Last Updated:
ವಂಚನೆ ವಿವಾದದ ಕಿಚ್ಚು ಹಾರುವ ಮುನ್ನವೇ ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಕ್ ಸಾವಿಗೆ ಶರಣಾಗಿದ್ದು, ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಉದ್ಯಮಿ ವೈಶಾಕ್ ಕೃಷಿ ತಾಪಂಡ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ?
ಬೆಂಗಳೂರು (ಜೂ.25): ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಲಿಗೆಂಟ್ ಟೆರೆಸ್ಸ್ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯ 401 ರೂಮ್ನಲ್ಲಿ ವೈಶಾಕ್ (Vaishakh) ಸೂಸೈಡ್ ಮಾಡಿಕೊಂಡಿದ್ದು, ಈ ವೇಳೆ ನಟಿ ಕೃಷಿ ತಾಪಂಡ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಆದ್ರೆ ಉದ್ಯಮಿ ವೈಶಾಕ್ ಸಾವಿನ ಸುದ್ದಿ ಕೇಳಿ ನಟಿ ಕೃಷಿ ಕೂಡ ಆಘಾತಕ್ಕೆ ಒಳಗಾಗಿದ್ದಾರೆ. ಉದ್ಯಮಿ ವೈಶಾಕ್ ಕೃಷಿ ತಾಪಂಡ ಮನೆಯಲ್ಲೇ ಆತ್ಮಹತ್ಯೆಗೆ (Suicide) ಶರಣಾಗಿದ್ದು ಯಾಕೆ? ನಟಿಗೂ ವೈಶಾಕ್ಗೂ ಏನು ಸಂಬಂಧ?
ಕೆಲ ದಿನಗಳ ಹಿಂದಷ್ಟೇ ನಟಿ ಕೃಷಿ ತಾಪಂಡ ವಿರುದ್ಧ ಉದ್ಯಮಿ ಹಾಗೂ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಸಾಲು ಸಾಲು ಆರೋಪ ಮಾಡಿದ್ರು. ಈಕೆಯ ಮನೆಗೆ ನಿತ್ಯ ಓರ್ವ ಉದ್ಯಮಿ ಬರ್ತಾನೆ. ಅವನಿಂದ ನನ್ನ ಸಂಬಂಧ ಹಾಳಾಯ್ತು ಎಂದಿದ್ರು. ಈ ಆರೋಪದ ಕಿಚ್ಚು ಹಾರುವ ಮುನ್ನವೇ ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಕ್ ಸಾವಿಗೆ ಶರಣಾಗಿದ್ದು, ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ನಟಿ ಕೃಷಿ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಉದ್ಯಮಿ ವೈಶಾಕ್, ಕಾರು ಆಟೋ ಮೊಬೈಲ್ ಹಾಗೂ ಗ್ಯಾರೇಜ್ ಇಟ್ಟುಕೊಂಡಿದ್ದರು. ಈತನಿಗೆ 15 ವರ್ಷಗಳ ಹಿಂದೆಯೇ ಮದುವೆ ಕೂಡ ಆಗಿತಂತ್ತೆ. ಈ ದಂಪತಿಗೆ 14 ವರ್ಷದ ಮಗ ಕೂಡ ಇದ್ದಾನೆ.
ವೈಶಾಕ್ ಮೇಲೆ ಎವಿಆರ್ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿತ್ತು. ವೈಶಾಕ್ ವಿರುದ್ಧ ಹೆಚ್ ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೈಶಾಕ್ನನ್ನ ಬಂಧನ ಮಾಡಿ ತನಿಖೆ ನಡೆಸಿದ್ದರು.
ಇದೇ ವಿಚಾರಕ್ಕೆ ವೈಶಾಕ್ ಹಾಗೂ ಪತ್ನಿ ಮಧ್ಯೆ ಜಗಳ ಆಗ್ತಿತ್ತು. ಪತ್ನಿ ಜೊತೆ ಜಗಳ ಆದಾಗ ಉದ್ಯಮಿ ವೈಶಾಕ್, ನಟಿ ಕೃಷಿ ತಾಪಂಡ ಮನೆಗೆ ಬಂದು ಹೋಗ್ತಿದ್ದನಂತೆ. ಅದೇ ರೀತಿ ನಿನ್ನೆ ರಾತ್ರಿ ಕೂಡ ಕೃಷಿ ತಪಂಡಾ ಮನೆಗೆ ಬಂದಿದ್ದ. ಬೆಳಗ್ಗೆ ಅಷ್ಟರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ. ಸದ್ಯ ಆರ್ ಆರ್ ನಗರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
(ವರದಿ: ಮಂಜುನಾಥ್, ನ್ಯೂಸ್18 ಕನ್ನಡ, ಬೆಂಗಳೂರು)
Jun 25, 2026 11:55 AM IST













