Krishi Thapanda: ಖ್ಯಾತ ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ಆತ್ಮಹತ್ಯೆ | Businessman Vaishak found dead at Actress Krishi Thapanda home | | ACTPnews

ಕೃಷಿ ತಾಪಂಡ


Last Updated:

Krishi Thapanda: ಕನ್ನಡದ ಖ್ಯಾತ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಯುವ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನು?

ಕೃಷಿ ತಾಪಂಡ
ಕೃಷಿ ತಾಪಂಡ

ಸ್ಯಾಂಡಲ್​ವುಡ್ ಖ್ಯಾತ ನಟಿ ಕೃಷಿ ತಾಪಂಡ (Krishi Thapanda) ಅವರ ಮನೆಯಲ್ಲಿ ಉದ್ಯಮಿ ವೈಶಾಖ್ (Vaishak) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾಹಿತ ಉದ್ಯಮಿ ವೈಶಾಖ್ ಎನ್ನುವವರು ಕನ್ನಡದ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಗ ಶಾಕ್ ಕೊಟ್ಟಿದೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಏಕಾಏಕಿ ನೇಣು ಹಾಕಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಸದ್ಯ ಆರ್ ಆರ್ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಡೆತ್ ನೋಟ್ ಸಿಕ್ಕಿಲ್ವಾ?

ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್​ನೋಟ್ ಸಿಕ್ಕಿದೆಯಾ ಎನ್ನುವ ಬಗ್ಗೆಯೂ ತನಿಖೆ ಮಾಡಲಾಗಿದೆ. ವೈಶಾಖ್ ಆಗಾಗ ಕೃಷಿ ತಾಪಂಡ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಜೂನ್ 24ರಂದು ವೈಶಾಖ್ ಕೃಷಿ ತಾಪಂಡ ಮನೆಗೆ ಬಂದಿದ್ದು, ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದು ಉದ್ಯಮಿ ವೈಶಾಖ್(45) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ನಟಿಯ ಆರ್.ಆರ್ ನಗರದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ನಟಿ ಕೃಷಿ ತಾಪಂಡಗೆ ವೈಶಾಖ್ ಆಪ್ತನಾಗಿದ್ದ. ಆಗಾಗ ಕೃಷಿ ತಾಪಂಡಾರನ್ನ ಭೇಟಿ ಆಗುತ್ತಿದ್ದ ಎನ್ನಲಾಗಿದೆ. ಕೃಷಿ ಮನೆಗೆ ಬಂದು ಹೋಗುತ್ತಿದ್ದ ವೈಶಾಖ್ ಘಟನೆ ಈಗ ಎಲ್ಲರಿಗೂ ಶಾಕ್ ಕೊಟ್ಟಿದೆ.

ಎವಿಆರ್ ಗ್ರೂಪ್ ಮಾಲೀಕನ ಕೇಸ್​ನಲ್ಲೂ ಹೆಸರು ಕೇಳಿ ಬಂದಿದೆ. ನಿನ್ನೆ ಕೃಷಿ ತಾಪಂಡಾ ಮನೆಗೆ ಬಂದಿದ್ದ ವೈಶಾಖ್ ರಾತ್ರಿ ಏಕಾಏಕಿ ನೇಣಿಗೆ ಶರಣಾಗಿದ್ದಾರೆ. ವೈಶಾಖ್ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ಸದ್ಯ ಘಟನೆ ಸಂಬಂಧ ಪೊಲೀಸರಿಂದ ತನಿಖೆ ಮುಂದುವರಿದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed