Ullas: ಮೆಜೆಸ್ಟಿಕ್ ನಿರ್ಮಾಪಕ ಭಾಮಾ ಹರೀಶ್ ಪುತ್ರ ನಿಧನ, ಕೊಡಚಾದ್ರಿಯಲ್ಲಿ ಹೃದಯಾಘಾತ | | ACTPnews

ಉಲ್ಲಾಸ್


Last Updated:

Ullas: ಖ್ಯಾತ ನಿರ್ಮಾಪಕ ಮಗ ಉಲ್ಲಾಸ್ ಅವರು ಮೃತಪಟ್ಟಿದ್ದಾರೆ. ಕೊಡಚಾದ್ರಿ ಟ್ರೆಕ್ಕಿಂಗ್ ವೇಳೆ ಘಟನೆ ಸಂಭವಿಸಿದೆ.

ಉಲ್ಲಾಸ್
ಉಲ್ಲಾಸ್

ಕನ್ನಡ ಸಿನಿಮಾ ರಂಗದ (Sandalwood) ಖ್ಯಾತ ನಿರ್ಮಾಪಕ ಪುತ್ರ ವಿಯೋಗವಾಗಿದೆ. ಮೆಜೆಸ್ಟಿಕ್ ನಿರ್ಮಾಪಕ ಭಾ ಮಾ ಹರೀಶ್ (Bhama Harish) ಮಗ ಉಲ್ಲಾಸ್ (Ullas) ನಿಧನರಾಗಿದ್ದಾರೆ. ಹೃದಯಾಘಾತದಿಂದ ಉಲ್ಲಾಸ್ ಮೃತಪಟ್ಟಿದ್ದಾರೆ. ಶಿವಮೊಗ್ಗದ ಕೊಡಚಾದ್ರಿಗೆ ಟ್ರೆಕ್ಕಿಂಗ್  (Trekking) ಹೋದಾಗ ಉಲ್ಲಾಸ್ ನಿಧನರಾಗಿದ್ದಾರೆ.

ಇತೀಚೆಗೆ ಚಂದನಾ ಗೌಡ ಜೊತೆ ಉಲ್ಲಾಸ್ ಮದುವೆ ನಿಶ್ಚಯವಾಗಿತ್ತು. ಈ ಜೋಡಿಯ ಮನೆಯಲ್ಲಿ ಸರಳವಾಗಿ ದೀಪದ ಶಾಸ್ತ್ರ ನೆರವೇರಿತ್ತು. ಕುಟುಂಬಸ್ಥರು ನಿಶ್ಚಯಿಸಿದಂತೆ ಈ ವರ್ಷವೆ ಉಲ್ಲಾಸ್ ಗೌಡ – ಚಂದನಾ ಗೌಡ ಮದುವೆ ಆಗಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಉಲ್ಲಾಸ್ ಮೃತಪಟ್ಟಿದ್ದಾರೆ.

ಭಾ ಮಾ ಹರೀಶ್ ಮಗನ ಮದುವೆ ಸಂಭ್ರಮದಲ್ಲಿದ್ದರು. ಹೀಗಿರುವಾಗಲೇ ಮಗನ ಸಾವಿನ ಸುದ್ದಿ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ. ಪುತ್ರ ಉಲ್ಲಾಸ್ ಗೌಡ ಅವರ ಮದುವೆ ನಿಶ್ಚಯವಾಗಿತ್ತು. ಚಂದನಾ ಗೌಡ ಎಂಬುವರನ್ನ ಉಲ್ಲಾಸ್ ಗೌಡ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಉಲ್ಲಾಸ್ ಗೌಡ – ಚಂದನಾ ಗೌಡ ಅವರದ್ದು ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಕುಟುಂಬಸ್ಥರು ನಿಶ್ಚಯಿಸಿದಂತೆ ಉಲ್ಲಾಸ್ ಗೌಡ – ಚಂದನಾ ಗೌಡ ಮದುವೆಗೆ ಸಮ್ಮತಿ ನೀಡಿದ್ದರು. ಇತ್ತೀಚೆಗೆ ಮನೆಯಲ್ಲಿ ಸರಳವಾಗಿ ದೀಪದ ಶಾಸ್ತ್ರ ನೆರವೇರಿಸಲಾಗಿತ್ತು. ಆದರೆ ಈಗ ಉಲ್ಲಾಸ್ ಹೃದಯಾಘಾತದ ಸುದ್ದಿ ಎಲ್ಲರಿಗೂ ಆಘಾತ ಕೊಟ್ಟಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed