Urfi Javed: ಹಿಂದೂ ಧರ್ಮಕ್ಕೆ ಮತಾಂತರವಾದ್ರಾ ಉರ್ಫಿ ಜಾವೇದ್? ಈ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ? | | ACTPnews

ಉರ್ಫಿ


Last Updated:

ಉರ್ಫಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಹಾಗೂ ತಮ್ಮ ಹೆಸರನ್ನು ರೀತಾ ಭಾರದ್ವಾಜ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಸ್ವತಃ ಉರ್ಫಿ ಜಾವೇದ್ ಸ್ಪಷ್ಟನೆ ನೀಡಿದ್ದಾರೆ.

ಉರ್ಫಿ
ಉರ್ಫಿ

ವಿಚಿತ್ರ ಉಡುಗೆಗಳು, ವಿಭಿನ್ನ ಫ್ಯಾಷನ್ ಹಾಗೂ ನೇರ ಮಾತುಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್ (Urfi Javed) ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ಉರ್ಫಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಹಾಗೂ ತಮ್ಮ ಹೆಸರನ್ನು ರೀತಾ ಭಾರದ್ವಾಜ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಸ್ವತಃ ಉರ್ಫಿ ಜಾವೇದ್ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋವೊಂದರಲ್ಲಿ, ಉರ್ಫಿ ಜಾವೇದ್ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಹಾಗೂ ತಮ್ಮ ಹೆಸರನ್ನು ರೀತಾ ಭಾರದ್ವಾಜ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

ಮೀತಾ ಚೌಧರಿ ಎಂಬ ಹೆಸರಿನ ಕಂಟೆಂಟ್ ಕ್ರಿಯೇಟರ್ ಹಂಚಿಕೊಂಡಿದ್ದ ವಿಡಿಯೋದಲ್ಲಿ, ಉರ್ಫಿ ಜಾವೇದ್ ಅವರ ಉಡುಗೆ ಶೈಲಿಯನ್ನು ಟೀಕಿಸುವ ಜೊತೆಗೆ ಧರ್ಮಾಂತರದ ಬಗ್ಗೆ ಕೂಡ ಹೇಳಿಕೆ ನೀಡಲಾಗಿತ್ತು. ಉರ್ಫಿ ತಮ್ಮ ಉಡುಗೆಗಳ ಕಾರಣದಿಂದಲೇ ಪ್ರಸಿದ್ಧರಾಗಿದ್ದಾರೆ ಎಂದು ಹೇಳಿದ ಅವರು, ನಟಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಮತ್ತು ಹೊಸ ಹೆಸರನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದರು.

ತಮ್ಮ ಪ್ರತಿಕ್ರಿಯೆಯಲ್ಲಿ ಉರ್ಫಿ ಮತ್ತೊಂದು ಮಹತ್ವದ ವಿಷಯವನ್ನೂ ಉಲ್ಲೇಖಿಸಿದ್ದಾರೆ. ನಾನು ಯಾವುದೇ ಧರ್ಮವನ್ನು ನಂಬುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಧರ್ಮ ಬದಲಾವಣೆ ಕುರಿತಾಗಿ ಹರಿದಾಡುತ್ತಿರುವ ಎಲ್ಲಾ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಉರ್ಫಿ ಸ್ಪಷ್ಟಪಡಿಸಿದ್ದಾರೆ.

ಮುಂದುವರಿದು ಮಾತನಾಡಿದ ಉರ್ಫಿ, ನಾನು ಕೇವಲ ಉಡುಗೆಗಳ ವಿಚಾರದಲ್ಲಿ ಮಾತ್ರವಲ್ಲ, ನನ್ನ ಮಾತುಗಳಲ್ಲೂ ನೇರವಾಗಿರುತ್ತೇನೆ. ಇಂದು ವಾದ ಮಾಡುವ ಮನಸ್ಥಿತಿಯಲ್ಲಿ ಇಲ್ಲ. ನಾನು ಎಷ್ಟು ಕಾರ್ಯಕ್ರಮಗಳಲ್ಲಿ ನಟಿಸಿದ್ದೇನೆ ಎಂದು ಮೊದಲು ಗೂಗಲ್‌ನಲ್ಲಿ ಹುಡುಕಿ ನೋಡಿ. ನನ್ನ ಬಗ್ಗೆ ಟೀಕೆ ಮಾಡಬೇಕಿದ್ದರೆ ಮಾಡಿ, ಆದರೆ ಸುಳ್ಳು ಸುದ್ದಿಗಳನ್ನು ಮಾತ್ರ ಹರಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ಉರ್ಫಿ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡಾ ಇಂಡಿಯಾ ಟುಡೇ ಸಂದರ್ಶನಲ್ಲಿ ಸಂದರ್ಶನದಲ್ಲಿ, ಉರ್ಫಿ ತಮ್ಮ ಜೀವನಶೈಲಿ ಮತ್ತು ಫ್ಯಾಷನ್ ಆಯ್ಕೆಗಳ ಬಗ್ಗೆ ಮುಸ್ಲಿಂ ಸಮುದಾಯದ ಸದಸ್ಯರಿಂದ ಬಂದ ಟೀಕೆಗಳ ಬಗ್ಗೆ ಮಾತನಾಡಿದ್ದರು.

ನಾನು ಮುಸ್ಲಿಂ ಹುಡುಗಿ. ನನಗೆ ಬರುವ ಹೆಚ್ಚಿನ ಕೆಟ್ಟ ಕಾಮೆಂಟ್‌ಗಳು ಮುಸ್ಲಿಂ ಜನರಿಂದ ಬಂದಿವೆ. ನಾನು ಇಸ್ಲಾಂನ ಮಾನ ಹಾಳು ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ . ಮುಸ್ಲಿಂ ಪುರುಷರು ತಮ್ಮ ಮಹಿಳೆಯರು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕೆಂದು ಬಯಸುತ್ತಾರೆ ಎಂಬ ಕಾರಣಕ್ಕಾಗಿ ಅವರು ನನ್ನನ್ನು ದ್ವೇಷಿಸುತ್ತಾರೆ. ಸಮುದಾಯದ ಎಲ್ಲಾ ಮಹಿಳೆಯರನ್ನು ನಿಯಂತ್ರಿಸಲು ಅವರು ಬಯಸುತ್ತಾರೆ. ಈ ಕಾರಣದಿಂದಾಗಿ ನಾನು ಇಸ್ಲಾಂ ಅನ್ನು ನಂಬುವುದಿಲ್ಲ ಎಂದು ಉರ್ಫಿ ಹೇಳಿಕೊಂಡಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed