Last Updated:
ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ಗಳಲ್ಲಿ 8 ವಿಕೆಟ್ ಕಳೆದಿಕೊಂಡು 136 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಮಹಿಳಾ ಟಿ20 ವಿಶ್ವಕಪ್ನ 23ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನ ಎದುರಿಸುತ್ತಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ಈ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ಗಳಲ್ಲಿ 8 ವಿಕೆಟ್ ಕಳೆದಿಕೊಂಡು 136 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ. ಭಾರತ ತಂಡಕ್ಕೆ ಸೆಮಿಫೈನಲ್ ಪ್ರವೇಶದ ದೃಷ್ಟಿಯಿಂದ ಈ ಗೆಲುವು ಅನಿವಾರ್ಯವಾಗಿದೆ. ಗೆದ್ದರೆ ಮಾತ್ರ ರೇಸ್ನಲ್ಲಿ ಉಳಿಯಲಿದೆ. ಅಲ್ಲದೆ ಉತ್ತಮ ರನ್ ರೇಟ್ನಲ್ಲಿ ಗೆದ್ದರೆ ಇನ್ನೂ ಅನುಕೂಲವಾಗುವುದರಿಂದ ಕಡಿಮೆ ಓವರ್ಗಳಲ್ಲೇ ಚೇಸಿಂಗ್ ಮುಗಿಸಲಿ ಎದುರು ನೋಡುತ್ತಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡ ಎರಡನೇ ಓವರ್ ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ದಿಲಾರಾ ಅಖ್ತರ್ 8 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಔಟ್ ಆದರು. ರೇಣುಕಾ ಠಾಕೂರ್ ಅವನನ್ನು ಪೆವಿಲಿಯನ್ಗೆ ಕಳುಹಿಸಿದರು. ನಂತರ ಒಂದಾದಜುವೇರಿಯಾ ಫಿರ್ದೌಸ್ ಹಾಗೂ ಶೋಬನಾ ಮೋಸ್ಟರಿ 2ನೇ ವಿಕೆಟ್ ಜೊತೆಯಾಟದಲ್ಲಿ 51 ರನ್ಗಳ ಜೊತೆಯಾಟ ನೀಡಿದರು. ಈ ಜೋಡಿಯನ್ನ ನಂದನಿ ಶರ್ಮಾ ಬ್ರೇಕ್ ಮಾಡಿದರು. 31 ಎಸೆತಗಳಲ್ಲಿ 33 ರನ್ ಗಳಿಸಿದ್ದ ಫಿರ್ದೌಸ್ ನಂದನಿ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ನಿಗರ್ ಸುಲ್ತಾನ 27 ಎಸೆತಗಳಲ್ಲಿ 4 ಬೌಂಡರಿಗಳ ಸಹಿತ 32 ರನ್ಗಳಿಸಿ ರಾಧಾ ಯಾದವ್ ಬೌಲಿಂಗ್ನಲ್ಲಿ ಸ್ಟಂಪ್ ಆದರು.
ಈ ವಿಕೆಟ್ ಬಳಿಕ ಬಾಂಗ್ಲಾದೇಶ ತಂಡದ ಯಾವೊಬ್ಬ ಬ್ಯಾಟರ್ ಕ್ರೀಸ್ನಲ್ಲಿ ನಿಲ್ಲಲಿಲ್ಲ. ಶೋರ್ನಾ ಅಖ್ತರ್ 13,ಶರ್ಮಿನ್ ಅಖ್ತರ್ 10, ರೀತು ಮೋನಿ 8 ರನ್ಗಳಿಸಿ ಔಟ್ ಆದರು.
ಭಾರತದ ಪರ ಮಿಂಚಿದ ರಾಧಾ ಯಾದವ್ 28ಕ್ಕೆ3, ಶ್ರೀಚರಣಿ 21ಕ್ಕೆ2, ರೇಣುಕಾ ಠಾಕೂರ್ 21ಕ್ಕೆ1, ನಂದನಿ ಶರ್ಮಾ 32ಕ್ಕೆ1 ವಿಕೆಟ್ ಪಡೆದರು.













