IND vs IRL T20I: ವೈಭವ್ ಔಟ್, ಚಾಂಪಿಯನ್ಸ್‌ಗೆ ಪ್ರಾಶಸ್ತ್ಯ! ಐರ್ಲೆಂಡ್ ಸರಣಿಗೆ ಪ್ಲೇಯಿಂಗ್ XI ಪ್ರಕಟಿಸಿದ ಖ್ಯಾತ ಕ್ರಿಕೆಟ್ ವಿಶ್ಲೇಷಕ | ಕ್ರೀಡಾ ಸುದ್ದಿ | ACTPnews

ಟೀಮ್ ಇಂಡಿಯಾ


Last Updated:



ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ಬಗ್ಗೆ ಹರ್ಷ ಭೋಗ್ಲೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಳವಾದ ವಿಶ್ಲೇಷಣೆ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಅವರನ್ನು ತಕ್ಷಣ ಪ್ಲೇಯಿಂಗ್ ಇಲೆವೆನ್​ಗೆ ಸೇರಿಸಬೇಕೆಂಬ ಬೇಡಿಕೆಗೆ ಅಂತ್ಯ ಹಾಡುತ್ತಾ, ವೈಭವ್ ಭಾರತದ ಜರ್ಸಿ ತೊಡಲು ಇನ್ನೂ ಸ್ವಲ್ಪ ಸಮಯ ಕಾಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಟೀಮ್ ಇಂಡಿಯಾ
ಟೀಮ್ ಇಂಡಿಯಾ

ಅಫ್ಘಾನಿಸ್ತಾನ ಸರಣಿ ಮುಗಿಯುತ್ತಿದ್ದಂತೆ ಭಾರತ ತಂಡ ಐರ್ಲೆಂಡ್ ಪ್ರವಾಸ (India vs Ireland) ಕೈಗೊಂಡಿದೆ. ಜೂನ್ 26 ರಂದು ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯ (T20 Series) ಮೊದಲ ಪಂದ್ಯವನ್ನು ಆಡಲು ಭಾರತ ಕ್ರಿಕೆಟ್ ತಂಡ ಸಜ್ಜಾಗಿದೆ. ಈ ಪಂದ್ಯಕ್ಕೂ ಮುನ್ನ, ವಿಶ್ವದ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಪದಾರ್ಪಣೆ ಬಗ್ಗೆ ಕ್ರಿಕೆಟ್ ವಲಯಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಈ ಯುವ ಆಟಗಾರನಿಗೆ ಮೊದಲ ಪಂದ್ಯದಲ್ಲಿ ಅವಕಾಶ ಸಿಗುತ್ತದೆಯೇ ಎಂದು ತಿಳಿಯಲು ಕ್ರಿಕೆಟ್ ಎಲ್ಲರೂ ಉತ್ಸುಕರಾಗಿದ್ದಾರೆ. ಅಭಿಮಾನಿಗಳಿಂದ ಹಿಡಿದು ಕ್ರಿಕೆಟ್ ತಜ್ಞರವರೆಗೆ, ಎಲ್ಲರೂ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ಇದೀಗ ವಿಶ್ವಪ್ರಸಿದ್ಧ ಕಾಮೆಂಟೇಟರ್ ಮತ್ತು ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ (Harsha Bhogle) ಈ ಬಹುನಿರೀಕ್ಷಿತ ಸರಣಿಗೆ ಭಾರತದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿದ್ದಾರೆ. ವೈಭವ್ ಸೂರ್ಯವಂಶಿ ಪದಾರ್ಪಣೆ ಬಗ್ಗೆಯೂ ಮಹತ್ವದ ಹೇಳಿಕೆ ನೀಡಿದ್ದಾರೆ.

ವೈಭವ್ ಕಾಯಲಿ, ವಿಶ್ವಚಾಂಪಿಯನ್ಸ್ ಆಡಲಿ

ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ಬಗ್ಗೆ ಹರ್ಷ ಭೋಗ್ಲೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಳವಾದ ವಿಶ್ಲೇಷಣೆ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಅವರನ್ನು ತಕ್ಷಣ ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಬೇಕೆಂಬ ಬೇಡಿಕೆಗೆ ಅಂತ್ಯ ಹಾಡುತ್ತಾ, ವೈಭವ್ ಭಾರತದ ಜರ್ಸಿ ತೊಡಲು ಇನ್ನೂ ಸ್ವಲ್ಪ ಸಮಯ ಕಾಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ತಂಡದ ಸಂಯೋಜನೆಯನ್ನು ಗಮನದಲ್ಲಿಟ್ಟುಕೊಂಡು, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕ ಜೋಡಿಯಾಗಿದ್ದಾರೆ. ಸಂಜು ಮತ್ತು ಅಭಿಷೇಕ್ ಜೋಡಿ ಭಾರತ ವಿಶ್ವ ಚಾಂಪಿಯನ್ ಆಗಲು ನೆರವಾವಿದ್ದರು. ಆದ್ದರಿಂದ ಮ್ಯಾನೇಜ್‌ಮೆಂಟ್ ತಮ್ಮ ವಿಶ್ವ ಚಾಂಪಿಯನ್ ಓಪನರ್‌ಗಳನ್ನು ಬೇರ್ಪಡಿಸಬಾರದೆಂದು ತಿಳಿಸಿದ್ದಾರೆ.

ವಿಫಲರಾದಾಗ ಅವಕಾಶ ನೀಡಿ

“ಈಗ ನೀವು ನಿಮ್ಮ ವಿಶ್ವ ಚಾಂಪಿಯನ್ ಆರಂಭಿಕ ಆಟಗಾರರೊಂದಿಗೆ ಮುಂದುವರಿಯಬೇಕು. ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲು ಸಂಜು ಅಥವಾ ಅಭಿಷೇಕ್ ಅವರನ್ನು ಕೈಬಿಟ್ಟರೆ, ಅದು ಅವರಿಗೆ ದೊಡ್ಡ ಅನ್ಯಾಯವಾಗುತ್ತದೆ ಎಂದು ಹರ್ಷ ಭೋಗ್ಲೆ ಹೇಳಿದ್ದಾರೆ. ಭೋಗ್ಲೆ ಪ್ರಕಾರ, ವೈಭವ್ ಸೂರ್ಯವಂಶಿ ತಂಡದಲ್ಲೇ ಇದ್ದು ಅನುಭವ ಪಡೆಯಬೇಕು. ಸಂಜು ಅಥವಾ ಅಭಿಷೇಕ್ ಇಬ್ಬರೂ ನಿರಂತರವಾಗಿ ವಿಫಲರಾದಾಗ ಅಥವಾ ಕಳಪೆ ಫಾರ್ಮ್ ಪ್ರದರ್ಶನ ತೋರಿದಾಗ ಮಾತ್ರ ಅವರಿಗೆ ಅವಕಾಶ ನೀಡಬೇಕು. ಇದೀಗ, ತಂಡದ ಗೆಲುವಿನ ಹಾದಿಯನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯ” ಎಂದಿದ್ದಾರೆ.

ಹರ್ಷ ಭೋಗ್ಲೆ ಆಯ್ಕೆ ಮಾಡಿದ ಪ್ಲೇಯಿಂಗ್ ಇಲೆವೆನ್

ಭೋಗ್ಲೆ ಆಯ್ಕೆ ಮಾಡಿರುವ ಸಂಭಾವ್ಯ ಆಡುವ XI ತಂಡವು ಸಮತೋಲನ ಮತ್ತು ಆಕ್ರಮಣಕಾರಿ ಎಂದು ತೋರುತ್ತದೆ. ತಂಡವು ಅನುಭವ ಮತ್ತು ಯುವ ಉತ್ಸಾಹದ ಪರಿಪೂರ್ಣ ಮಿಶ್ರಣವನ್ನು ಹೊಂದಿದೆ. ಈ ತಂಡದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ನೇಮಿಸಿದ್ದಾರೆ, ಅವರು ಮಧ್ಯಮ ಕ್ರಮಾಂಕವನ್ನು ಬಲಪಡಿಸುತ್ತಾರೆ. ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ಮತ್ತು ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಮಧ್ಯಮ ಮತ್ತು ಕೆಳ-ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಜೊತೆಗೆ ತಿಲಕ್ ವರ್ಮಾ, ಶಿವಂ ದುಬೆ ಮತ್ತು ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಅವರಂತಹ ಆಕ್ರಮಣಕಾರಿ ಆಟಗಾರರಿದ್ದಾರೆ. ಇವರು ಯಾವುದೇ ಕ್ಷಣದಲ್ಲಿ ಪಂದ್ಯವನ್ನು ತಿರುಗಿಸಬಲ್ಲರು ಎಂದು ಹರ್ಷರ ಅಭಿಪ್ರಾಯವಾಗಿದೆ.

ವೇಗದ ಬೌಲಿಂಗ್ ಪಡೆ

ವೇಗದ ಬೌಲಿಂಗ್ ದಾಳಿಯನ್ನು ಬಲಪಡಿಸಲು, ಭೋಗ್ಲೆ ಮೂವರು ಪ್ರಮುಖ ವೇಗಿಗಳನ್ನು ಆಯ್ಕೆ ಮಾಡಿದ್ದಾರೆ. ಅವರಲ್ಲಿ ಹರ್ಷಿತ್ ರಾಣಾ ಕೂಡ ಒಬ್ಬರು, ಅವರು ತಮ್ಮ ವೇಗ ಮತ್ತು ನಿಖರವಾದ ಯಾರ್ಕರ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಮತ್ತೊಬ್ಬ ವೇಗಿ ಪ್ರಸಿದ್ಧ್ ಕೃಷ್ಣ, ಅವರು ತಮ್ಮ ಹೆಚ್ಚುವರಿ ಬೌನ್ಸ್ ಮತ್ತು ತೀಕ್ಷ್ಣವಾದ ಎಸೆತದಿಂದ ಐರಿಶ್ ಪಿಚ್‌ಗಳಲ್ಲಿ ಎದುರಾಳಿ ತಂಡವನ್ನ ಉಡೀಸ್ ಮಾಡಬಲ್ಲರು. ಅರ್ಷದೀಪ್ ಸಿಂಗ್ ಡೆತ್-ಓವರ್‌ ಸ್ಪೆಷಲಿಸ್ಟ್ ಮತ್ತು ಹೊಸ ಚೆಂಡನ್ನು ಸ್ವಿಂಗ್ ಮಾಡುವಲ್ಲಿ ನಿಪುಣರು. ಈ ಮೂವರ ಜೊತೆಗೆ, ನಾಲ್ಕನೇ ವೇಗಿಯಾಗಿ ಶಿವಂ ದುಬೆ ತಂಡದಲ್ಲಿದ್ದಾರೆ. ಅಗತ್ಯವಿದ್ದರೆ ಅವರನ್ನೂ ಬಳಸಿಕೊಳ್ಳಬಹುದು.

ಹರ್ಷ ಭೋಗ್ಲೆ ಆಯ್ಕೆ ಮಾಡಿದ ಪ್ಲೇಯಿಂಗ್ ಇಲೆವೆನ್

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed