IRE vs IND: ಭಾರತ – ಐರ್ಲೆಂಡ್ ಸರಣಿ ಬೆನ್ನಲ್ಲೆ ರಾಜೀನಾಮೆ ಘೋಷಿಸಿದ ಹೆಡ್ ಕೋಚ್! ಹೊಸ ಕೋಚ್ ಯಾರು ಗೊತ್ತಾ? | | ACTPnews

ಐರ್ಲೆಂಡ್ vs ಭಾರತ ಟಿ20 ಸರಣಿ


Last Updated:

ಭಾರತ – ಐರ್ಲೆಂಡ್ ಸರಣಿ ಬೆನ್ನಲ್ಲೆ ಅಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಹೆಡ್ ಕೋಚ್ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಘೋಷಣೆ ಮಾಡಿದ್ದಾರೆ.

ಐರ್ಲೆಂಡ್ vs ಭಾರತ ಟಿ20 ಸರಣಿ
ಐರ್ಲೆಂಡ್ vs ಭಾರತ ಟಿ20 ಸರಣಿ

ಐರಿಶ್ ಕ್ರಿಕೆಟ್ (Irish Cricket) ತಂಡವು ಭಾರತವನ್ನು (Team India) ಮೊದಲ ಬಾರಿಗೆ ಸರಣಿಯಲ್ಲಿ ಸೋಲಿಸಿ ಇತಿಹಾಸ ಬರೆದಿದೆ. ಬೆಲ್‌ಫಾಸ್ಟ್‌ನಲ್ಲಿ ನಡೆದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದ ಐತಿಹಾಸಿಕ ಗೆಲುವಿನೊಂದಿಗೆ, ಭಾರತವನ್ನು ವೈಟ್​ವಾಶ್​ ಮಾಡಿದೆ. ಬಲಿಷ್ಠ ತಂಡದ ವಿರುದ್ಧ ಗೆದ್ದು ಬೀಗಿರುವ ಐರ್ಲೆಂಡ್​​ (Ireland) ತಂಡದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಐರ್ಲೆಂಡ್​​ ಕ್ರಿಕೆಟ್​ ತಂಡ ಭಾರತದ ವಿರುದ್ಧ ಗೆಲುವು ಸಾಧಿಸಿದ ಬೆನ್ನಲ್ಲೇ ಐರ್ಲೆಂಡ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹೆನ್ರಿಕ್ ಮಲನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಐರ್ಲೆಂಡ್​ ತಂಡದ ಹೆಡ್​ ಕೋಚ್​ ಆಗಿದ್ದ ಮಲನ್​​. ತಂಡದ ಐತಿಹಾಸಿಕ ಗೆಲುವಿನ ನಂತರ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಹೆನ್ರಿಕ್ ಮಲನ್ ಪಯಣ

2022 ರಲ್ಲಿ ಹೆನ್ರಿಕ್ ಮಲನ್ ಅವರು ಐರ್ಲೆಂಡ್​ ತಂಡದ ಹೆಡ್​ ಕೋಚ್​​​ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಮಲನ್​ ನೇತೃತ್ವದಲ್ಲಿ ಐರಿಶ್ ಕ್ರಿಕೆಟ್ ಯಶಸ್ಸಿನ ಹೊಸ ಎತ್ತರವನ್ನು ತಲುಪಿತು. ಅವರ ಅವಧಿಯಲ್ಲಿ, ತಂಡವು ಸತತ ಮೂರು ಟಿ20 ವಿಶ್ವಕಪ್‌ಗಳಿಗೆ ಅರ್ಹತೆ ಪಡೆಯಿತು. ಇದಷ್ಟೇ ಅಲ್ಲದೇ ಐರಿಶ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಮೂರು ಟೆಸ್ಟ್ ಪಂದ್ಯಗಳ ವಿಜಯಗಳ ಶಿಲ್ಪಿಯಾಗಿದ್ದರು.
‘ಇದು ತುಂಬಾ ವಿಶೇಷ ಪ್ರಯಾಣವಾಗಿತ್ತು’

ತಮ್ಮ ಹೆಡ್​​ ಕೋಚ್​ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಲನ್ ಭಾವುಕರಾಗಿ ಮಾತನಾಡಿದ್ದಾರೆ. ‘ಈ ಆಟಗಾರರು, ಸಿಬ್ಬಂದಿ ಮತ್ತು ಐರಿಶ್ ಕ್ರಿಕೆಟ್‌ನೊಂದಿಗೆ ಕೆಲಸ ಮಾಡಿರೋದು ಒಳ್ಳೆಯ ಅನುಭವ.  ಮೆಲ್ಬೋರ್ನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ನಮ್ಮ ಐತಿಹಾಸಿಕ T20 ವಿಶ್ವಕಪ್ ಗೆಲುವು, ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ನಮ್ಮ ಮೊದಲ ಟೆಸ್ಟ್ ಗೆಲುವು, ಬೆಲ್‌ಫಾಸ್ಟ್‌ನಲ್ಲಿ ಜಿಂಬಾಬ್ವೆ ವಿರುದ್ಧದ ನಮ್ಮ ಮೊದಲ ಟೆಸ್ಟ್ ಗೆಲುವು ಮತ್ತು ಭಾರತ ವಿರುದ್ಧದ T20 ಸರಣಿ ಗೆಲುವುಗಳನ್ನು ನಾವು ಹೆಮ್ಮೆಯಿಂದ ನೆನಪಿಸಿಕೊಳ್ಳಬಹುದು. ಇದಲ್ಲದೆ, ನಾವು ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದಂತಹ ವಿಶ್ವದ ಅಗ್ರ ತಂಡಗಳನ್ನು ಸೋಲಿಸಿದ್ದೇವೆ. ನಮ್ಮ ದೃಷ್ಟಿಕೋನವನ್ನು ನಂಬಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇದು ತುಂಬಾ ವಿಶೇಷವಾದ ಪ್ರಯಾಣವಾಗಿತ್ತು ಎಂದು ಮಲನ್​​ ಹೇಳಿದ್ದಾರೆ.

ಹೊಸ ಹೆಡ್​ ಕೋಚ್​ ನೇಮಕ?

ಐರ್ಲೆಂಡ್ ಪುರುಷರ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಆಗಿ ಗ್ಯಾರಿ ವಿಲ್ಸನ್ ಅವರು ನೇಮಕಗೊಂಡಿದ್ದಾರೆ. 40 ವರ್ಷದ ವಿಲ್ಸನ್ 2020 ರಲ್ಲಿ ನಿವೃತ್ತರಾಗಿದ್ದರು. ತಮ್ಮ 15 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಐರ್ಲೆಂಡ್ ಪರ 292 ಪಂದ್ಯಗಳನ್ನು ಆಡಿದ್ದ ವಿಲ್ಸನ್​​  ಮುಖ್ಯ ಕೋಚ್​​ ಹುದ್ದೆಗೇರಿದ್ದಾರೆ. ತಮ್ಮ ಹೊಸ ಪಾತ್ರದ ಕುರಿತು ಮಾತನಾಡಿರುವ ವಿಲ್ಸನ್, ‘ಒಬ್ಬ ಆಟಗಾರನಾಗಿ ಐರ್ಲೆಂಡ್ ಅನ್ನು ಪ್ರತಿನಿಧಿಸಿದ್ದಕ್ಕೆ ನನಗೆ ಯಾವಾಗಲೂ ತುಂಬಾ ಹೆಮ್ಮೆಯಾಗುತ್ತದೆ, ಆದರೆ ಈಗ ಹೆಡ್​ ಕೋಚ್​ ಪಾತ್ರವನ್ನು ವಹಿಸಿಕೊಳ್ಳುವುದು ನನಗೆ ಸಿಕ್ಕ ದೊಡ್ಡ ಗೌರವ ಎಂದು ಹೇಳಿದರು.

ಭಾರತಕ್ಕೆ ವೈಟ್​ವಾಶ್​ ಮುಖಭಂಗ

ಈ ಸರಣಿಗೂ ಮೊದಲು, ಟೀಮ್ ಇಂಡಿಯಾ ಯಾವುದೇ ಸ್ವರೂಪದಲ್ಲಿ ಸರಣಿ ಬಿಡಿ, ಐರ್ಲೆಂಡ್ ವಿರುದ್ಧ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ. ಆದರೆ 48 ಗಂಟೆಗಳ ಒಳಗೆ, ಭಾರತ ಸತತ ಎರಡು ಪಂದ್ಯಗಳನ್ನು ಸೋತು ತನ್ನ ಟಿ20 ಚರಿತ್ರೆಯಲ್ಲೇ 3ನೇ ಬಾರಿ ವೈಟ್ ವಾಷ್​ ಮುಖಭಂಗಕ್ಕೆ ಒಳಗಾಗಿದೆ. ಐರ್ಲೆಂಡ್ ವಿರುದ್ಧದ 155 ರನ್​ಗಳ ಸವಾಲನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡು ದೊಡ್ಡ ಹಿನ್ನಡೆ ಅನುಭವಿಸಿತು. ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇಬ್ಬರೂ ಗೋಲ್ಡನ್ ಡಕ್‌ಗೆ ಔಟಾದರು. ಜೇ ಮುಂಡಾಡ ಇವರಿಬ್ಬರ ವಿಕೆಟ್ ಪಡೆದರು. ಕೇವಲ 1 ರನ್​​ಗೆ 2 ವಿಕೆಟ್ ಕಳೆದುಕೊಂಡಿದ್ದು ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed