Last Updated:
ವೈಶಾಖ್ ಕೃಷಿ ತಾಪಂಡ ಮಾಜಿ ಬಾಯ್ಫ್ರೆಂಡ್ಗೆ ಬೆದರಿಕೆ ಹಾಕಿದ್ರಾ? ಆಮೇಲೆ ಆಗಿದ್ದೇನು? ತಿಂಗಳ ಕಾಲ ಪತ್ನಿಯ ಜೊತೆ ಮಾತು ಬಿಟ್ಟಿದ್ದೇಕೆ ವೈಶಾಖ್?
ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (Krishi Thapanda) ಹಾಗೂ ಉದ್ಯಮಿ ಅರವಿಂದ್ ರೆಡ್ಡಿ ಬ್ರೇಕಪ್ (Breakup) ಭಾರೀ ಸುದ್ದಿಯಾಗಿತ್ತು. ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದ ಇಬ್ಬರೂ ತಿಂಗಳ ಹಿಂದೆ ಭಾರೀ ಸುದ್ದಿಯಾಗಿದ್ದರು. ಇದೀಗ ಆತ್ಮಹತ್ಯೆ ಮಾಡಿಕೊಂಡಿರುವ ವೈಶಾಖ್ ಅವರಿಗೂ ಅರವಿಂದ್ ಅವರಿಗೂ ಲಿಂಕ್ ಇತ್ತಾ?
1 ತಿಂಗಳಿನಿಂದ ಪತ್ನಿ ಜೊತೆ ಮಾತುಬಿಟ್ಟಿದ್ದ ವೈಶಾಖ್ ಅವರು ಕಳೆದ ಒಂದು ವಾರದಿಂದ ನಟಿ ಕೃಷಿ ತಾಪಂಡ ಮನೆಯಲ್ಲಿ ಬಂದಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ AVR ಗ್ರೂಪ್ ಮಾಲೀಕನ ಕೇಸ್ ಬಳಿಕ ವೈಶಾಖ್ ಹಾಗೂ ಅವರ ಪತ್ನಿ ನಡುವೆಯೂ ಬಿರುಕು ಬಂದಿತ್ತು.
ವೈಶಾಖ್ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ವೈಶಾಖ್ ಹಾಗೂ ಪತ್ನಿ ಮಧ್ಯೆ ಜಗಳ ಇದ್ದ ಕಾರಣ ವೈಶಾಖ್ ವಾರದಿಂದ ಕೃಷಿ ತಾಪಂಡ ಮನೆಯಲ್ಲೇ ವಾಸವಿದ್ದು ಇಲ್ಲಿಂದಲೇ ಕೆಲಸಕ್ಕೆ ಹೋಗಿ ಬರುತ್ತಿದ್ದರು ಎನ್ನಲಾಗಿದೆ.
ವೈಶಾಖ್ ಡಿಪ್ರೆಶನ್‌ನಿಂದ ಬಳಲುತ್ತಿದ್ದರು ಎನ್ನಲಾಗಿದ್ದು ವೈಶಾಖ್ ನಿನ್ನೆ ಕೃಷಿ ತಾಪಂಡ ಯಲಹಂಕಗೆ ಹೋಗಿದ್ದ ವೇಳೆ ಅವರ ಮನೆಗೆ ಹೋಗಿದ್ದರು. ಸೂಸೈಡ್ ಮಾಡಿಕೊಳ್ಳೋದಾಗಿ ಮೆಸೇಜ್ ಮಾಡಿದ್ದರು. ಕೃಷಿ ತಾಪಂಡ ವೈಶಾಖ್‌ಗೆ ಕರೆ ಮಾಡಿ ಸಮಾಧಾನ ಮಾಡಿದ್ದರು. ಕೃಷಿ ಯಲಹಂಕದಿಂದ ಮನೆಗೆ ಬರುವಷ್ಟರಲ್ಲಿ ವೈಶಾಖ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ನಟಿ ಕೃಷಿ ತಾಪಂಡ ಅವರ ಆರ್ಆರ್ ನಗರ ಫ್ಲಾಟ್ನಲ್ಲಿ ವೈಶಾಖ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜೂನ್ 24ರಂದು ನಟಿ ಮನೆಯಲ್ಲಿ ಇರಲಿಲ್ಲ. ವೈಶಾಖ್ ನಟಿಯ ಮನೆಯಲ್ಲೇ ಇದ್ದ. ರಾತ್ರಿ ಕಾಲ್ ಮಾಡಿ ತಾನು ಸಾಯುತ್ತೇನೆ ಎಂದು ಹೇಳಿಕೊಂಡಿದ್ದ. ನಟಿ ಕೃಷಿ ತಾಪಂಡ ತಕ್ಷಣ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ರಾತ್ರಿ 8:30 ರ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ.
ವರದಿ: ಮಂಜುನಾಥ್ ಎನ್, ನ್ಯೂಸ್18 ಕನ್ನಡ ಪ್ರತಿನಿಧಿ ಬೆಂಗಳೂರು
Bangalore [Bangalore],Bangalore,Karnataka
Jun 25, 2026 12:52 PM IST













