Tirumala News: ಟಿಟಿಡಿ ಮಹತ್ವದ ನಿರ್ಧಾರ, ಇನ್ಮೇಲೆ ತಿರುಮಲದಲ್ಲಿ ಈ ತಪ್ಪು ಮಾಡಿದರೆ ಕೂಡಲೇ ಸಿಕ್ಕಿ ಬೀಳುವುದು ಗ್ಯಾರಂಟಿ! | ಜ್ಯೋತಿಷ್ಯ | ACTPnews

News18


Last Updated:

ತಿರುಮಲ ತಿರುಪತಿಗೆ ಆಗಮಿಸುವ ಭಕ್ತರಿಗೆ ಟಿಟಿಡಿ ಗುಡ್ ನ್ಯೂಸ್ ನೀಡಿದೆ. ತಿರುಮಲದಲ್ಲಿ ಟಿಟಿಡಿ ಅತ್ಯಾಧುನಿಕ ಫುಡ್ ಅಂಡ್ ವಾಟರ್ ಅನಾಲಿಸಿಸ್ ಲ್ಯಾಬ್ ಆರಂಭಿಸಿ, ಭಕ್ತರಿಗೆ ನೀಡುವ ಉಚಿತ ಸೇವೆಗಳ ಬಗ್ಗೆ ಕಣ್ಣೀಡಲು ಶುರು ಮಾಡಿದೆ.

News18
News18

ತಿರುಮಲ ಶ್ರೀವಾರಿ ದರ್ಶನಕ್ಕೆ (Tirumala Tirupati Devasthanams) ಪ್ರತಿದಿನ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಆರೋಗ್ಯ ಕಾಪಾಡಲು ಟಿಟಿಡಿ (TTD) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇದರ ಭಾಗವಾಗಿ ಭಕ್ತರಿಗೆ (Devotees) ನೀಡುವ ಅನ್ನಪ್ರಸಾದ, ಕುಡಿಯುವ ನೀರು ಗುಣಮಟ್ಟ ಕಾಪಾಡಲು ಆಯಾ ಕ್ಷಣದಲ್ಲೇ ಅಗತ್ಯ ಪರೀಕ್ಷೆಗಳನ್ನು ಮಾಡಲು ತಿರುಮಲದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಫುಡ್ ಅಂಡ್ ವಾಟರ್ ಅನಾಲಿಸಿಸ್ ಲ್ಯಾಬ್ (Modern Food and Water Analysis Laboratory) ಅನ್ನು ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸಿದೆ. ಆಧುನಿಕ ಸೇವೆಗಳನ್ನು ನೀಡಿರುವ ಪ್ರಯೋಗಾಲಯವನ್ನು ಟಿಟಿಡಿ ಹೆಚ್ಚುವರಿ ಇವೋ ಶ್ರೀ ಸಿ ಹೆಚ್​ ವೆಂಕಯ್ಯ ಚೌದರಿ ಅವರು ಪರಿಶೀಲನೆ ನಡೆಸಿದ್ದಾರೆ. ಲ್ಯಾಬ್ ಯಾವ ರೀತಿ ಕೆಲಸ ಮಾಡುತ್ತೆ ಅಂತ ಸ್ವತಃ ಮಾಹಿತಿ ಪಡೆದುಕೊಂಡು, ಅಲ್ಲಿ ನೀಡಿದ ಮೊದಲ ಅನಾಲಿಸಿಸ್ ರಿಪೋರ್ಟ್ ಕೂಡ ಪರಿಶೀಲನೆ ನಡೆಸಿದ್ದರು.

ಈ ಪ್ರಯೋಗಾಲಯವನ್ನು ಏಕೆ ಆರಂಭ ಮಾಡಬೇಕಾಯ್ತು ಅಂತ ಇದೇ ಸಂದರ್ಭದಲ್ಲಿ ಇವೋ ಅವರು ತಿಳಿಸಿದ್ದಾರೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಅವರು ಈ ವರ್ಷ ಮಾರ್ಚ್ 21 ರಂದು ಅತ್ಯಾಧುನಿಕ ಲ್ಯಾಬ್ ತೆರೆಯುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದರು. ಆ ಬಳಿಕ ಕೇವಲ ಎರಡೂವರೆ ತಿಂಗಳಿನಲ್ಲಿ ಎಲ್ಲಾ ರೀತಿಯ ಪರೀಕ್ಷೆಗಳನ್ನ ನಡೆಸಲು ಅನುಕೂಲ ಆಗಿರುವಂತಹ ಅತ್ಯಾಧುನಿಕ ಕೇಂದ್ರವನ್ನು ಸ್ಥಾಪಿಸುವ ಕೆಲಸ ಮಾಡಿದ್ದೇವೆ. ಇಷ್ಟು ಬೇಗ ಪರೀಕ್ಷೆಗಳನ್ನು ನಡೆಸಿ ಮೊದಲ ವರದಿಯನ್ನು ನೀಡಿರುವುದು ಟಿಟಿಡಿ ಸಿಬ್ಬಂದಿ ಬದ್ಧತೆಗೆ ಉದಾಹರಣೆಯಾಗಿದೆ. ಭಕ್ತರಿಗೆ ಉತ್ತಮ ಸೇವೆಗಳನ್ನು ನೀಡುವ ಗುರಿಯೊಂದಿಗೆ ಅಧಿಕಾರಿಗಳು ರಾತ್ರಿ-ಹಗಲು ಶ್ರಮವಹಿಸಿ ಈ ಪ್ರಯೋಗಾಲಯ ಕೆಲಸವನ್ನು ಪೂರ್ಣಗೊಳಿಸಿದ್ದಾರೆ ಎಂದು ವಿವರಿಸಿದ್ದಾರೆ.

ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಎಫ್​​ಎಸ್​ಎಸ್​​ಎಐ ನಿಯಮ ಹಾಗೂ ಗುಣಮಟ್ಟಕ್ಕೆ ಅಗತ್ಯವಾಗಿರುವಂತೆ ಈ ಪ್ರಯೋಗಾಲಯವನ್ನು ತಿರುಮಲದಲ್ಲಿ ಸ್ಥಾಪನೆ ಮಾಡಲಾಗಿದೆ. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳುವುದಿಲ್ಲ. ಇಲ್ಲಿ 50ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲು ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅತ್ಯಾಧುನಿಕ ಸೂಕ್ಷ್ಮ ವೈರಸ್ ಗಳನ್ನು ಕೂಡ ಗುರುತಿಸುವಂತಹ ಗುಣಮಟ್ಟದ ವ್ಯವಸ್ಥೆ ರೂಪಿಸಲಾಗಿದೆ.

ತಿರುಮಲದಲ್ಲಿ ಮೈಕ್ರೋಬಯಾಲಜಿ ಲ್ಯಾಬ್ ಸ್ಥಾಪನೆ

ಪ್ರಯೋಗಾಲಯದಲ್ಲಿ ಸುಮಾರು 30 ಮಂದಿ ನಿಪುಣ ತಜ್ಞರು, ತಾಂತ್ರಿಕ ವಿಶ್ಲೇಷಕರು, ಅನುಭವಿ ಲ್ಯಾಬ್ ಟೆಕ್ನಿಷಿಯನ್ಸ್ ಗಳು ನಿರಂತರವಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಹಾರ ಪದಾರ್ಥಗಳ ಪೌಷ್ಟಿಕಾಂಶದ ಮೌಲ್ಯವನ್ನು ಹಾಗೂ ಯಾವುದೇ ಕಲಬೆರಕೆಯನ್ನು ನಿಖರವಾಗಿ ನಿರ್ಧರಿಸಲು ಅವರು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ.

ಭವಿಷ್ಯದಲ್ಲಿ ಈ ಲ್ಯಾಬ್ ಸೇವೆಗಳನ್ನು ಮತ್ತಷ್ಟು ವಿಸ್ತರಣೆ ಮಾಡಲು ಟಿಟಿಡಿ ಮಂಡಳಿ ಕ್ರಮಕೈಗೊಳ್ಳಲಿದೆ. ಹೆಚ್ಚಾಗುತ್ತಿರುವ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳ ವೇಗವನ್ನು ಹೆಚ್ಚಿಸಲು ಶೀಘ್ರವೇ ಹೆಚ್ಚುವರಿಯಾಗಿ 20 ಮಂದಿಯನ್ನು ಶಾಶ್ವತ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ. ಈ ಹೊಸ ನೇಮಕಗಳ ಮೂಲಕ ಪ್ರಯೋಗಾಲಯದ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತದೆ. ಭಕ್ತರಿಗೆ ನೀಡುವ ಪ್ರತಿಯೊಂದು ವಸ್ತುವಿನಲ್ಲೂ ಶೇಕಡಾ 100 ಗುಣಮಟ್ಟ ಇರುವಂತೆ ನೋಡಿಕೊಳ್ಳುವುದು ಇದರ ಮಹತ್ವದ ಉದ್ದೇಶವಾಗಿದೆ. ಸಿಬ್ಬಂದಿ ಕೊರತೆ ಇಲ್ಲದೆ, ದಿನದ 24 ಗಂಟೆಗಳ ಕಾಲ ಕೇಂದ್ರ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತಿರುಮಲದಲ್ಲಿ ಮೈಕ್ರೋಬಯಾಲಜಿ ಲ್ಯಾಬ್ ಸ್ಥಾಪನೆ

ಪ್ರತಿದಿನ ತಿರುಮಲದ ವಿವಿಧ ಪ್ರದೇಶಗಳಲ್ಲಿ ಭಕ್ತರಿಗೆ ನೀಡುವ ವಸ್ತುಗಳನ್ನು ಸಂಗ್ರಹಿಸಿ ಇಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಅನ್ನದಾನದ ಅಡುಗೆ ಕೋಣೆಗಳು, ವಿವಿಧ ಅನ್ನಪ್ರಸಾದ ಕೇಂದ್ರಗಳು, ಫುಡ್ ಕೌಂಟರ್ ಗಳು, ಸ್ಥಾನಿಕ ಹೋಟೆಲ್ ಗಳು, ಶ್ರೀವಾರಿ ಲಡ್ಡು ತಯಾರಿ ವಿಭಾಗ, ಮಾರ್ಕೆಟ್ ವಿಭಾಗದ ವಸ್ತುಗಳನ್ನು ಸೇರಿ ನಿತ್ಯ ಸುಮಾರು 40ಕ್ಕೂ ಹೆಚ್ಚು ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ. ಇಷ್ಟೇ ಅಲ್ಲದೆ, ಭಕ್ತರಿಗೆ ನೀಡುವ ನೀರು, ವಾಟರ್ ಲೈನ್ ನಿಂದ ಸುಮಾರು 20 ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಯಾವುದೇ ಸಣ್ಣ ಲೋಪ ಕಂಡು ಬಂದರೂ ಕೂಡಲೇ ಎಚ್ಚರಿಕೆ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports