Last Updated:
ಸ್ಟಾರ್ ಆದರೂ ಹಳೆಯ ಸ್ನೇಹಿತರನ್ನು ಮರೆಯಲಿಲ್ಲ! ಹಳ್ಳಿಗೆ ತೆರಳಿ ಬಾಲ್ಯದ ಗೆಳೆಯರ ಜೊತೆ ಬೆರೆತ ಪ್ರಭುದೇವರ ಸರಳತೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ
ಮೈಸೂರು: ಸಿನೆಮಾ ರಂಗದಲ್ಲಿ (Film Industry) ಸ್ವಲ್ಪ ಹೆಸರು, ಕೀರ್ತಿ, ಹಣ ಬಂದ ತಕ್ಷಣ ತಮ್ಮ ಹಳೇ ಲೈಫ್ಸ್ಟೈಲ್ ಮರೆತು, ತಾವು ಬೆಳೆದು ಬಂದ ಹಾದಿ ಹಾಗೂ ಬಾಲ್ಯದ ಸ್ನೇಹಿತರೆಲ್ಲರನ್ನೂ (Childhood Friends) ಮರೆತು ಐಷಾರಾಮಿ ಜೀವನಕ್ಕೆ ಮಾರುಹೋಗುವವರೇ ಈಗ ಹೆಚ್ಚು. ಆದರೆ, ಇಂತಹ ಗ್ಲಾಮರ್ ದುನಿಯಾದಲ್ಲೂ ಈ ಬಹುಭಾಷಾ ನಟ ಹಾಗೂ ಇಡೀ ದೇಶವೇ ಆರಾಧಿಸುವ ‘ಇಂಡಿಯನ್ ಮೈಕಲ್ ಜಾಕ್ಸನ್’ ಇದಕ್ಕೆ ಸಂಪೂರ್ಣ ಅಪವಾದ!
ಕನ್ನಡ, ತಮಿಳು, ತೆಲುಗು, ಹಿಂದಿ ಹೀಗೆ ಮೂರ್ನಾಲ್ಕು ಭಾಷೆಗಳಲ್ಲಿ ನಟಿಸಿ, ನಿರ್ದೇಶಿಸಿ ಕೋಟ್ಯಂತರ ರೂಪಾಯಿ ಸಂಪಾದಿಸುವ ಸ್ಟಾರ್ ನಟನೊಬ್ಬ, ಇಷ್ಟೊಂದು ದೊಡ್ಡ ಸ್ಟಾರ್ಗಿರಿ ಇದ್ದರೂ ಅದನ್ನೆಲ್ಲಾ ಬದಿಗಿಟ್ಟು ಪಕ್ಕಾ ಹಳ್ಳಿ ಹೈದನಂತೆ ನೆಲದ ಮೇಲೆ ಕುಳಿತು ಊಟ ಸವಿದಿದ್ದಾರೆ! ಹಾಗಾದ್ರೆ ಆ ಖ್ಯಾತ ಕಲಾ ಸಾಮ್ರಾಟ ಯಾರು, ಅವರ ಆ ಅದ್ಭುತ ಸಿಂಪ್ಲಿಸಿಟಿ ಏನು ಅನ್ನೋದರ ಎಕ್ಸ್ಕ್ಲೂಸಿವ್ ರಿಪೋರ್ಟ್ ಇಲ್ಲಿದೆ.

ತಾವು ಚಿಕ್ಕ ವಯಸ್ಸಿನಲ್ಲಿ ಓಡಾಡಿ, ಆಡಿ ಬೆಳೆದ ದೂರ ಗ್ರಾಮದ ತಮ್ಮ ಭವ್ಯ ತೋಟದ ಮನೆಗೆ ತೆರಳಿದ ಅವರು, ಅಲ್ಲಿ ತಮ್ಮ ಬಾಲ್ಯದ ಆತ್ಮೀಯ ಸ್ನೇಹಿತರಾದ ಮಂಜು ಹಾಗೂ ಉಮೇಶ್ ಅವರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ತಾನು ದೇಶವೇ ಮೆಚ್ಚಿದ ದೊಡ್ಡ ಸ್ಟಾರ್ ನಟ, ಡ್ಯಾನ್ಸ್ ಮಾಸ್ಟರ್, ಡೈರೆಕ್ಟರ್ ಅನ್ನೋದನ್ನೆಲ್ಲಾ ಸಂಪೂರ್ಣವಾಗಿ ಮರೆತು ಅಪ್ಪಟ ಹಳ್ಳಿಯ ಮಗನಂತೆ ಬಾಲ್ಯದ ನೆನಪುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾ ಹರಟೆ ಹೊಡೆದರು. ಇನ್ನು ತೋಟದ ಮನೆಯ ಈ ಸೌಹಾರ್ದಯುತ ಭೇಟಿಯ ವೇಳೆ, ಪ್ರಭುದೇವ ಅವರು ತಮ್ಮ ಈ ಬಾಲ್ಯದ ಸ್ನೇಹಿತರ ಜೊತೆಗೂಡಿ ನೆಲದ ಮೇಲೆಯೇ ಕುಳಿತು, ಎದುರಿಗೆ ಹಸಿರು ಬಾಳೆ ಎಲೆಯನ್ನು ಹಾಕಿಸಿಕೊಂಡು ಯಾವುದೇ ಹಮ್ಮು ಬಿಮ್ಮು ಇಲ್ಲದೆ ಹಳ್ಳಿಯ ಶೈಲಿಯ ರುಚಿಕರವಾದ ಊಟವನ್ನು ಸವಿದಿದ್ದಾರೆ!

ತನ್ನ ಹಳ್ಳಿಯ ಮಣ್ಣಿನ ಸೊಗಡನ್ನು ಮತ್ತು ಬಾಲ್ಯದ ಗೆಳೆಯರನ್ನು ಇಂದಿಗೂ ಅಷ್ಟೇ ಗೌರವದಿಂದ ಕಾಣುತ್ತಿರುವ ಅವರ ಈ ಸರಳತೆ ಕಂಡು ಅಭಿಮಾನಿಗಳು ಮಾತ್ರವಲ್ಲ, ಇಡೀ ಕರ್ನಾಟಕವೇ ಫಿದಾ ಆಗಿ ಜೈ ಎಂದಿದೆ. ಒಟ್ಟಿನಲ್ಲಿ, ಎಷ್ಟೇ ಎತ್ತರಕ್ಕೆ ಬೆಳೆದರೂ ತಾನು ಹುಟ್ಟಿದ ಮಣ್ಣು ಮತ್ತು ಹೆತ್ತವರನ್ನು ಮರೆಯಬಾರದು ಎಂಬುದಕ್ಕೆ ಬಹುಭಾಷಾ ನಟ ಪ್ರಭುದೇವ ಅವರ ಈ ನಡೆ ಅತ್ಯುತ್ತಮ ಉದಾಹರಣೆಯಾಗಿದೆ!
Mysore,Karnataka
Jun 29, 2026 10:12 AM IST













