Last Updated:
Krishi Thapanda-Vaishakh: ಕೃಷಿ ತಾಪಂಡಗೆ ಮಾತ್ರವಲ್ಲ, ತಾಳಿ ಕಟ್ಟಿದ ಹೆಂಡತಿಗೂ ವೈಶಾಖ್ ಲಾಸ್ಟ್ ಮೆಸೇಜ್ ಕಳಿಸಿದ್ದರು. ಅದರಲ್ಲಿ ಏನಿತ್ತು? ಪತ್ನಿಗೂ ತಂದೆಗೂ ಕೊಟ್ಟ ಮೆಸೇಜ್ ಏನಾಗಿತ್ತು?
ಸ್ಯಾಂಡಲ್ವುಡ್ನ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಉದ್ಯಮಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಹೊಸ ಹೊಸ ಅಪ್ಡೇಟ್ ಹೊರ ಬೀಳುತ್ತಲೇ ಇದೆ. ಆತ್ಮಹತ್ಯೆ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಪೂರ್ಣವಾಗಿ ತನಿಖೆ ನಡೆಸುತ್ತಿದ್ದಾರೆ.
ಹೀಗಿರುವಾಗಲೇ ಕೃಷಿ ತಾಪಂಡ ಹಾಗೂ ಸ್ನೇಹಿತ ವೈಶಾಖ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಲವು ವಿಚಾರ ರಿವೀಲ್ ಆಗುತ್ತಿದೆ. ಒಂದು ತಿಂಗಳಿಂದ ಕುಟುಂಬಸ್ತರಿಂದ ದೂರ ಉಳಿದಿದ್ದ ವೈಶಾಖ್ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ವೈಶಾಖ್ ಅವರು ತಂದೆ, ಪತ್ನಿ, ಮಗನನ್ನ ಬಿಟ್ಟು ದೂರ ಇದ್ದರು. ಒಂದು ತಿಂಗಳಿಂದಲೂ ಪತ್ನಿಗೆ ಕಾಲ್, ಮೆಸೇಜ್ ಮಾಡಿರಲಿಲ್ಲ. ಅದಕ್ಕೂ ಮುನ್ನ ಕೌಟುಂಬಿಕ ಕಲಹದ ಬಗ್ಗೆ ಮುತುವರ್ಜಿ ವಜಿಸಿದ್ದ ಇಬ್ಬರ ಕುಟುಂಬಸ್ಥರು ಮಾತನಾಡಿದ್ದರು. ಆದರೆ ಪತ್ನಿ ಜೊತೆ ಮತ್ತೆ ಉಳಿದುಕೊಳ್ಳಲು ವೈಶಾಖ್ ನಿರಾಕರಿಸಿದ್ದರು.
ಒಂದು ತಿಂಗಳಿಂದ ಕುಟುಂಬಸ್ಥರ ಸಂಪರ್ಕ ಇಲ್ಲದೇ ಇದ್ದ ವೈಶಾಖ್ ಡಿಪ್ರೆಶನ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸಾಯುವುದಕ್ಕೂ ಮೊದಲು ವೈಶಾಖ್ಗೆ ಮಗನ ನೆನಪು ಕಾಡಿತ್ತು ಎನ್ನಲಾಗಿದ್ದು ಒಂದು ತಿಂಗಳಿಂದ ಮೆಸೇಜ್ ಕಾಲ್ ಕೂಡ ಮಾಡದಿದ್ದರೂ ವೈಶಾಕ್ ಸಾಯುವ ಮುನ್ನ ಪತ್ನಿಗೆ ಮೆಸೇಜ್ ಮಾಡಿದ್ದರು ಎನ್ನಲಾಗಿದೆ.
ಆತ್ಮಹತ್ಯೆಗೂ ಮುನ್ನ ಪತ್ನಿಗೆ ಮೆಸೇಜ್ ಮಾಡಿ ಮಗನ ಬಗ್ಗೆ ಹಾಗೂ ತಂದೆ ಬಗ್ಗೆ ಕೇಳಿದ್ದರು. ತಂದೆ ಹೇಗಿದ್ದಾರೆ, ಮಗ ಹೇಳಿದ್ದಾನೆ , ಶಾಲೆಗೆ ಹೋಗ್ತಿದ್ದಾನಾ ಎಂದು ಕೇಳಿದ್ದರು ಎನ್ನಲಾಗಿದೆ.
ವರದಿ: ಮಾದೇಶ ಸಿಎನ್, ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು
Bangalore [Bangalore],Bangalore,Karnataka













