Railway Extension: ಪ್ರಯಾಣಿಕರಿಗೆ ಗುಡ್ ನ್ಯೂಸ್, ವಿಶಾಖಪಟ್ಟಣಂ-ಬೆಂಗಳೂರು ವಿಶೇಷ ರೈಲು ವಿಸ್ತರಣೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ವಿಶಾಖಪಟ್ಟಣಂ ಬೆಂಗಳೂರು ವಿಶೇಷ ರೈಲು


Last Updated:

ದಕ್ಷಿಣ ಕರಾವಳಿ ರೈಲ್ವೆ ವಿಶಾಖಪಟ್ಟಣಂ SMVT ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಸೇವೆಯನ್ನು ಜುಲೈ 3 ರಿಂದ ಆಗಸ್ಟ್ 1ರವರೆಗೆ ಐದು ಹೆಚ್ಚುವರಿ ಟ್ರಿಪ್‌ಗಳಿಗೆ ವಿಸ್ತರಿಸಿದೆ.

ವಿಶಾಖಪಟ್ಟಣಂ ಬೆಂಗಳೂರು ವಿಶೇಷ ರೈಲು
ವಿಶಾಖಪಟ್ಟಣಂ ಬೆಂಗಳೂರು ವಿಶೇಷ ರೈಲು

ಬೆಂಗಳೂರು: ನೀವು ವಿಶಾಖಪಟ್ಟಣಂ (Visakhapatnam) ಮತ್ತು ಬೆಂಗಳೂರು (Bengaluru) ನಡುವೆ ಓಡಾಡುವವರೇ? ಹಬ್ಬದ ಸೀಸನ್ ಅಥವಾ ವೀಕೆಂಡ್ ಟ್ರಿಪ್‍ಗೆ ರೈಲು (Train) ಟಿಕೆಟ್ ಸಿಗುತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ಪ್ರಯಾಣಿಕರ (Passengers) ಅತಿಯಾದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಕರಾವಳಿ ರೈಲ್ವೆಯು ವಿಶಾಖಪಟ್ಟಣಂ-SMVT ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ಐದು ಹೆಚ್ಚುವರಿ ಟ್ರಿಪ್‌ಗಳಿಗೆ ವಿಸ್ತರಿಸಿದೆ.

ರೈಲು ಸಮಯ ಮತ್ತು ವಿವರಗಳು

ಇನ್ನು ಮುಂದೆ ನೀವು ಜುಲೈ 3 ರಿಂದ ಆಗಸ್ಟ್ 1ರವರೆಗೆ ಈ ವಿಶೇಷ ರೈಲಿನ ಲಾಭ ಪಡೆಯಬಹುದು.

ರೈಲು ಸಂಖ್ಯೆ 08581 (ವಿಶಾಖಪಟ್ಟಣಂ-ಬೆಂಗಳೂರು): ಪ್ರತಿ ಗುರುವಾರ ಮಧ್ಯಾಹ್ನ 3.20ಕ್ಕೆ ವಿಶಾಖಪಟ್ಟಣಂನಿಂದ ಹೊರಟು, ಮರುದಿನ ಮಧ್ಯಾಹ್ನ 12.45ಕ್ಕೆ ಬೆಂಗಳೂರು SMVT ತಲುಪಲಿದೆ.

ರೈಲು ಸಂಖ್ಯೆ 08582 (ಬೆಂಗಳೂರು-ವಿಶಾಖಪಟ್ಟಣಂ): ಪ್ರತಿ ಶುಕ್ರವಾರ ಮಧ್ಯಾಹ್ನ 3.55ಕ್ಕೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 1.30ಕ್ಕೆ ವಿಶಾಖಪಟ್ಟಣಂ ತಲುಪಲಿದೆ ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.

ವಿಶೇಷವೆಂದರೆ, ಈ ರೈಲು ಎರಡೂ ದಿಕ್ಕುಗಳಲ್ಲಿ ದುವ್ವಾಡದಲ್ಲಿ ನಿಲುಗಡೆಯನ್ನು ಹೊಂದಿದ್ದು, ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ.

ವಿಸ್ತರಣೆಯ ಉದ್ದೇಶ

ಈ ಮಾರ್ಗದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಎಲ್ಲರಿಗೂ ಸುಗಮ ಪ್ರಯಾಣದ ಅವಕಾಶ ಕಲ್ಪಿಸಲು ರೈಲ್ವೆ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಟಿಕೆಟ್ ಬುಕ್ಕಿಂಗ್‍ಗಾಗಿ ನೀವು ರೈಲ್ವೆ ಅಪ್ಲಿಕೇಶನ್ ಅಥವಾ ಅಧಿಕೃತ ವೆಬ್‍ಸೈಟ್ ಅನ್ನು ಪರಿಶೀಲಿಸಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed