Darshan Son Vineesh: ನಟ ದರ್ಶನ್ ಮಗ ವಿನೀಶ್ ಕಾರು ಅಪಘಾತವಾಗಿತ್ತಾ? ಸ್ಪಷ್ಟನೆ ಕೊಟ್ಟ ವಿಜಯಲಕ್ಷ್ಮಿ | | ACTPnews

ವಿನೀಶ್


Last Updated:

ಸ್ಯಾಂಡಲ್‌ವುಡ್ ನಟ ದರ್ಶನ್ (Actor Darshan) ಪುತ್ರ ವಿನೀಶ್ (Vineesh) ಚಲಾಯಿಸುತ್ತಿದ್ದ ಐಷಾರಾಮಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿತ್ತು. ಇದೀಗ ಈ ಎಲ್ಲಾ ಬೆಳವಣಿಗೆ ಕುರಿತು ನಟ ದರ್ಶನ್ ಪತ್ನಿವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.

ವಿನೀಶ್
ವಿನೀಶ್

ಸ್ಯಾಂಡಲ್‌ವುಡ್ ನಟ ದರ್ಶನ್ (Actor Darshan) ಪುತ್ರ ವಿನೀಶ್ (Vineesh) ಚಲಾಯಿಸುತ್ತಿದ್ದ ಐಷಾರಾಮಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲದೆ ಅಪಘಾತದ ಬಳಿಕ ಸ್ಥಳದಲ್ಲೇ ಸಾರ್ವಜನಿಕರು ಮತ್ತು ಕಾರು ಚಾಲಕರ ನಡುವೆ ಮಾತಿನ ಚಕಮಕಿ ಕೂಡಾ ನಡೆದಿತ್ತು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಈ ಎಲ್ಲಾ ಬೆಳವಣಿಗೆ ಕುರಿತು ನಟ ದರ್ಶನ್ ಪತ್ನಿವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.

ನಗರದ ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ವಿನೀಶ್ ಇದ್ದ KA 01 MU 9969 ನೋಂದಣಿ ಸಂಖ್ಯೆಯ ಫೋರ್ಡ್ ಎಂಡೋವರ್  ಐಷಾರಾಮಿ ಕಾರು ಡಿಕ್ಕಿ ಹೊಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು .

ಇದೀಗ ಈ ಘಟನೆ ಕುರಿತು ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ. ವಿನೀಶ್ ಗೆ ಅಪಘಾತ ಆಗಿ ಆಸ್ಪತ್ರೆ ಸೇರಿದ್ದಾರೆ ಎಂದು ಹರಡಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ವಿಜಯಲಕ್ಷ್ಮಿ ದರ್ಶನ್  ಸ್ಪಷ್ಟನೆ  ನೀಡಿದ್ದಾರೆ.

ಹಾಗೆಯೇ ವಿನೀಶ್ ಸುರಕ್ಷಿತವಾಗಿದ್ದಾರೆ, ಜೊತೆಗೆ ಘಟನೆ ನಡೆಯುವ ವೇಳೆ ವಿನೀಶ್ ವಾಹನ ಚಲಾಯಿಸಿಲ್ಲ ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ. ಹಾಗೆಯೇ ಬೆಂಗಳೂರಿನ ಟ್ರಾಫಿಕ್ ನಲ್ಲಿ ಇಂಥಾ ಸಣ್ಣಪುಟ್ಟ ಅವಘಡಗಳು ಸರ್ವೇ ಸಾಮಾನ್ಯ, ಜೊತೆಗೆ ಅವಘಡ ನಡೆದ ಬಳಿಕ ಬೈಕ್ ಸವಾರನ ಸಹಾಯಕ್ಕೆ ವಿನೀಶ್ ಮುಂದಾಗಿದ್ದಾನೆ ಎಂದು ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.

ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ತುಣುಕು ಇದೀಗ ಅಪಾರ್ಥಕ್ಕೆ ಕಾರಣವಾಗಿದೆ. ಜೊತೆಗೆ ನಮ್ಮ ಕುಟುಂಬ ಸದ್ಯಕ್ಕೆ ಕಠಿಣವಾದ ಸಮಯದಲ್ಲಿ ಹಾದು ಹೋಗ್ತಿದೆ. ಹೀಗಾಗಿ ಇಂತಹ ಸಮಯದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ನಮ್ಮ ನೋವನ್ನು‌ ಮತ್ತಷ್ಟು ಹೆಚ್ಚಿಸಬೇಡಿ ಎಂದು ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed