Tamil Nadu Shocker: ಯೂಟ್ಯೂಬ್ ನೋಡಿ ತನಗೆ ತಾನೇ ಹೆರಿಗೆ ಮಾಡಿಕೊಂಡ ಮಹಿಳೆ ಸಾವು | Woman did her baby delivery by watching youtube video dies later | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಪ್ರಾತಿನಿಧಿಕ ಚಿತ್ರ


Last Updated:

Tamil Nadu Shocker: ಜನ ಗೊತ್ತಿದ್ದು ಮಾಡ್ತಾರೋ, ಗೊತ್ತಿಲ್ಲದೆ ಮಾಡ್ತಾರೋ, ಗೊತ್ತಿದ್ರೂ ಒಂದು ಕೈ ನೋಡೋಣ ಅಂತ ಮಾಡ್ತಾರೋ ಅಂತ ಪ್ರತಿಬಾರಿ ಅಚ್ಚರಿಯಾಗುತ್ತದೆ. ಈ ಘಟನೆ ನಿಮ್ಮನ್ನು ಬೆಚ್ಚಿ ಬೀಳಿಸುತ್ತೆ.

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಇಂಥಹ ಕೆಲವೊಂದು ಘಟನೆ ನೋಡಿದರೆ ಜನ ಗೊತ್ತಿದ್ದು ಮಾಡ್ತಾರೋ, ಗೊತ್ತಿಲ್ಲದೆ ಮಾಡ್ತಾರೋ, ಗೊತ್ತಿದ್ರೂ ಒಂದು ಕೈ ನೋಡೋಣ ಅಂತ ಮಾಡ್ತಾರೋ ಅಂತ ಪ್ರತಿಬಾರಿ ಅಚ್ಚರಿಯಾಗುತ್ತದೆ. ನಾಲ್ಕೈದು ಜನ ಗೈನಕಾಲಜಿಸ್ಟ್​ಗಳು, ಡಾಕ್ಟರ್ ಜೊತೆಗಿದ್ದರೇ ಈಗಿನ ಕಾಲಕ್ಕೆ ಆರೋಗ್ಯಕರವಾಗಿ ಒಂದು ಮಗುವಿಗೆ ಜನ್ಮ (Baby) ನೀಡುವುದು ದೊಡ್ಡ ಸವಾಲಿನ ಕೆಲಸ. ಹೀಗಿರುವಾಗ ಮೊಬೈಲ್​ನಲ್ಲಿ ಯೂಟ್ಯೂಬ್ ನೋಡಿ ಮಗುವಿಗೆ ಜನ್ಮ ನೀಡುತ್ತಾರಾ?

ತಿರುಪ್ಪೂರು ಜಿಲ್ಲೆಯ ಹಳ್ಳಿಯೊಂದರ 32 ವರ್ಷದ ಮಹಿಳೆಯೊಬ್ಬರು ಜೂನ್ 24 ರಂದು ತಮ್ಮ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ಪ್ರಸವಾನಂತರದ ತೀವ್ರ ರಕ್ತಸ್ರಾವ ನಿಲ್ಲದೆ ಸಾವನ್ನಪ್ಪಿದರು.

ಪತಿ ಹೆರಿಗೆಯ ಬಗ್ಗೆ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಉತ್ತುಕುಳಿ ತಾಲ್ಲೂಕಿನ ಪುಂಜೈತಲವೈಪಾಳ್ಯಂನ ಕೆ. ಶಶಿಕಲಾ ಅವರನ್ನು ತೀವ್ರ ಗಂಭೀರ ಸ್ಥಿತಿಯಲ್ಲಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಭಾನುವಾರ ಬೆಳಿಗ್ಗೆ ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 24 ರಂದು ಬೆಳಗಿನ ಜಾವ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಕೆಯ ಪತಿ ಕೋಲಂತಸಾಮಿ (35) ಮತ್ತು ಅತ್ತೆ ಹೆರಿಗೆಗೆ ಸಹಾಯ ಮಾಡಿದರು. ಯೂಟ್ಯೂಬ್‌ನಲ್ಲಿ ನೈಸರ್ಗಿಕ ಹೆರಿಗೆಯ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆರಿಗೆಯ ನಂತರ ಮಹಿಳೆಗೆ ಪ್ರಸವಾನಂತರದ ರಕ್ತಸ್ರಾವವಾಯಿತು. ಅದು ಕಡಿಮೆಯಾಗದೆ ಹೆಚ್ಚಾಗುತ್ತಲೇ ಹೋಗಿತ್ತು. ಅವರನ್ನು ಪೆರುಂಡುರೈನಲ್ಲಿರುವ ಸರ್ಕಾರಿ ಈರೋಡ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನಂತರ, ಜೂನ್ 25 ರಂದು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಕುನ್ನತ್ತೂರಿನ ಬ್ಲಾಕ್ ವೈದ್ಯಕೀಯ ಅಧಿಕಾರಿ ನೀಡಿದ ದೂರಿನ ಮೇರೆಗೆ, ಉತುಕುಳಿ ಪೊಲೀಸರು ಕೋಲಂತಸಾಮಿ ವಿರುದ್ಧ ಐಪಿಸಿ ಸೆಕ್ಷನ್ 105 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

“ಮೃತ ಮಹಿಳೆಯ ಕುಟುಂಬ ಸದಸ್ಯರು ಯಾವುದೇ ದೂರು ದಾಖಲಿಸಲು ಬಯಸಲಿಲ್ಲ. ದಂಪತಿ ಮನೆಯಲ್ಲಿ ನ್ಯಾಚುರಲ್ ಹೆರಿಗೆಗೆ ಯೋಜಿಸಿದ್ದರು ಎಂದು ಅವರು ಹೇಳಿದರು” ಎಂದು ಉತ್ತುಕುಲಿ ಇನ್ಸ್‌ಪೆಕ್ಟರ್ ಎಸ್. ಸರವಣನ್ ಹೇಳಿದರು.

ಹೆರಿಗೆಯ ನಂತರ ಶಿಶು ಆರೋಗ್ಯವಾಗಿ ಅದರ ಆರೋಗ್ಯವೂ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ದಂಪತಿಗೆ ಆರು ವರ್ಷದ ಹೆಣ್ಣುಮಗುವಿದ್ದು, 2020 ರಲ್ಲಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed