್ಯಾಟಿಂಗ್ ಮಾಡಿ 17 ಎಸೆತಗಳಲ್ಲಿ ತಲಾ 4 ಬೌಂಡರಿ, 4 ಸಿಕ್ಸರ್​​ಗಳ  ಸಹಿತ 47 ರನ್​ಗಳಿಸಿದರು. ದುಬೆ ವಿಕೆಟ್ ಬಳಿಕ ಸಿಎಸ್​ಕೆ ದಿಢೀರ್ ಕುಸಿತ ಕಂಡಿತು. ಕಾಂಬೋಜ್  8 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್​ಗಳ ಸಹಿತ 19 ರನ್, ಡೆವಾಲ್ಡ್ ಬ್ರೆವಿಸ್  ರನ್​ಗಳಿಸಲು ಪರದಾಡಿ  10 ಎಸೆತಗಳಲ್ಲಿ ಕೇವಲ 8 ರನ್​ಗಳಿಸಿ ರಶೀದ್ ಖಾನ್​ಗೆ ವಿಕೆಟ್ ಒಪ್ಪಿಸಿದರು.

ನೂರ್ ಅಹ್ಮದ್ 1 ಹಾಗೂ  ಸ್ಪೆನ್ಸರ್ ಜಾನ್ಸನ್ ಖಾತೆ ತೆರೆಯದೇ ರಬಾಡ ಬೌಲಿಂಗ್​​ನಲ್ಲಿ ವಿಕೆಟ್ ಒಪ್ಪಿಸಿದರು. ಜಿಟಿ ಬೌಲರ್​ಗಳ ದಾಳಿಗೆ ಸಿಲುಕಿದ  ಸಿಎಸ್​ಕೆ ಕೇವಲ 13.4 ಓವರ್​ಗಳಲ್ಲೇ 140 ರನ್ಗಳಿಗೆ ಆಲೌಟ್ ಆಗಿ 89 ರನ್​ಗಳ ಸೋಲು ಕಂಡಿತು. ಅಲ್ಲದೆ ಟೂರ್ನಿಯಿಂದ 3ನೇ ಅಧಿಕೃತ ತಂಡವಾಗಿ ಹೊರಬಿದ್ದಿತು.

ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಸಿರಾಜ್ 26ಕ್ಕೆ3, ಕಗಿಸೋ ರಬಾಡ 32ಕ್ಕೆ3 ಹಾಗೂ ರಶೀದ್ ಖಾನ್ 18ಕ್ಕೆ3 ವಿಕೆಟ್ ಪಡೆದು ಬೃಹತ್ ಜಯಕ್ಕೆ ಕಾರಣರಾದರು.

ಟೈಟನ್ಸ್ ಇನ್ನಿಂಗ್ಸ್ ಹೈಲೈಟ್ಸ್

ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 12.2 ಓವರ್‌ಗಳಲ್ಲಿ 125 ರನ್‌ಗಳ ಜೊತೆಯಾಟ ನೀಡಿದರು. ಆರಂಭದಿಂದ ಅಬ್ಬರಿಸಿದ ಗಿಲ್ 37 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ಗಳ ಸಹಿತ 64 ರನ್‌ಗಳಿಸಿ ಸ್ಪೆನ್ಸರ್ ಜಾನ್ಸನ್​ ಬೌಲಿಂಗ್​ನಲ್ಲಿ ದುಬೆಗೆ ಕ್ಯಾಚ್ ನೀಡಿ ಔಟ್ ಆದರು.

ಅಬ್ಬರಿಸಿದ ಬಟ್ಲರ್

ನಂತರ ಬಂದ ಜೋಸ್ ಬಟ್ಲರ್​ 2ನೇ ವಿಕೆಟ್​​ಗೆ ಸಾಯಿ ಸುದರ್ಶನ್ ಜೊತೆಗೂಡಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಈ ಜೋಡಿ ಕೇವಲ 37 ಎಸೆತಗಳಲ್ಲಿ 82 ರನ್‌ಗಳಿಸಿತು. ಆರಂಭದಲ್ಲಿ ಪರದಾಡಿದ ಸುದರ್ಶನ್​ ನಂತರ ರಿದಮ್ ಕಂಡುಕೊಂಡು ಸ್ಫೋಟಕ ಬ್ಯಾಟಿಂಗ್ ಮಾಡಿದರು. ಒಟ್ಟಾರೆ 53 ಎಸೆತಗಳನ್ನಾಡಿದ ಅವರು 7 ಬೌಂಡರಿ, 4 ಸಿಕ್ಸರ್‌ಗಳ ಸಹಿತ 84 ರನ್‌ಗಳಿಸಿ ಕಾಂಬೋಜ್​​​ ಬೌಲಿಂಗ್​ನಲ್ಲಿ ಮ್ಯಾಥ್ಯೂ ಶಾರ್ಟ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಜೋಸ್ ಬಟ್ಲರ್​ 27 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ಗಳ ಸಹಿತ ಅಜೇಯ 57 ರನ್‌ಗಳಿಸಿ ಮಿಂಚಿದರು. ವಾಷಿಂಗ್ಟನ್ ಸುಂದರ್ 3 ಎಸೆತಗಳಲ್ಲಿ ಅಜೇಯ 7 ರನ್‌ಗಳಿಸಿದರು. ಸಿಎಸ್​​​​​​​ಕೆ ಪರ ಮುಕೇಶ್ ಚೌಧರಿ, ಅನ್ಶುಲ್ ಕಾಂಬೋಜ್ ಹಾಗೂ ಸ್ಪೆನ್ಸರ್ ಜಾನ್ಸನ್​ ತಲಾ 1 ವಿಕೆಟ್ ಪಡೆದರು.

ರನ್​​​​​​​​​ರೇಟ್ ಉತ್ತಮಗೊಳಿಸಿಕೊಂಡ ಗುಜರಾತ್

89 ರನ್​ಗಳ ಬೃಹತ್ ಜಯದೊಂದಿಗೆ ಗುಜರಾತ್ ಟೈಟನ್ಸ್​ 18 ಅಂಕ ಪಡೆಯಿತಲ್ಲದೆ, ತನ್ನ ನೆಟ್​ರನ್ ​ರೇಟ್​​ ಉತ್ತಮಗೊಳಿಸಿಕೊಂಡಿತು. ಈ ಪಂದ್ಯಕ್ಕೂ ಮುನ್ನ 0.400 ಇದ್ದ ನೆಟ್​ರನ್​ ರೇಟ್ ಈ ಪಂದ್ಯದ ಬಳಿಕ 0.695ಗೆ ಏರಿಕೆಯಾಗಿದೆ. ಈ ಮೂಲಕ ತನ್ನ 2ನೇ ಸ್ಥಾನವನ್ನ ಭದ್ರಪಡಿಸಿಕೊಂಡಿದೆ. ಸನ್​ರೈಸರ್ಸ್​​ಗೆ 18 ಅಂಕಗಳಿಸುವ ಅವಕಾಶ ಇದ್ದರೂ, ನೆಟ್​ರನ್​ ರೇಟ್​ ಹೆಚ್ಚಿಸಿಕೊಳ್ಳಲು ಆರ್​ಸಿಬಿ ವಿರುದ್ಧ 100ಕ್ಕೂ ಹೆಚ್ಚು ರನ್​ಗಳಿಂದ ಸೋಲಿಸಬೇಕು. ಆಗ ಮಾತ್ರ ಮೊದಲ ಅಥವಾ 2ನೇ ಸ್ಥಾನ ಪಡೆಯಲಿದೆ. ಸಣ್ಣ ಅಂತರದ ಗೆದ್ದರೂ 3ನೇ ಸ್ಥಾನದಲ್ಲೇ ಉಳಿಯಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed